ಪಾಲಿಕೆ ಸದಸ್ಯನ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ 8 ವರ್ಷದ ನಂತರ ಸೆರೆ
ಹುಬ್ಬಳ್ಳಿ,ಮೇ.30-ಪಾಲಿಕೆ ಸದಸ್ಯನ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿ 8 ವರ್ಷಗಳ ನಂತರ ಶಹರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆ ಹುಬ್ಬಳ್ಳಿ-ಧಾರವಾಡದ ಪಾಲಿಕೆ ಸದಸ್ಯರಾಗಿದ್ದ ಆರಿಫ್‌ ಭದ್ರಾಪೂರ್‌ ಅವರ ಮೇಲೆ ಹಲ್ಲೆಗೈದು ಕೊಲೆಗೆ ಯ್ನಿಸಿ ಪರಾರಿಯಾದ ಸೈಫ್‌ ಅಲಿ ಬಾಂಬೆ ಬಂಧಿತ ಆರೋಪಿ.
ಕಳೆದ 2016ರಲ್ಲಿ ಗಣೇಶ್‌ ಪೇಟ್‌ ನಿವಾಸಿ ಆರಿಫ್‌ ಬದ್ರಾಪುರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಸೈಫ್‌ ಅಲಿ ಪರಾರಿಯಾಗಿದ್ದ ಅದಷ್ಟವಶಾತ್‌‍, ಆರಿಫ್‌ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಘಟನೆ ಕುರಿತು ಶಹರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸೈಫ್‌‍ನನ್ನು ಎಂಟು ವರ್ಷಗಳ ಬಳಿಕ ಹುಬ್ಬಳ್ಳಿಯ ನವನಗರದಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್ಸ್‌‍ಪೆಕ್ಟರ್‌ ರಫಿಕ್‌ ತಶೀಲ್ದಾರ್‌ ನೇತತ್ವದ ತಂಡ ಬಂಧಿಸಿದ್ದಾರೆ.