ಮನೋರಂಜನ್ ಕುಟುಂಬದ ಮೇಲೆ ಐಬಿ ನಿಗಾ
ಮೈಸೂರು, ಡಿ. 16-ಸಂಸತ್ ಕಲಾಪದ ವೇಳೆ ಆತಂಕ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಆರೋಪಿ ಮನೋರಂಜನ್ ಪೋಷಕರು ಮನೆಯಿಂದ ಹೊರ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮನೋರಂಜನ್ ತಂದೆ ತಾಯಿ ಮನೆ ಬಿಟ್ಟು ಹೊರಗಡೆ ಹೋಗದಂತೆ ಐಬಿ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದು, ಹಾಗೆಯೇ ಮನೆಗೆ ಯಾವುದೇ ಸಂಬಂಧಿಕರು ಸದ್ಯದ ಪರಿಸ್ಥಿತಿಯಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ ಮನೆಯಲ್ಲಿರುವ ಯಾವುದೇ ಪತ್ರಿಕೆ ಹಾಗೂ ಪುಸ್ತಕಗಳನ್ನು ನಾವು ಹೇಳುವವವರೆಗೂ ಮಾರಾಟ ಮಾಡದಂತೆ ಮನೋರಂಜನ್ ತಂದೆ-ತಾಯಿಗೆ ಐಬಿ ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ತುರ್ತು ಪರಿಸ್ಥಿತಿ ಇದ್ದು ಹೊರಹೋಗಬೇಕಾದ ಅನಿವಾರ್ಯತೆ ಇದ್ದರೆ ನಮಗೆ ತಿಳಿಸುವಂತೆ ಹಾಗೂ ಅನಾಮಧೇಯ ಕರೆ ಬಂದರೆ ಅದರ ಬಗ್ಗೆ ಮಾಹಿತಿ ನೀಡುವಂತೂ ಅಧಿಕಾರಿಗಳು ಮನೋರಂಜನ್ ಪೋಷಕರಿಗೆ ತಿಳಿಸಿದ್ದಾರೆ.
ರತನ್ ಟಾಟಾಗೆ ಜೀವ ಬೆದರಿಕೆ ಹಾಕಿದ ವ್ಯಕಿ ಸುಳಿವು ಲಭ್ಯ
ಘಟನೆ ಮರುಸೃಷ್ಟಿ:ಆರೋಪಿಗಳು ಸಂಸತ್ ಭವನ ಪ್ರವೇಶಿಸಿದ್ದು ಹೇಗೆ ಎಂಬುದನ್ನು ದೃಢಪಡಿಸಿಕೊಳ್ಳಲು ದೆಹಲಿ ಪೋಲೀಸರು ಈ ಪ್ರಕರಣವನ್ನು ಮರುಸೃಷ್ಟಿಸಲು ಮುಂದಾಗಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಸದ್ಯದಲ್ಲಿಯೇ ಮಹಜರು ಮಾಡಲಿದ್ದಾರೆ. ಲೋಕಸಭ ಗ್ಯಾಲರಿಯಿಂದ ಏಕಾಏಕಿ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ಜಿಗಿದು ಕೋಲಾಹಲ ಸೃಷ್ಟಿಸಿದ ಪ್ರಕರಣದ ತನಿಖೆಯನ್ನು ದೆಹಲಿ ಪೋಲೀಸರು ಚುರುಕುಗೊಳಿಸಿದ್ದಾರೆ.