ಅಭ್ಯರ್ಥಿ ಆಯ್ಕೆ ಹೈಡ್ರಾಮಾ ಮುಕ್ತಾಯ, ಮತ್ತಷ್ಟು ರಂಗೇರಲಿದೆ ಲೋಕಸಭೆ ಚುನಾವಣೆ
ಬೆಂಗಳೂರು,ಮಾ.30-ಲೋಕಸಭೆಯ 18ನೇ ಅವಧಿಗೆ ನಡೆಯುತ್ತಿರುವ ಚುನಾವಣೆಗಾಗಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ಎಲ್ಲಾ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ಚುನಾವಣಾ ಕಣ ಕಾವೇರಲಾರಂಭಿಸಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಯೊಂದಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಜೆಡಿಎಸ್, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ನಿಲ್ಲಿಸಿದ್ದರೆ, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿ ಇಲ್ಲದೆ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ವಿವಿಧ ಪಕ್ಷಗಳೊಂದಿಗೆ ಇಂಡಿಯಾ ರಾಜಕೀಯ ಕೂಟವನ್ನು ರಚಿಸಿಕೊಂಡಿದೆ. ಆದರೆ ಆ ಪಕ್ಷಗಳಿಂದ ಈವರೆಗೆ ಯಾವುದೇ ಅಭ್ಯರ್ಥಿಗಳು ಕಣದಲ್ಲಿರುವುದು ಕಂಡುಬಂದಿಲ್ಲ.
ನಿನ್ನೆ ಜೆಡಿಎಸ್ ತನ್ನ ಮೂರು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪ್ರಕಟಿಸಿತ್ತು. ಇಂದು ಬೆಳಗ್ಗೆ ಕಾಂಗ್ರೆಸ್ ಕೊನೆಯದಾಗಿ ಕೋಲಾರ ಕ್ಷೇತ್ರಕ್ಕೆ ಕೆ.ವಿ.ಗೌತಮ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಮೂರು ಪಕ್ಷಗಳು ತಮ್ಮ ಹುರಿಯಾಳುಗಳನ್ನು ಅಖಾಡಕ್ಕಿಳಿಸಿವೆ.
ಕಾಂಗ್ರೆಸ್‍ಗೆ 4 ಕ್ಷೇತ್ರಗಳಲ್ಲಿ ಬಂಡಾಯದ ಆತಂಕ ಇದ್ದರೆ ಬಿಜೆಪಿಗೆ 7ರಿಂದ 8 ಕ್ಷೇತ್ರಗಳಲ್ಲಿ ಅಸಮಾಧಾನಿತರ ಕಾವು ಹೆಚ್ಚಾಗಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಏ.4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳುಚಿಕ್ಕೋಡಿ : ಅಣ್ಣಾಸಾಹೇಬ್‍ಜೊಲ್ಲೆ (ಬಿಜೆಪಿ) ಪ್ರಿಯಾಂಕ ಜಾರಕಿಹೊಳ್ಳಿಬೆಳಗಾವಿ  : ಜಗದೀಶ್ ಶೆಟ್ಟರ್(ಬಿಜೆಪಿ) ಮೃಣಾಳ್ ಹೆಬ್ಬಾಳ್ಕರ್ಬಾಗಲಕೋಟೆ  : ಪಿ.ಸಿ.ಗದ್ದೀಗೌಡರ್(ಬಿಜೆಪಿ) ಸಂಯುಕ್ತ.ಎಸ್.ಪಾಟೀಲ್ಬಿಜಾಪುರ :  ರಮೇಶ್ ಜಿಗಜಿಣಗಿ(ಬಿಜೆಪಿ) ಎ.ರಾಜು ಅಲಗೂರುಕಲಬುರಗಿ :  ಉಮೇಶ್ ಜಾಧವ್(ಬಿಜೆಪಿ) ರಾಧಾಕೃಷ್ಣ ದೊಡ್ಡಮನಿರಾಯಚೂರು  : ರಾಜಾ ಅಮರೇಶ್ವರ್ ನಾಯಕ(ಬಿಜೆಪಿ) ಜಿ.ಕುಮಾರ್‍ನಾಯಕ್ಬೀದರ್ :  ಭಗವಂತ ಖೂಬಾ(ಬಿಜೆಪಿ) ಸಾಗರ್ ಖಂಡ್ರೆಕೊಪ್ಪಳ :  ಬಸವರಾಜ್ ಕಾವಟರ್ (ಬಿಜೆಪಿ) ರಾಜಶೇಖರ ಹಿಟ್ನಾಳ್ಬಳ್ಳಾರಿ  : ಬಿ.ಶ್ರೀರಾಮುಲು(ಬಿಜೆಪಿ) ಇ.ತುಕಾರಾಂಹಾವೇರಿ  : ಬಸವರಾಜ ಬೊಮ್ಮಾಯಿ(ಬಿಜೆಪಿ) ಆನಂದಸ್ವಾಮಿ ಗಡ್ಡದೇವರ ಮಠಧಾರವಾಡ  : ಪ್ರಹ್ಲಾದ್ ಜೋಶಿ(ಬಿಜೆಪಿ) ವಿನೋದ್ ಅಸೋಟಿಉತ್ತರಕನ್ನಡ  : ವಿಶ್ವೇಶ್ವರ ಹೆಗಡೆ ಕಾಗೇರಿ(ಬಿಜೆಪಿ) ಅಂಜಲಿ ನಿಂಬಾಳ್ಕರ್ದಾವಣಗೆರೆ  : ಗಾಯತ್ರಿ ಸಿದ್ಧೇಶ್ವರ್ (ಬಿಜೆಪಿ) ಪ್ರಭಾ ಮಲ್ಲಿಕಾರ್ಜುನ್ಶಿವಮೊಗ್ಗ :  ಬಿ.ವೈ.ರಾಘವೇಂದ್ರ(ಬಿಜೆಪಿ) ಗೀತಾ ಶಿವರಾಜ್‍ಕುಮಾರ್ಉಡುಪಿ-ಚಿಕ್ಕಮಗಳೂರು  : ಕೋಟಾ ಶ್ರೀನಿವಾಸಪೂಜಾರಿ(ಬಿಜೆಪಿ) ಜಯಪ್ರಕಾಶ್ ಹೆಗ್ಡೆಹಾಸನ :  ಪ್ರಜ್ವಲ್ ರೇವಣ್ಣ (ಜೆಡಿಎಸ್) ಶ್ರೇಯಸ್ ಪಟೇಲ್ ಗೌಡದಕ್ಷಿಣ ಕನ್ನಡ  : ಬ್ರಿಜೇಶ್ ಚೌಟ(ಬಿಜೆಪಿ) ಪದ್ಮರಾಜ್ಚಿತ್ರದುರ್ಗ  : ಗೋವಿಂದ ಕಾರಜೋಳ(ಬಿಜೆಪಿ) ಬಿ.ಎನ್.ಚಂದ್ರಪ್ಪತುಮಕೂರು  : ವಿ.ಸೋಮಣ್ಣ (ಬಿಜೆಪಿ) ಎಸ್.ಪಿ.ಮುದ್ದಹನುಮೇಗೌಡಮಂಡ್ಯ  : ಎಚ್.ಡಿ.ಕುಮಾರಸ್ವಾಮಿ( ಜೆಡಿಎಸ್) ವೆಂಕಟರಮಣೇ ಗೌಡಮೈಸೂರು  : ಯದುವೀರ್ ಒಡೆಯರ್ (ಬಿಜೆಪಿ) ಎಂ.ಲಕ್ಷ್ಮಣ್ಚಾಮರಾಜನಗರ  : ಎಸ್.ಬಾಲರಾಜ್(ಬಿಜೆಪಿ) ಸುನೀಲ್ ಬೋಸ್ಬೆಂಗಳೂರು ಗ್ರಾ.  : ಡಾ.ಸಿ.ಎನ್.ಮಂಜುನಾಥ್ (ಬಿಜೆಪಿ) ಡಿ.ಕೆ.ಸುರೇಶ್ಬೆಂಗಳೂರು ಉತ್ತರ  : ಶೋಭಾ ಕರಂದ್ಲಾಜೆ(ಬಿಜೆಪಿ) ರಾಜೀವ್ ಗೌಡಬೆಂಗಳೂರು ಕೇಂದ್ರ  : ಪಿ.ಸಿ.ಮೋಹನ್(ಬಿಜೆಪಿ) ಮನ್ಸೂರ್ ಆಲಿಖಾನ್ಬೆಂಗಳೂರು ದಕ್ಷಿಣ  : ತೇಜಸ್ವಿ ಸೂರ್ಯ(ಬಿಜೆಪಿ) ಸೌಮ್ಯ ರೆಡ್ಡಿಚಿಕ್ಕಬಳ್ಳಾಪುರ  : ಡಾ.ಕೆ.ಸುಧಾಕರ್ (ಬಿಜೆಪಿ) ರಕ್ಷಾ ರಾಮಯ್ಯಕೋಲಾರ :   ಎಂ.ಮಲ್ಲೇಶ್ ಬಾಬು( ಜೆಡಿಎಸ್) ಕೆ.ವಿ.ಗೌತಮ್