ಮೊದಲ ನಿರ್ಧಾರದಲ್ಲಿ ರೈತರ ಬಗ್ಗೆ ಬದ್ಧತೆ ಪ್ರದರ್ಶಿಸಿದ ಪ್ರಧಾನಿ ಮೋದಿಗೆ ಹೆಚ್‌ಡಿಕೆ ಧನ್ಯವಾದ
ಬೆಂಗಳೂರು,ಜೂ.10-ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಅನ್ನದಾತರ ಪರವಾಗಿ ಮಹತ್ವದ ನಿರ್ಧಾರ ಕೈಗೊಳ್ಳುವುದಕ್ಕೆ ಸಮಸ್ತ ರೈತಬಂಧುಗಳ ಪರವಾಗಿ ಧನ್ಯವಾದಗಳನ್ನು ಕೇಂದ್ರದ ನೂತನ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸಲ್ಲಿಸಿದ್ದಾರೆ.
3ನೇ ಅವಧಿಗೆ ಭಾರತದ ಪ್ರಧಾನಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದ ಮರುದಿನವೇ ಅನ್ನದಾತರ ಪರವಾಗಿ ಮಹತ್ವದ ನಿರ್ಧಾರ ಕೈಗೊಂಡ ಸನ್ಮಾನ್ಯ ಶ್ರೀ@narendramodiಅವರಿಗೆ ಸಮಸ್ತ ರೈತ ಬಂಧುಗಳ ಪರವಾಗಿ ಅನಂತ ಧನ್ಯವಾದಗಳು. @'         3rd     …../
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಪ್ರಧಾನಮಂತ್ರಿಗಳ ಕಿಸಾನ್‌ ನಿಧಿಯಿಂದ 9.3 ಕೋಟಿ ರೈತರುಗಳಿಗೆ 20 ಸಾವಿರ ಕೋಟಿ ರೂ.ಗಳ ಬಿಡುಗಡೆಗೆ ತೀರ್ಮಾನ ಕೈಗೊಂಡಿದ್ದಾರೆ. ಇದು ಎನ್‌ಡಿಎ ಸರ್ಕಾರಕ್ಕೆ ನಮ್ಮ ರೈತರ ಬಗ್ಗೆ ಇರುವ ಬದ್ಧತೆಯನ್ನು ತೋರುತ್ತದೆ ಎಂದು ಹೇಳಿದ್ದಾರೆ.