ಅಂಜಲಿ ಕೊಲೆ ಆರೋಪಿ ಗಿರೀಶ್‌ ವಿರುದ್ಧ ಮತ್ತೊಂದು ಪ್ರಕರಣ ದಾಖಲು
ಹುಬ್ಬಳ್ಳಿ, ಮೇ 18-ಅಂಜಲಿ ಕೊಲೆ ಆರೋಪಿ ಗಿರೀಶ್‌ ವಿರುದ್ಧ ಬೆಂಡಿಗೇರಿ ಪೊಲೀಸ್‌‍ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.  ಮಗಳಿಗೆ ಕಿರುಕುಳ ಕೊಟ್ಟು, ಚಿನ್ನಾಭರಣಗಳನ್ನು ಪಡೆದುಕೊಂಡಿದ್ದಾನೆ ಎಂದು ಅಪ್ರಾಪ್ತ ಬಾಲಕಿಯ ಪೋಷಕರು ಆರೋಪಿ ಗಿರೀಶ್‌ ವಿರುದ್ಧ ದೂರು ನೀಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಹೆಸರಲ್ಲಿ ವಂಚಿಸಿ ಮೋಸ ಮಾಡಿದ್ದ ಹಂತಕ ಗಿರೀಶ ಐದುವರೆ ತೊಲೆ ಬಂಗಾರ ಪಡೆದು ಮೋಸ ಮಾಡಿದ್ದು ಆತನಿಂದ ಒಡವೆಗಳನ್ನು ಕೊಡಿಸಬೇಕು ಹಾಗೂ ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡೊರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೇ. 15ರಂದು ನಸುಕಿನ ಜಾವ ಮನೆಗೆ ನುಗ್ಗಿ ಅಂಜಲಿಗೆೆ ಆರೋಪಿ ಗಿರೀಶ್‌ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆಗೈದಿದ್ದನು.