ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್‍ಗೆ ಜಾಮೀನು
ಬೆಂಗಳೂರು, ಅ.27- ಹುಲಿ ಉಗುರು ಧರಿಸಿದ್ದಾರೆಂಬ ಆರೋಪದ ಮೇರೆಗೆ ಅರಣ್ಯಾಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ಬಿಗ್‍ಬಾಸ್ ಸ್ರ್ಪಧಿ ವರ್ತೂರು ಸಂತೋಷ್ ಹಳ್ಳಿಕಾರ್‍ಗೆ ಜಾಮೀನು ಮಂಜೂರಾಗಿದೆ. 4 ಸಾವಿರ ರೂ. ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಬೆಂಗಳೂರಿನ ಎರಡನೆ ಎಸಿಜೆಎಂ ನ್ಯಾಯಾಲಯ ಆದೇಶಿಸಿ ಜಾಮೀನು ಮಂಜೂರು ಮಾಡಿದೆ.
ಬಿಗ್‍ಬಾಸ್ ಸ್ರ್ಪಧಿಯಾಗಿ ವರ್ತೂರು ಸಂತೋಷ್ ಭಾಗವಹಿಸಿದ್ದರು. ಸಂತೋಷ್ ಹುಲಿ ಉಗುರು ಪೆಂಡೆಂಟ್ ಹೊಂದಿರುವ ಸರ ಧರಿಸಿದ್ದಾರೆಂದು ಅರಣ್ಯಾಧಿಕಾರಿಗಳು ಬಿಗ್‍ಬಾಸ್ ಮನೆಯಿಂದಲೇ ಸಂತೋಷ್ ಅವರನ್ನು ಬಂಧಿಸಿ ಕರೆದೊಯ್ದಿದ್ದರು.
ಪ್ರಧಾನಿ ಮೋದಿಗೆ ಪತ್ರ ಬರೆದ ದೇವೇಗೌಡರು, ವಿಷಯ ಏನು ಗೊತ್ತೇ..?
ಇದೀಗ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಸಂಜೆ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.