ಟರ್ಮಿನಲ್ ಒಳಗೆ ಪ್ರವೇಶಿಸಿದ್ದ ಮಹಿಳೆ ಬಂಧನ
ಬೆಂಗಳೂರು,ನ.27- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಟಿಕೆಟ್ ತೋರಿಸಿ ಭದ್ರತಾ ನಿಯಂತ್ರಣ ದಾಟಿ ಟರ್ಮಿನಲ್ ಒಳಗೆ ಪ್ರವೇಶಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ. ಹರ್‍ಪೀತ್ ಕೌರ್ ಸೈನಿ ಬಂಧಿತ ಮಹಿಳಾ ಪ್ರಯಾಣಿಕರು. ಇವರ ವಿರುದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿರುತ್ತಾರೆ.
ನ.26ರಂದು ಹರಪೀತ್ ಕೌರ್ ಸೈನಿ ಅವರು ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಬಿಡಲು ಬಂದಿದ್ದರು. ಡಿಪಾರ್ಚರ್ ಗೇಟ್‍ನಲ್ಲಿ ಇ-ಟಿಕೆಟ್ ತೋರಿಸಿ ಟರ್ಮಿನಲ್ ಒಳಗೆ ಕಳುಹಿಸಿ ಒಳಪ್ರವೇಶಿಸಿ ನಂತರ ಹರ್‍ಪೀತ್ ಅವರು ತನ್ನ ಲ್ಯಾಪ್‍ಟಾಪ್‍ನ್ನು ಸಿಟಿಸೈಡ್‍ನಲ್ಲಿ ಮರೆತು ಹೋಗಿರುವುದಾಗಿ ಏರ್‍ಲೈನ್ಸ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಪಿಟಿಬಿಯಿಂದ ಹಿಂತಿರುಗಿ ಚೆಕ್‍ಇನ್ ಕೌಂಟರ್‍ನಲ್ಲಿ ಇಂಡಿಗೋ ಏರ್‍ಲೈನ್ಸ್ ಸಿಬ್ಬಂದಿಯವರು ಹರಪೀತ್ ಸಿಬ್ಬಂದಿಯವರು ಹರ್‍ಪೀತ್ ಅವರ ಬಳಿ ಇದ್ದ ಟಿಕೆಟ್ ಪರಿಶೀಲಿಸಿದಾಗ ನಕಲಿ ಟಿಕೆಟ್ ಎಂಬುದು ಕಂಡುಬಂದಿದೆ. ಆ ಬಗ್ಗೆ ಆ ಮಹಿಳೆಯನ್ನು ವಿಚಾರಿಸಿದಾಗ, ತನ್ನ ಸ್ನೇಹಿತರಾದ ಆಯುಷ್ ಶರ್ಮ ಎಂಬುವರು ಇಪಿಎಸ್‍ಸಿವರೆಗೆ ಬಿಟ್ಟು ಬರುವ ಸಲುವಾಗಿ ಟರ್ಮಿನಲ್ ಒಳಗೆ ಪ್ರವೇಶಿಸಲು ತಾನೇ ಸ್ವತಃ ಇ-ಟಿಕೆಟ್‍ನ್ನು ಎಡಿಟ್ ಮಾಡಿದ್ದಾಗಿ ತಿಳಿಸಿದ್ದಾರೆ.
ನಕಲಿ ಟಿಕೆಟ್ ತೋರಿಸಿ ಭದ್ರತಾ ನಿಯಂತ್ರಣವನ್ನು ದಾಟಿ ಟರ್ಮಿನಲ್ ಒಳ ಪ್ರವೇಶಿಸಿರುವ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಏರ್‍ಲೈನ್ಸ್ ಸಿಬ್ಬಂದಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೆಪೊಲೀಸರು ಮಹಿಳಾ ಪ್ರಯಾಣಿರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.