30 ಮಂಗಗಳನ್ನು ಕೊಂದ ಮನುಷ್ಯತ್ವ ಮರೆತ ಮಾನವರು
ಚಿಕ್ಕಮಗಳೂರು, ಜೂ.8-ಬಾಳೆಹಣ್ಣಿಗೆ ಮತ್ತು ಬರುವ ಔಷಧವಿಟ್ಟು 30 ಮಂಗಗಳನ್ನು ಕೊಂದ ಅಮಾನುಷ ಘಟನೆ ಎನ್‌.ಆರ್‌.ಪುರ ತಾಲೂಕಿನ ದ್ಯಾವಣ ಬಳಿ ನಡೆದಿದೆ.ಒಟ್ಟು 16 ಗಂಡು, 14 ಹೆಣ್ಣು, 4 ಮರಿಗಳನ್ನು ಕೊಂದಿದ್ದು, ರಸ್ತೆ ಬದಿಗೆ ತಂದು ಪಾಪಿಗಳು ಎಸೆದು ಹೋಗಿದ್ದಾರೆ.
ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. 30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯವಾಗಿದ್ದು, ರಕ್ತ ಸುರಿದು ಮೃತಪಟ್ಟಿವೆ.ಸ್ಥಳಕ್ಕೆ ಡಿ.ಎಫ್‌.ಓ, ಆರ್‌.ಎಫ್‌.ಓ, ಪಿ.ಎಸ್‌‍.ಐ. ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ, ಆಶಾಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಗಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಕಿಡಿ ಕಾರಿದ್ದಾರೆ.