ಸಾಲುಸಾಲು ರಜೆ : ಹಗಲು ದರೋಡೆಗಿಳಿದ ಖಾಸಗಿ ಬಸ್ ಮಾಲೀಕರು, ಇಲ್ಲಿದೆ ಶಾಕಿಂಗ್ ದರಪಟ್ಟಿ
ಬೆಂಗಳೂರು,ಏ.5-ಸಿಗುವ ಸಾಲು ರಜೆಗಳಿಂದಾಗಿ ಊರಿಗೆ ತೆರಳಿ ಯುಗಾದಿ ಹಬ್ಬ ಆಚರಿಸಲು ತೀರ್ಮಾನಿಸಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಟಿಕೆಟ್ ಬೆಲೆ ಏರಿಕೆ ಶಾಕ್ ನೀಡಿದ್ದಾರೆ.
ಭಾನುವಾರ ಮಾಮೂಲು ರಜೆ ಸೋಮವಾರ ಒಂದು ದಿನ ಕೆಲಸ ಮಾಡಿದರೆ ಮಂಗಳವಾರ ಯುಗಾದಿ ರಜೆ ಬುಧವಾರ ಕಳೆದರೆ ರಂಜಾನ್ ಹಬ್ಬ ಹೀಗಾಗಿ ಸಾಲು ಸಾಲು ರಜೆ ಸಿಗುವುದರಿಂದ ಜನ ಊರಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮಕ್ಕಳ ಎಕ್ಸಾಂ ಮುಗಿದು ಅವರಿಗೂ ರಜೆ ಇರುವುದರಿಂದ ನಾಳೆ ರಾತ್ರಿಯೇ ಕೆಲವರು ಊರಿಗೆ ಹೋಗಲು ತಯಾರಾಗಿದ್ದಾರೆ. ಇನ್ನು ಕೆಲವರು ಸೋಮವಾರ ಮತ್ತು ಬುಧವಾರ ರಜೆ ಹಾಕಿ ಒಂದು ವಾರ ಊರಿನಲ್ಲೇ ಹಬ್ಬ ಮಾಡುತ್ತ ಕಾಲ ಕಳೆಯಲು ನಿರ್ಧರಿಸಿದ್ದಾರೆ.
ಇಂತಹ ಸಮಯವನ್ನೇ ಕಾಯುತ್ತಿದ್ದ ಖಾಸಗಿ ಬಸ್ಗಳ ಮಾಲೀಕರು ಟಿಕೆಟ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ. ಮಾಮೂಲಿ ಬಸ್ ದರದ ದುಪ್ಪಟ್ಟು ಬೆಲೆ ಏರಿಕೆ ಮಾಡಿರುವ ಖಾಸಗಿ ಬಸ್ ಮಾಲಿಕರು ಎಸಿ ಬಸ್ಗಳಿಗೆ ವಿಮಾನಯಾನಕ್ಕಿಂತಲೂ ದುಬಾರಿ ಬೆಲೆ ನಿಗದಿಪಡಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಬೆಂಗಳೂರು-ಶಿವಮೊಗ್ಗ:ಸಾಮಾನ್ಯ ದಿನದದರರೂ.450-ರೂ.600ಇವತ್ತಿನ ಟಿಕೆಟ್ ದರರೂ.950- ರೂ.1250
ಬೆಂಗಳೂರು- ಹುಬ್ಬಳ್ಳಿ:ಸಾಮಾನ್ಯ ದರರೂ.600- ರೂ.1000ಇಂದಿನ ಟಿಕೆಟ್ರೂ.1200-ರೂ.1600
ಬೆಂಗಳೂರು-ಮಂಗಳೂರು:ಸಾಮಾನ್ಯ ದಿನದ ದರರೂ.500- ರೂ.1000ಇಂದಿನ ದರರೂ.1000- ರೂ.1400
ಬೆಂಗಳೂರು-ಕಲಬುರುಗಿ:ಸಾಮಾನ್ಯ ದಿನದ ದರರೂ.900- ರೂ.1300ಇಂದಿನ ದರರೂ.1400-ರೂ.1900
ಬೆಂಗಳೂರು-ಮಡಿಕೇರಿ:ಸಾಮಾನ್ಯ ದಿನದ ದರರೂ.500- ರೂ.600ಇಂದಿನ ದರರೂ.950- ರೂ.1200
ಬೆಂಗಳೂರು – ಉಡುಪಿ:ಸಾಮಾನ್ಯ ದಿನದ ದರರೂ.600- ರೂ.950ಇಂದಿನ ದರರೂ.1700-ರೂ.2200
ಬೆಂಗಳೂರು-ಧಾರವಾಡ:ಸಾಮಾನ್ಯ ದಿನದ ದರರೂ.650- ರೂ.800ಇಂದಿನ ದರರೂ.1350-ರೂ.1750
ಬೆಂಗಳೂರು-ಬೆಳಗಾವಿ:ಸಾಮಾನ್ಯ ದಿನದ ದರರೂ.500 ರೂ.800ಇಂದಿನ ದರರೂ.1300-ರೂ.1800
ಬೆಂಗಳೂರು – ದಾವಣಗೆರೆ:ಸಾಮಾನ್ಯ ದಿನದ ದರರೂ.450 ರೂ.600ಇಂದಿನ ದರರೂ.900-ರೂ.1300
ಬೆಂಗಳೂರು – ಚಿಕ್ಕಮಗಳೂರು:ಸಾಮಾನ್ಯ ದರ ರೂ.550 -600ಇಂದಿನದರರೂ.1100-ರೂ.1300
ಬೆಂಗಳೂರು – ಬೀದರ್:ಸಾಮಾನ್ಯ ದರ ರೂ.850 -1200ಇಂದಿನದರ ರೂ.1600- 1800
ಬೆಂಗಳೂರು – ರಾಯಚೂರುಸಾಮಾನ್ಯ ದರ ರೂ.600 -900ಇಂದಿನ ದರರೂ.1250-ರೂ.1600