ಕಾಂಗ್ರೆಸ್‍ಗೆ ಈ ಬಾರಿ ಜನ ಶಾಶ್ವತ ಮೋಕ್ಷ ನೀಡುವುದು ಗ್ಯಾರಂಟಿ : ಆರ್.ಅಶೋಕ್
ಬೆಂಗಳೂರು,ಮಾ.26-ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೂ ಪಾಠ ಕಲಿಯದ ಕಾಂಗ್ರೆಸ್‍ಗೆ ಈ ಬಾರಿ ಶಾಶ್ವತವಾದ ಮೋಕ್ಷ ಕಾಣಿಸುವುದು ಕಟ್ಟಿಟ್ಟ ಬುತ್ತಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಿಸಿದ್ದಾರೆ.
ತಮ್ಮ ಅಧಿಕೃತ ಖಾತೆ ಎಕ್ಸ್‍ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಂಸ್ಕೃತಿ ನೋಡಿ. ಮೋದಿ ಮೋದಿ ಅನ್ನುವ ಯುವಕರ ಕಪಾಳಕ್ಕೆ ಹೊಡಿಬೇಕಂತೆ. 2014 ಮತ್ತು 2019ರಲ್ಲಿ ದೇಶದ ಜನರು ಕಾಂಗ್ರೆಸ್ ಪಕ್ಷಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಇನ್ನು ಪಾಠ ಕಲಿತಿಲ್ಲ ಎಂದಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿ ಬಿಡುವುದು ಕಾಂಗ್ರೆಸ್ ನಾಯಕರಿಗೆ ಚಾಳಿ ಆಗಿಬಿಟ್ಟಿದೆ ಎಂದು ಟೀಕಿಸಿದೆ.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಂಸ್ಕೃತಿ ನೋಡಿ. 'ಮೋದಿ ಮೋದಿ' ಅನ್ನುವ ಯುವಕರ ಕಪಾಳಕ್ಕೆ ಹೊಡಿಬೇಕಂತೆ.ಚುನಾವಣೆ ಬಂದಾಗಲೆಲ್ಲಾ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿ ಬಿಡುವುದು ಕಾಂಗ್ರೆಸ್ ನಾಯಕರಿಗೆ ಚಾಳಿ ಆಗಿಬಿಟ್ಟಿದೆ.2014 ಮತ್ತು 2019 ರಲ್ಲಿ ಈ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಕಪಾಳ…../7bFMUR1aFj