ಸಿಎಂಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳ ಪಟ್ಟಿ ಮಾಡಿದ ಬಿಜೆಪಿ
ಬೆಂಗಳೂರು,ನ.27- ತನ್ನಿಂದ ಕೊಡಲು ಅಕ್ಕಿಯೇ ಇಲ್ಲ ಎನ್ನುತ್ತಿರುವ ಎಐಸಿಸಿಯೂ ಕಲೆಕ್ಷನ್ ಆಸೆಗೆ ಟನ್‍ಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ ಎಂದು ಬಿಜೆಪಿ ತೀವ್ರ ವಾಗ್ದಳಿ ನಡೆಸಿದೆ.
ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಸಾಲು ಸಾಲು ಪೋಸ್ಟ್ ಮಾಡಿರುವ ಬಿಜೆಪಿ, ಅಕ್ಕಿ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ, ಕಳ್ಳತನಕ್ಕೇ ಇಳಿದುಬಿಟ್ಟಿದೆ ಎಂದು ಟೀಕಾ ಪ್ರಹಾರ ನಡೆಸಿದೆ.
ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ@siddaramaiahಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು:▪ ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?▪ ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?▪ ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು…
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಇಂಧನ ಇಲಾಖೆ ಮಾತ್ರವಲ್ಲ. ಸಚಿವ ಕೆ.ಹೆಚ್.ಮುನಿಯಪ್ಪ ಅವರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲೂ ಹೆಗ್ಗಣಗಳ ಕಾಟ ಜೋರಾಗಿದೆ. ಲಂಚ ಕೊಡುವುದಕ್ಕಾಗಿಯೇ ಅಕ್ರಮ ಅಕ್ಕಿ ಮಾರಾಟ ಮಾಡುತ್ತಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ ಎಂದು ಹೇಳಿದೆ.
ಮಾ.30ರೊಳಗೆ ಸಿದ್ಧವಾಗಲಿದೆ  ಅಂತಿಮ ಕರಡು : ಅಜಯ್ ಮಿಶ್ರಾ
ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದೆ.