ನಾಗಮಂಗಲ ಕೋಮುಗಲಭೆಯನ್ನು ಅತ್ಯುಗ್ರವಾಗಿ ಖಂಡಿಸಿದ ಬಿ.ವೈ.ವಿಜಯೇಂದ್ರ
..      
ಬೆಂಗಳೂರು,ಸೆ.12– ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಯ ವೇಳೆ ಕಲ್ಲುತೂರಾಟ ನಡೆಸಿರುವ ಹಿಂದೂ ವಿರೋಧಿ ಮತಾಂಧ ಕಿಡಿಗೇಡಿಗಳ ಅಟ್ಟಹಾಸದಿಂದ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಘಟನೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಅತ್ಯುಗ್ರವಾಗಿ ಖಂಡಿಸುತ್ತೇನೆ. ಈ ಹಿಂದಿನ ವರ್ಷವೂ ಪುಂಡರು ಇದೇ ರೀತಿ ವರ್ತಿಸಿದ್ದ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತೆಯ ಕಟ್ಟೆಚ್ಚರ ವಹಿಸವಲ್ಲಿ ಎಚ್ಚರ ತಪ್ಪಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌‍ ಸರ್ಕಾರದ ಆಡಳಿತ ಅವಧಿಯಲ್ಲಿ ನಮಗೆ ರಕ್ಷಣೆ ಸಿಗುತ್ತದೆ ಎಂಬ ದೃಢನಂಬಿಕೆ ವಿದೋಹಿ ಶಕ್ತಿಗಳು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ರಚೋದನೆಯಾಗುತ್ತಿದೆ, ಜನರ ಧಾರ್ಮಿಕ ಶ್ರದ್ಧೆಯನ್ನು ಘಾಸಿಗೊಳಿಸಲು ಶಾಂತಿಯುತ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಹಿಂದೂ ಸಮುದಾಯವನ್ನು ಪ್ರಚೋದಿಸುವ ಕುಕೃತ್ಯವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಗಮಂಗಲದಲ್ಲಿ ಗಣಪತಿ ವಿಸರ್ಜನೆಯ ವೇಳೆ ಕಲ್ಲುತೂರಾಟ ನಡೆಸಿರುವ ಹಿಂದೂ ವಿರೋಧಿ ಮತಾಂದ ಕಿಡಿಗೇಡಿಗಳ ಅಟ್ಟಹಾಸದಿಂದ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದುಈ ಘಟನೆಯನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ.ಈ ಹಿಂದಿನ ವರ್ಷವೂ ಪುಂಡರು ಇದೇ ರೀತಿ ವರ್ತಿಸಿದ್ದ ಘಟನೆಯ ಹಿನ್ನೆಲೆಯಲ್ಲಿ  ಪೊಲೀಸರು…../EQmoLyzjj4
ಸೌಹಾರ್ದತೆಯ ಸಮಾಜದಲ್ಲಿ ದಳ್ಳುರಿ ಹಚ್ಚಲು ಯತ್ನಿಸುತ್ತಿರುವ, ಹಿಂದೂ ಸಮುದಾಯದ ಆಚಾರ ವಿಚಾರಗಳನ್ನು ದಮನ ಮಾಡುವ ರೀತಿಯಲ್ಲಿ ವರ್ತಿಸಿರುವ ಹಾಗೂ ಭಾರತೀಯ ಪರಂಪರೆಯನ್ನು ಸದಾ ಕಾಲಕ್ಕೂ ಅಪಮಾನಿಸಲು ಯತ್ನಿಸುತ್ತಿರುವ ಉಗ್ರ ಮನಸ್ಥಿತಿಯ ವಿದೋಹಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ನಾಗಮಂಗಲ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ ಹಿಂದೂ ವಿರೋಧಿ ಚಟುವಟಿಕೆಗಳನ್ನು ಸಂಘಟಿಸುತ್ತಿರುವ ದುಷ್ಟ ಶಕ್ತಿಗಳನ್ನು ನಿಗ್ರಹಿಸದೇ ಹೋದರೆ ಮುಂದಾಗುವ ಪರಿಣಾಮಗಳ ಹೊಣೆ ಕಾಂಗ್ರೆಸ್‌‍ ಸರ್ಕಾರವೇ ಹೊರಬೇಕಾಗುತ್ತದೆ. ಕಾಂಗ್ರೆಸ್‌‍ನ ಮತಬ್ಯಾಂಕ್‌ ಆಧಾರಿತ ಪಕ್ಷಪಾತ ನಡೆ ಕರುನಾಡನ್ನು ದಹಿಸುತ್ತಿದೆ ಎಂದು ವಿಜಯೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.