ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು ಚೆಂಗುಡಿಗಳಿಗೆ ಪನ್ನೀರ ಚಿಮುಕಿಸುತ ಮೂಡಣದ ಹೊಸತಿಲಿಗೆ ಹೊಂಬಣ್ಣ ನೀರಿನಲಿ ಸಾರಣೆಯ ಕಾರಣೆಯಗೈದು, ಕುಂಕುಮದಿಂದ ಬೊಟ್ಟಿಟ್ಟು ತಳತ್ಥಳಿಸಿ, ಸಂತಸ ಶುಭೋದಯದ ಝಣಿಝಣಿರು ಚಕಮಕಿತ ಭೂನಭೋರಂಗದಲಿ ಉನ್ಮತ್ತರಾಗಿಣಿಯು, ಜಗದುದಯ ಕಾರಿಣಿಯು ಚೆಲುವೆ, ಶುಭದರ್ಶಿನಿಯು-ಹೋ! ನರ್ತಿಸಿದಳುಷೆಯು. ***** ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] ನಮ್ಮ ಮನೆಯ ಕನ್ನಡಿ ಯಲಿ ಮಾತ್ರ ನನಗೆ ನಾ ಚಂದ ಉಳಿದಲ್ಲಿ ಪ್ರೇತ ನರಪೇತಲ ಊದಿಕೊಂಡ ಗಲ್ಲ ಚಿಂತೆ ತುರಿಸುವ ಮೂಗು ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ ನ ರೂಪ […] ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…