2d440d4664219af06c0dc3ac8c4f890da24082b50797c199d6f7adff749f1f45
Browse files- eesanje/url_46_111_4.txt +7 -0
- eesanje/url_46_111_5.txt +5 -0
- eesanje/url_46_111_6.txt +4 -0
- eesanje/url_46_111_7.txt +11 -0
- eesanje/url_46_111_8.txt +7 -0
- eesanje/url_46_111_9.txt +10 -0
- eesanje/url_46_112_1.txt +4 -0
- eesanje/url_46_112_10.txt +6 -0
- eesanje/url_46_112_11.txt +7 -0
- eesanje/url_46_112_12.txt +4 -0
- eesanje/url_46_112_2.txt +6 -0
- eesanje/url_46_112_3.txt +5 -0
- eesanje/url_46_112_4.txt +11 -0
- eesanje/url_46_112_5.txt +10 -0
- eesanje/url_46_112_6.txt +7 -0
- eesanje/url_46_112_7.txt +8 -0
- eesanje/url_46_112_8.txt +7 -0
- eesanje/url_46_112_9.txt +7 -0
- eesanje/url_46_113_1.txt +6 -0
- eesanje/url_46_113_10.txt +5 -0
- eesanje/url_46_113_11.txt +8 -0
- eesanje/url_46_113_12.txt +7 -0
- eesanje/url_46_113_2.txt +12 -0
- eesanje/url_46_113_3.txt +6 -0
- eesanje/url_46_113_4.txt +8 -0
- eesanje/url_46_113_5.txt +6 -0
- eesanje/url_46_113_6.txt +6 -0
- eesanje/url_46_113_7.txt +9 -0
- eesanje/url_46_113_8.txt +4 -0
- eesanje/url_46_113_9.txt +5 -0
- eesanje/url_46_114_1.txt +5 -0
- eesanje/url_46_114_10.txt +7 -0
- eesanje/url_46_114_11.txt +9 -0
- eesanje/url_46_114_12.txt +11 -0
- eesanje/url_46_114_2.txt +11 -0
- eesanje/url_46_114_3.txt +12 -0
- eesanje/url_46_114_4.txt +4 -0
- eesanje/url_46_114_5.txt +6 -0
- eesanje/url_46_114_6.txt +5 -0
- eesanje/url_46_114_7.txt +4 -0
- eesanje/url_46_114_8.txt +3 -0
- eesanje/url_46_114_9.txt +8 -0
- eesanje/url_46_115_1.txt +9 -0
- eesanje/url_46_115_10.txt +5 -0
- eesanje/url_46_115_11.txt +7 -0
- eesanje/url_46_115_12.txt +3 -0
- eesanje/url_46_115_2.txt +7 -0
- eesanje/url_46_115_3.txt +9 -0
- eesanje/url_46_115_4.txt +8 -0
- eesanje/url_46_115_5.txt +6 -0
eesanje/url_46_111_4.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕಲುಷಿತ ನೀರು ಪ್ರಕರಣ : ಸತ್ಯ ಮರೆಮಾಚುತ್ತಿದ್ದಾರಾ ಅಧಿಕಾರಿಗಳು..?
|
| 2 |
+
ಮಧುಗಿರಿ,ಜೂ.13-ಕಲುಷಿತ ನೀರು ಕುಡಿದು ಸುಮಾರು 54 ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿರುವ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಮೂರನೇ ದಿನವಾದ ನಿನ್ನೆ ಮತ್ತೆ ಇಬ್ಬರು ಮೃತ ಪಟ್ಟಿದ್ದು, ಅಧಿಕಾರಿಗಳು ಸತ್ಯವನ್ನು ಮರೆಮಾಚುತ್ತಿದ್ದಾರಾ..? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
|
| 3 |
+
ಚಿಕ್ಕದಾಸಪ್ಪ ಕಲುಷಿತ ನೀರು ಕುಡಿದು ಅಸ್ವಸ್ಥರಾದ ಹಿನ್ನೆಲೆಯಲ್ಲಿ ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.
|
| 4 |
+
ಚನ್ನೇನಹಳ್ಳಿ ಗ್ರಾಮದ ಚಿಕ್ಕದಾಸಪ್ಪ(74), ಮೀನಾಕ್ಷಿ(3) ಮೃತಪಟ್ಟವರು.ಅದೇ ಗ್ರಾಮದ ಬಾಲಕಿ ಮೀನಾಕ್ಷಿ(3) ಸಹ ವಾಂತಿ ಬೇಧಿಯಿಂದ ನರಳುತ್ತಿದ್ದು, ಚಿಕಿತ್ಸೆಗಾಗಿ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
|
| 5 |
+
ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿ ಮಲಗಿದ್ದಾಗ ಏಕಾಏಕಿ ಕೆಮು ಕಾಣಿಸಿಕೊಂಡಿದ್ದು, ಪೋಷಕರು ಬಾಲಕಿಯನ್ನು ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವಾಗ ಬಾಲಕಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.
|
| 6 |
+
ಗ್ರಾಮದ ಹನುಮಕ್ಕ (86) ಒಂದು ವಾರದ ಹಿಂದೆ ಆಕಸಿಕವಾಗಿ ಬಿದ್ದಿದ್ದರು. ನಾಗಪ್ಪ (95) ಹದಿನೈದು ದಿನಗಳಿಂದ ಅನಾರೋಗ್ಯ ಬಳಲುತ್ತಿದ್ದರು. ನಾಗಮ (95) ವಯೋ ಸಹಜ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾರೆಯೇ ಹೊರತು ಕಲುಷಿತ ನೀರಿನ ಸೇವನೆಯಿಂದಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದರು. ನಿನ್ನೆ ಮತ್ತೆ ಇಬ್ಬರು ಮೃತಪಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
|
| 7 |
+
ಮತ್ತೊಬ್ಬ ವ್ಯಕ್ತಿ ಪೆದ್ದಣ್ಣ(74) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 3 ವರ್ಷದ ಬಾಲಕಿ ಮೀನಾಕ್ಷಿ ಸೇರಿದಂತೆ ನಿನ್ನೆ ಇಬ್ಬರು ಮೃತಪಟ್ಟಿದ್ದು, ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಕಲುಷಿತ ನೀರು ಸೇವನೆಯಿಂದ ವಾಂತಿ ಮತ್ತು ಬೇಧಿಯಾಗಿ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಮೃತರ ಶವಪರೀಕ್ಷೆ ನಡೆಸಿದರೆ ಘಟನೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬಹುದು. ಈಗಾಗಲೇ ನೀರಿನ ಸ್ಯಾಂಪಲ್ ಅನ್ನು ಲ್ಯಾಬ್ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.
|
eesanje/url_46_111_5.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ರಸಗೊಬ್ಬರ, ಬಿತ್ತನೆ ಬೀಜಗಳಿಗೆ ಹಿಂದಿನ ಬೆಲೆ ನಿಗದಿಪಡಿಸಿ ರೈತರ ಅಲೆದಾಟ ತಪ್ಪಿಸಿ : ವಿಜಯೇಂದ್ರ ಮನವಿ
|
| 2 |
+
ಬೆಂಗಳೂರು,ಜೂ.13– ಈಗಲಾದರೂ ಬಿತ್ತನೆ ಬೀಜಗಳ ಬೆಲೆ ಈ ಹಿಂದಿನಂತೆ ನಿಗಧಿಪಡಿಸಿ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜರೂರು ಕ್ರಮ ವಹಿಸಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
|
| 3 |
+
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಡಿನ ರೈತರ ಕುರಿತು ಕಿಂಚಿತ್ತೂ ಕಾಳಜಿ ತೋರದ ರಾಜ್ಯದ ಸರ್ಕಾರದಿಂದ ನಿತ್ಯವೂ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
|
| 4 |
+
ಬರದಿಂದ ಕಂಗೆಟ್ಟಿದ್ದ ರೈತರಿಗೆ ಬರ ಪರಿಹಾರ ನೀಡದ ಈ ಸರ್ಕಾರ ಇದೀಗ ವರುಣನ ಆಗಮನದಿಂದ ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಬಿತ್ತನೆ ಬೀಜಗಳ ಬೆಲೆ ಏರಿಸಿ ಅನ್ನದಾತರ ಮೇಲೆ ಬರೆ ಎಳೆದಿದ್ದಲ್ಲದೇ ಬಿತ್ತನೆಗೆ ಅಗತ್ಯವಿದ್ದ ರಸ ಗೊಬ್ಬರ ಸಂಗ್ರಹದಲ್ಲಿಯೂ ವಿಫಲವಾಗಿ ರೈತರಿಗೆ ಅಲೆದಾಟದ ಭಾಗ್ಯ ಕರುಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
|
| 5 |
+
ಸದ್ಯ ಈಗಲಾದರೂ ಬಿತ್ತನೆ ಬೀಜಗಳ ಬೆಲೆ ಈ ಹಿಂದಿನ ಬೆಲೆಯನ್ನೇ ನಿಗಧಿಪಡಿಸಿ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದ್ದಾರೆ.
|
eesanje/url_46_111_6.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
‘ಡಿ’ಗ್ಯಾಂಗ್ ಇರುವ ಅನ್ನಪೂರ್ಣೇಶ್ವರಿನಗರ ಠಾಣೆ ಬಳಿ ನಿಷೇಧಾಜ್ಞೆ ಜಾರಿ
|
| 2 |
+
ಬೆಂಗಳೂರು,ಜೂ.13-ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಇರಿಸಿ ಸಂಪೂರ್ಣ ತನಿಖೆ ನಡೆಸುತ್ತಿದ್ದು, ಠಾಣೆ ಬಳಿ ಗುಂಪು ಸೇರುವುದನ್ನು ನಿಯಂತ್ರಿಸುವ ಸಲುವಾಗಿ ಠಾಣೆ ಸುತ್ತ 200 ಮೀಟರ್ ಪ್ರದೇಶದಲ್ಲಿ ಇಂದಿನಿಂದ ಐದು ದಿನಗಳ ಕಾಲ ಪ್ರತಿಬಂಧ ಕಾಯ್ದೆ ವಿಧಿಸಿ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಆದೇಶಿಸಿದ್ದಾರೆ.
|
| 3 |
+
ಕಾನೂನುಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರಬಾರು, ಮೆರವಣಿಗೆ ಮತ್ತು ಸಭೆಗಳನ್ನು ನಡೆಸಬಾರದು, ದೊಣ್ಣೆ, ಕತ್ತಿ ಸೇರಿದಂತೆ ಯಾವುದೇ ಮಾರಕಾಸ್ತ್ರಗಳು ಅಥವಾ ದೈಹಿಕ ಹಿಂಸೆ ಮಾಡುವ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
|
| 4 |
+
ಯಾವುದೇ ಸ್ಫೋಟಕ ವಸ್ತು ಸಿಡಿಸುವುದು, ಕಲ್ಲು ಕ್ಷಿಪಣಿ ಎಸೆಯುವ ಸಾಧನಗಳ ಅಥವಾ ಉಪಕರಣಗಳ ಸಾಗಾಟ ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ. ವ್ಯಕ್ತಿ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದನ್ನು ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಭಿತ್ತಿಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿ ಆಯುಕ್ತರು ಆದೇಶಿಸಿದ್ದಾರೆ.ನಟ ದರ್ಶನ್ ಸೇರಿದಂತೆ ಕೆಲವು ಆರೋಪಿಗಳನ್ನು ಈ ಠಾಣೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ.
|
eesanje/url_46_111_7.txt
ADDED
|
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಸಿಎಂ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ ಹಿಡಿದಿದೆ : ಆರ್.ಅಶೋಕ್
|
| 2 |
+
ಬೆಂಗಳೂರು,ಜೂ.13-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಿಪ್ಪು ದೆವ್ವ ಹಿಡಿದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಇಂದು ವಾಗ್ದಾಳಿ ನಡೆಸಿದ್ದಾರೆ.
|
| 3 |
+
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿರಂತರವಾಗಿ ಹಲ್ಲೆ ಪ್ರಕರಣಗಳು ಆಗುತ್ತಿದೆ. ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಅಂದರೆ ಹಲ್ಲೆ ನಡೆಯುತ್ತದೆ. ಮಂಗಳೂರಿನಲ್ಲಿ ಹಲ್ಲೆ ನಡೆದಿದೆ. ಚಾಕು ಇರಿತವಾಗಿದೆ. ಈ ಗಲಾಟೆಗಳು ಕಾಂಗ್ರೆಸ್ ಸರ್ಕಾರ ಬಂದ ಮೇಲೆಯೇ ಆಗುತ್ತಿವೆ ಎಂದರು.
|
| 4 |
+
ಭಾರತ್ ಮಾತಾ ಕೀ ಜೈ ಎನ್ನುವುದಕ್ಕೆ ಸಾಕ್ಷಿಗಳಿದೆ. ಡಿಕೆಶಿ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಮುಸ್ಲಿಂರ ಸರ್ಕಾರ ಅಂದಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟಕ್ಕೆ ಬ್ರದರ್ಸ್ ಅಂದರು. ನಾಳೆ ಸಭೆ ಮಾಡುತ್ತೇವೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರುತ್ತಿದ್ದೇವೆ. ಹೋರಾಟದ ರೂಪುರೇಷೆ ತೀರ್ಮಾನ ಮಾಡುತ್ತೇವೆ. ಇದೊಂದು ತಾಲಿಬಾನ್ ಸರ್ಕಾರ ಆಗಿದೆ. ಈ ರೀತಿ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡ ಸರ್ಕಾರ ಇದು ಎಂದು ಕಿಡಿಕಾರಿದರು.
|
| 5 |
+
ಅಶೋಕ್ ಕಿಡಿ: ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಲು ಸೂಚನೆ ನೀಡಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಕ್ರಮಕ್ಕೆ ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ. ಬಿ.ದಯಾನಂದ್ ಯಾರನ್ನು ಮೆಚ್ಚಿಸಲು ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಾರೆ. ಠಾಣೆಯ 200 ಸುತ್ತಮುತ್ತ 144 ಸೆಕ್ಷನ್ ಹಾಕಲು ಇವರಿಗೆ ಅಧಿಕಾರವಿದೆಯೇ? ಮೊದಲು ದಯಾನಂದ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
|
| 6 |
+
ನಾನು ಕೂಡ ಗೃಹಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಎಂಥದ್ದೇ ಪ್ರಕರಣ ನಡೆದರೂ ಠಾಣೆಗೆ ಶಾಮಿಯಾನ ಹಾಕಲು ಅಧಿಕಾರಿಗಳಿಗೆ ಸೂಚಿಸಿರಲಿಲ್ಲ. ಇದಕ್ಕೆ ಸರ್ಕಾರ ಅನುಮತಿ ನೀಡಿದೆಯೇ ಇಲ್ಲವೇ ಪೊಲೀಸರು ಸ್ವಯಂಪ್ರೇರಿತರಾಗಿ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ದಯಾನಂದ್ ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
|
| 7 |
+
ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಸಂವಿಧಾನವೇ ಹೇಳುತ್ತದೆ. ಠಾಣೆಗೆ ಶಾಮಿಯಾನ ಹಾಕಿರುವ ಉದ್ದೇಶವೇ ದರ್ಶನ್ ಪ್ರಕರಣವನ್ನು ಮುಚ್ಚಿ ಹಾಕಲು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ತಮ ಪಕ್ಷದ ಪರವಾಗಿ ಪ್ರಚಾರ ನಡೆಸಿದವರನ್ನು ರಕ್ಷಣೆ ಮಾಡಲು ಹೊರಟಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದರು.
|
| 8 |
+
ನಟ ದರ್ಶನ್ ಅವನ್ನು ಸಿನಿಮಾದಿಂದ ದೂರ ಇಡಬೇಕು ಎಂಬ ಚರ್ಚೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಫಿಲಂಚೇಂಬರ್ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸತ್ಯಾಸತ್ಯಾತೆ ಹೊರಗೆ ಬರಲಿ. ಬಳಿಕ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
|
| 9 |
+
ಕೊಲೆಯಾದವನು ರೌಡಿಶೀಟರ್ ಅಲ್ಲ. ಯಾವುದೇ ಕ್ರಿಮಿನಲ್ ಚಟುವಟಿಕೆಯ ಹಿನ್ನೆಲೆಯವನ್ನಲ್ಲ. ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಇದು ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಬೇಸರ ವ್ಯಕ್ತಪಡಿಸಿದರು.
|
| 10 |
+
ಸರ್ಕಾರ ಮಾನವೀಯತೆ ದೃಷ್ಟಿಯಿಂದ ಸಹಾಯ ಮಾಡಬೇಕು. ನಮ ಮಗನಿಗೆ ಯಾರು ಗತಿ? ಎಂದು ಮೃತನ ಪತ್ನಿ ಕೇಳುತ್ತಿದ್ದಾರೆ. ಆಕೆ ಗರ್ಭಿಣಿಯಾಗಿದ್ದು, ಇಂಥ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಂಡಿರುವುದು ನೋಡಿದರೆ ಕರುಳು ಕಿತ್ತುಬರುತ್ತಿದೆ ಎಂದು ವಿಷಾದಿಸಿದರು.
|
| 11 |
+
ಕೆಲ ಜನಪ್ರತಿನಿಧಿಗಳಿಂದ ದರ್ಶನ್ ಬಿಡಿ ಎಂಬ ಒತ್ತಡ ಕೇಳಿಬರುತ್ತಿದೆ. ಗೃಹ ಸಚಿವರು ಹಾಗೇನೂ ಇಲ್ಲ ಎಂದಿದ್ದಾರೆ. ಇಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಬಿಡಿ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
|
eesanje/url_46_111_8.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಪೋಕ್ಸೊ ಪ್ರಕರಣ ; ಬಿಎಸ್ವೈ ಬಂಧನದ ಕುರಿತು ಗೃಹಸಚಿವ ಪರಮೇಶ್ವರ್ ಹೇಳಿದ್ದೇನು..?
|
| 2 |
+
ತುಮಕೂರು,ಜೂ.13-ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರಣೆ ನಡೆಯಲಿದ್ದು, ಅಗತ್ಯವಿದ್ದರೆ ಬಂಧಿಸುವ ಬಗ್ಗೆ ಸಿಐಡಿ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
|
| 3 |
+
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಗೆ ಇರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಅವರು ಬಂದು ತಮ ಹೇಳಿಕೆ ದಾಖಲಿಸಬೇಕಿದೆ ಎಂದರು.ಪ್ರಕರಣದಲ್ಲಿ 15ನೇ ತಾರೀಖಿನೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಅದಕ್ಕೂ ಮುನ್ನ ಅಗತ್ಯವಿರುವ ಪ್ರಕ್ರಿಯೆಗಳನ್ನು ಪಾಲಿಸಬೇಕಾಗುತ್ತದೆ. ಹೇಳಿಕೆ ಪಡೆಯುವುದು, ಹಾಜರುಪಡಿಸುವುದು ಸೇರಿದಂತೆ ಇತರ ಕ್ರಮಗಳಾಗುತ್ತವೆ ಎಂದು ಹೇಳಿದರು.
|
| 4 |
+
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ಯಡಿಯೂರಪ್ಪ ಅವರನ್ನು ಬಂಧಿಸಬೇಕೋ? ಬೇಡವೋ? ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಗತ್ಯವಿದ್ದರೆ ಬಂಧಿಸುತ್ತಾರೆ. ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದರು.
|
| 5 |
+
ಬೆಂಗಳೂರಿನಲ್ಲಿ ದರ್ಶನ್ ಪ್ರಕರಣದ ವರದಿ ಮಾಡುತ್ತಿದ್ದ ಮಾಧ್ಯಮದವರ ಮೇಲೆ ಎಸಿಪಿ ಭರತರೆಡ್ಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಒಂದು ವೇಳೆ ಹಲ್ಲೆ ಮಾಡಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
|
| 6 |
+
ಪೊಲೀಸ್ ಇಲಾಖೆಯಲ್ಲಿ ಯಾರಾದರೂ ಲೋಪವೆಸಗಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ ಪರಮೇಶ್ವರ್, ತಪ್ಪುಗಳು ಕಂಡುಬಂದರೆ ಅಮಾನತುಗೊಳಿಸುವುದು, ವಿಚಾರಣೆ ನಡೆಸುವುದು, ಕೇಸು ದಾಖಲಿಸುವ ಕ್ರಮಗಳನ್ನು ನಿಯಮಾನುಸಾರ ಮಾಡಲಾಗುವುದು ಎಂದು ಕುಣಿಗಲ್ನಲ್ಲಿ ವರದಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದರು.
|
| 7 |
+
ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಆಂಧ್ರ ಪ್ರದೇಶದಲ್ಲಿ ಒಬ್ಬರನ್ನು ಬಂಧಿಸಿದ್ದಾರೆ. ಉಳಿದಂತೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
|
eesanje/url_46_111_9.txt
ADDED
|
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 4 ಮಂದಿ ಬಲಿ
|
| 2 |
+
ಬೆಂಗಳೂರು,ಜೂ.13-ಕಲುಷಿತ ನೀರಿನ ಪ್ರಕರಣದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಆಯಾ ಜಿಲ್ಲೆಗಳ ಜಿಲ್ಲಾಡಳಿತವನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ ಬಳಿಕವೂ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರು ಮಲಿನಗೊಂಡು 4ಕ್ಕೂ ಹೆಚ್ಚು ಮಂದಿ ಜೀವಹಾನಿಯಾಗಿರುವ ಪ್ರಕರಣ ವರದಿಯಾಗಿದೆ.
|
| 3 |
+
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮಧುಗಿರಿ, ಕೊರಟಗೆರೆ, ತುಮಕೂರು ಹಾಗೂ ಬೆಂಗಳೂರಿನ ವಿವಿಧೆಡೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ನಾಲ್ವರ ಜೀವಹಾನಿಯಾಗಿದೆ ಎಂದು ಹೇಳಲಾಗಿದೆ.
|
| 4 |
+
ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಜೆಸಿಬಿಯಲ್ಲಿ ಕೆಲಸ ಮಾಡುವಾಗ ಕುಡಿಯುವ ನೀರಿನ ಹಾಗೂ ತ್ಯಾಜ್ಯನೀರು ಹರಿದುಹೋಗುವ ಪೈಪ್ಗಳು ಹಾನಿಗೊಂಡಿವೆ.
|
| 5 |
+
ಈ ಸಂದರ್ಭದಲ್ಲಿ ಕಲುಷಿತ ನೀರು ಕುಡಿಯುವ ನೀರಿಗೆ ಮಿಶ್ರಣಗೊಂಡಿದೆ ಎಂದು ಹೇಳಲಾಗಿದೆ. ಚಿನ್ನೇನಹಳ್ಳಿಯಲ್ಲಿ ಜಾತ್ರೆಯ ಸಂಭ್ರಮವಿದ್ದು, ಕಲುಷಿತ ನೀರಿನಿಂದಾಗಿ 100 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ವಾಂತಿ-ಬೇಧಿಯಿಂದ ಬಳಲುತ್ತಿದ್ದವರ ಪೈಕಿ ಬಹಳಷ್ಟು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
|
| 6 |
+
ಮೂರು ದಿನಗಳ ಹಿಂದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬೇರೆ ಬೇರೆ ಕಡೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರೆಸಿದೆ.ಇಂದು ಬೆಳಿಗ್ಗೆ ತುಮಕೂರು ಆಸ್ಪತ್ರೆಯಲ್ಲಿ ಚಿಕ್ಕದಾಸಪ್ಪ (76), ಪೆದ್ದಣ್ಣ (75) ಎಂಬುವವರು ಮೃತಪಟ್ಟಿದ್ದಾರೆ.
|
| 7 |
+
ಬಾಲಕಿಯೊಬ್ಬಳು ಮಧುಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
|
| 8 |
+
ತುಮಕೂರು ವರದಿ :ಜಿಲ್ಲಾ ಉಸ್ತುವಾರಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಪ್ರಕರಣದ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿ ಚಿಕ್ಕದಾಸಪ್ಪ ಮತ್ತು ಪೆದ್ದಣ್ಣ ಅವರು ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಾಗಿರುವ ಜೀವಹಾನಿಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.
|
| 9 |
+
ಕುಡಿಯುವ ನೀರಿನ ವ್ಯವಸ್ಥೆಗೆ ಕಲುಷಿತ ನೀರು ಮಿಶ್ರಣಗೊಂಡಿದ್ದರಿಂದಾಗಿ ದುರಂತ ಸಂಭವಿಸಿದೆ. ಕರ್ತವ್ಯ ನಿರ್ಲಕ್ಷ್ಯಕ್ಕೆ ಸಂಬಂಧಪಟ್ಟಂತೆ ಪಿಡಿಒ ಹಾಗೂ ನೀರು ಸರಬರಾಜು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತಾವು ನಾಳೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದು, ಇಡೀ ಜಿಲ್ಲೆಯ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
|
| 10 |
+
ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಚಿನ್ನೇನಹಳ್ಳಿ ಪ್ರಕರಣದಲ್ಲಿ ಚಿಕ್ಕ ಮಕ್ಕಳು, ಶಾಲೆಗೆ ಹೋಗುವ ಮಕ್ಕಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗುತಿದ್ದು ಪೂರ್ತಿ ಗುಣಮುಖರಾದ ಬಳಿಕ ಮನೆಗೆ ಕಳುಹಿಸಲಾಗುವುದು ಎಂದರು.
|
eesanje/url_46_112_1.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
ಭವಾನಿ ರೇವಣ್ಣ ಕಾರು ಚಾಲಕ ಅಜಿತ್ ಮನೆ ಮೇಲೆ ಕಲ್ಲು ತೂರಿ, ಮನೆಯವರ ಮೇಲೆ ಹಲ್ಲೆ
|
| 2 |
+
ಹಾಸನ,ಜೂ.13-ಕೆ.ಆರ್.ನಗರ ಸಂತ್ರಸ್ತೆಯ ಅಪಹರಣ ಆರೋಪ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಕಿಡಿಗೇಡಿಗಳು ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆಯಲ್ಲಿರುವ ಅಜಿತ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
|
| 3 |
+
ರಾತ್ರಿ ಮನೆ ಮೇಲೆ ದಾಳಿ ಮಾಡಿದ ಮೂರ್ನಾಲ್ಕು ಮಂದಿ ಕಿಡಿಗೇಡಿಗಳು ಅಜಿತ್ ಅವರ ಅಕ್ಕನ ಮಗ ಮೋಹಿತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮೋಹಿತ್ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
|
| 4 |
+
ಈ ಸಂಬಂದ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಹಲ್ಲೆ ಹಾಗೂ ಮನೆ ಮೇಲೆ ದಾಳಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
|
eesanje/url_46_112_10.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಠಾಣೆಗೆ ಬಂದು ರೇಣುಕಾಸ್ವಾಮಿ ಪ್ರಕರಣ ಮಾಹಿತಿ ಪಡೆದುಕೊಂಡ ನಗರ ಪೊಲೀಸ್ ಆಯುಕ್ತರು
|
| 2 |
+
ಬೆಂಗಳೂರು,ಜೂ.12-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
|
| 3 |
+
ಈ ಪ್ರಕರಣದ ತನಿಖೆ ಯಾವ ರೀತಿ ನಡೆಯುತ್ತಿದೆ, ಏನೆಲ್ಲಾ ಮಾಹಿತಿಗಳನ್ನು ಆರೋಪಿಗಳಿಂದ ಪಡೆದುಕೊಳ್ಳಲಾಗಿದೆ, ಕೊಲೆಗೆ ಮೂಲ ಕಾರಣವೇನು? ಈ ಪ್ರಕರಣದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ, ಕೊಲೆ ನಂತರ ಮೃತದೇಹವನ್ನು ಸಾಗಿಸಲು ಯಾವ ವಾಹನಗಳನ್ನು ಬಳಸಲಾಗಿತ್ತು, ಆ ವಾಹನಗಳು ಯಾರಿಗೆ ಸೇರಿದ್ದು ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸುವಂತೆ ಸೂಚನೆ ನೀಡಿದ್ದಾರೆ.
|
| 4 |
+
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾದಂತಹ ಸಾಕ್ಷ್ಯಾಧಾರಗಳನ್ನು ಬೇಗ ಸಂಗ್ರಹಿಸಬೇಕು ಎಂದು ಆಯುಕ್ತರು ಇದೇ ಸಂದರ್ಭದಲ್ಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.ಇದೊಂದು ಗಂಭೀರ ಪ್ರಕರಣ. ಜಾಗರೂಕತೆಯಿಂದ ಬಹಳ ಎಚ್ಚರಿಕೆಯಲ್ಲಿ ತನಿಖೆ ನಡೆಸಬೇಕೆಂದು ತನಿಖಾಧಿಕಾರಿಗಳಿಗೆ ಸೂಚಿಸಿ ಕೆಲವೊಂದು ಮಾರ್ಗದರ್ಶನ ನೀಡಿದರು.
|
| 5 |
+
ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಕೆಲವು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
|
| 6 |
+
ಆಯುಕ್ತರು ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್ಪೆಕ್ಟರ್, ಸಬ್ಇನ್ಸ್ಪೆಕ್ಟರ್ಗಳು ಹಾಗೂ ಇನ್ನಿತರ ಸಿಬ್ಬಂದಿಗಳಿದ್ದರು.
|
eesanje/url_46_112_11.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಪೊಲೀಸರಿಂದ ದರ್ಶನ್ ಆ್ಯಂಡ್ ಗ್ಯಾಂಗ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
|
| 2 |
+
ಬೆಂಗಳೂರು,ಜೂ.12-ಚಿತ್ರದುರ್ಗದ ರೇಣುಕಾ ಸ್ವಾಮಿಯ ಹತ್ಯೆಯಲ್ಲಿ ಯಾರ ಪಾತ್ರ ಏನೆಂಬುದರ ಬಗ್ಗೆ ವಿಜಯನಗರ ಉಪವಿಭಾಗದ ಪೊಲೀಸರು ದರ್ಶನ್ ಆ್ಯಂಡ್ ಗ್ಯಾಂಗ್ನ ವಿಚಾರಣೆ ನಡೆಸುತ್ತಿದ್ದಾರೆ.
|
| 3 |
+
ರೇಣುಕಾಸ್ವಾಮಿಗೆ ಯಾವ ವಿಷಯ ಹೇಳಿ ಚಿತ್ರದುರ್ಗದಿಂದ, ಯಾವ ವಾಹನದಲ್ಲಿ ಕರೆತರಲಾಯಿತು, ಯಾರು ಅವರನ್ನು ಕರೆದುಕೊಂಡು ಬರಲು ಹೇಳಿದರು, ಅವರನ್ನು ಯಾರು ಕರೆತಂದರು, ಬೆಂಗಳೂರಿಗೆ ಕರೆದುಕೊಂಡು ಬಂದು ಎಲ್ಲಿ ಇಡಲಾಗಿತ್ತು. ಅವರ ಮೇಲೆ ಯಾವ ಯಾವ ಆಯುಧಗಳಿಂದ ಯಾರ್ಯಾರು ಹೊಡೆದರು ಎಂಬ ಮಾಹಿತಿಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.
|
| 4 |
+
ರೇಣುಕಾಸ್ವಾಮಿ ಮೃತಪಟ್ಟ ನಂತರ ಯಾವ ವಾಹನದಲ್ಲಿ ತೆಗೆದುಕೊಂಡು ಹೋಗಿ ಸುಮನಹಳ್ಳಿಯ ಮೋರಿಗೆ ಹಾಕಿದ್ದೀರಿ? ಆ ವೇಳೆ ಯಾರ್ಯಾರು ಇದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಆರೋಪಿಗಳಿಂದ ಬಾಯ್ಬಿಡಿಸುತ್ತಿದ್ದಾರೆ.
|
| 5 |
+
ಈ ಪ್ರಕರಣದಲ್ಲಿ ಇದುವರೆಗೂ ಪವಿತ್ರ ಗೌಡ, ದರ್ಶನ್ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ. ನಿನ್ನೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ, ನ್ಯಾಯಾಲಯ 6 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.
|
| 6 |
+
ಸ್ಥಳ ಮಹಜರು:ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಅಪರಿಹರಿಸಿಕೊಂಡು ಬಂದು ಕೊಲೆ ಮಾಡಿದ ನಂತರ ಶವ ಬಿಸಾಡಲಾಗಿದ್ದ ಸ್ಥಳಕ್ಕೆ ಇಂದು ಪೊಲೀಸರು ಕೆಲವು ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಿದರು. ಆ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
|
| 7 |
+
ರೇಣುಕಾಸ್ವಾಮಿಯನ್ನು ಕರೆದೊಯ್ದು ಕೂಡಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾದ ಪಟ್ಟಣಗೆರೆಯ ಶೆಡ್ನಲ್ಲೂ ಪೊಲೀಸರು ಸ್ಥಳ ಮಹಜರು ನಡೆಸಿದರು. ಆ ಸಂದರ್ಭದಲ್ಲಿ ಎಫ್ಎಸ್ಎಲ್ ಅಧಿಕಾರಿಗಳು ಸ್ಥಳದಲ್ಲಿದ್ದರು.
|
eesanje/url_46_112_12.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
ಇನ್ನು ಮುಂದೆ ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ ಡಿಸಿಎಂ ಡಿಕೆಶಿ
|
| 2 |
+
ಬೆಂಗಳೂರು, ಜೂ. 12-ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇನ್ನು ಮುಂದೆ ಕುಮಾರಪಾರ್ಕ್ ಪೂರ್ವದಲ್ಲಿರುವ ಸರ್ಕಾರಿ ನಿವಾಸದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
|
| 3 |
+
ಸರ್ಕಾರಿ ನಿವಾಸದ ವಿಳಾಸ ನಂಬರ್ 1, ಕುಮಾರಪಾರ್ಕ್ ಪೂರ್ವ, ಗಾಂಧಿಭವನ ರಸ್ತೆ, ಶಿವಾನಂದ ಸರ್ಕಲ್ ಬಳಿ, ಬೆಂಗಳೂರು ಆಗಿದ್ದು, ಇನ್ನು ಮುಂದೆ ಅವರು ಇಲ್ಲಿಯೇ ಎಲ್ಲರಿಗೂ ಲಭ್ಯವಾಗಲಿದ್ದಾರೆ.
|
| 4 |
+
ಸದಾಶಿವನಗರದಲ್ಲಿರುವ ಖಾಸಗಿ ನಿವಾಸದಲ್ಲಿ ಇನ್ನು ಮುಂದೆ ಯಾರನ್ನೂ ಭೇಟಿ ಮಾಡುವುದಿಲ್ಲ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಡಿ.ಕೆ.ಶಿವಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
|
eesanje/url_46_112_2.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ರೇಣುಕಾಸ್ವಾಮಿ ಶವ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರು ಪೊಲೀಸ್ ವಶಕ್ಕೆ
|
| 2 |
+
ಬೆಂಗಳೂರು,ಜೂ.13-ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೊ ಕಾರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
|
| 3 |
+
ಆರ್.ಆರ್.ನಗರದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷನ ಮನೆ ಬಳಿ ಈ ಕಾರು ಪತ್ತೆಯಾಗಿದ್ದು, ರಾತ್ರಿಯೇ ಕಾರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ತಂದಿದ್ದು, ಈ ಕಾರು ಪುನೀತ್ ಎಂಬಾತನ ಹೆಸರಿನಲ್ಲಿರುವುದು ತಿಳಿದುಬಂದಿದೆ.ಶೆಡ್ನಿಂದ ಮೃತದೇಹ ಸಾಗಿಸಲು ನೆರವಾದ ಗ್ಯಾರೆಜ್ ಮಂಜನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
|
| 4 |
+
ಜೂ.8 ರಂದು ಡಿ ಬಾಸ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ನಗರಕ್ಕೆ ಕರೆತಂದ ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಅವರಿಗೆ ಚಿತ್ರಹಿಂಸೆ ನೀಡಿದ್ದಲ್ಲದೆ, ಸಿಗರೇಟ್ನಿಂದ ಸುಟ್ಟು, ಥಳಿಸಿ, ಮರ್ಮಾಂಗಕ್ಕೆ ಒದ್ದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ ನಂತರ ಮೃತದೇಹ ಸಾಗಿಸಲು ಈ ತಂಡ ಸಂಚು ರೂಪಿಸಿದೆ.
|
| 5 |
+
ಆ ಸಂದರ್ಭದಲ್ಲಿ ನಟ ದರ್ಶನ್ 30 ಲಕ್ಷ ನೀಡುವುದಾಗಿ ಹೇಳಿ ಮೃತದೇಹವನ್ನು ಎಲ್ಲಾದರೂ ಬಿಸಾಕಿ ಎಂದು ತನ್ನ ಆಪ್ತ ಪ್ರದೋಷ್ಗೆ ಹೇಳಿದ್ದರು. ಹೀಗಾಗಿ ಪ್ರದೋಷ್ ಮತ್ತಿತರರೊಂದಿಗೆ ಸೇರಿಕೊಂಡು ಮೃತದೇಹವನ್ನು ಬಿಳಿ ಬಣ್ಣದ ಮಹೀಂದ್ರ ಸ್ಕಾರ್ಪಿಯೋ ಕಾರಿನಲ್ಲಿ ತೆಗೆದುಕೊಂಡು ಹೋಗಿ ಸುಮನಹಳ್ಳಿಯಲ್ಲಿರುವ ಸತ್ಯ ಅಪಾರ್ಟ್ಮೆಂಟ್ ಮುಂಭಾಗದ ಮೋರಿಗೆ ಎಸೆದು ಹಿಂದಿರುಗಿದ್ದರು.
|
| 6 |
+
ಮೃತದೇಹ ಮಾರನೇ ದಿನ ಪತ್ತೆಯಾದಾಗ ಮೊದಲೇ ಅಂದುಕೊಂಡಂತೆ ಒಬ್ಬೊಬ್ಬರಾಗಿ ಶರಣಾಗಿದ್ದಾರೆ. ಆ ಬಳಿಕ ದರ್ಶನ್ ಹಾಗೂ ಪವಿತ್ರಾಗೌಡ ಸಹ ಖಾಕಿ ಖೆಡ್ಡಾಕ್ಕೆ ಬಿದ್ದಿದ್ದಾರೆ.
|
eesanje/url_46_112_3.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ಕೇಂದ್ರ ಸಚಿವರಾದ ಬಳಿಕ ನಾಳೆ ಮೊದಲ ಬಾರಿಗೆ ಹೆಚ್ಡಿಕೆ ರಾಜ್ಯಕ್ಕೆ ಆಗಮನ, ಅದ್ದೂರಿ ಸ್ವಾಗತಕ್ಕೆ ಸಿದ್ಧತೆ
|
| 2 |
+
ಬೆಂಗಳೂರು, ಜೂ.13– ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ನಂತರ ಮೊದಲ ಬಾರಿಗೆ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿಗೆ ಆಗಮಿಸುವ ಕುಮಾರಸ್ವಾಮಿಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜೆಡಿಎಸ್ನಲ್ಲಿ ಸಿದ್ಧತೆ ನಡೆದಿದೆ.
|
| 3 |
+
ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಾಳೆ ಬೆಳಿಗ್ಗೆ ಕುಮಾರಸ್ವಾಮಿ ಆಗಮಿಸಲಿದ್ದಾರೆ. ವಿಮಾನ ನಿಲ್ದಾಣದಿಂದ ಜೆಡಿಎಸ್ ಕಚೇರಿಯವರೆಗೂ ಅವರನ್ನು ಮೆರವಣಿಗೆಯಲ್ಲಿ ಕರೆತರಲು ನಿರ್ಧರಿಸಲಾಗಿದೆ.ಲೋಕಸಭೆ ಕಚೇರಿ ಜೆ.ಪಿ.ಭವನದಲ್ಲಿ ನಾಳೆ ಮಧ್ಯಾಹ್ನ ಅಭಿನಂದನಾ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ.
|
| 4 |
+
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಭಾರಿ ಮತಗಳ ಅಂತರದಿಂದ ಜಯ ಗಳಿಸಿರುವುದು ಹಾಗೂ ಮೊದಲ ಬಾರಿ ಕೇಂದ್ರಸಚಿವರಾಗಿರುವುದಕ್ಕೆ ಎಚ್.ಡಿ.ಕುಮಾರಸ್ವಾಮಿಯವರನ್ನು ಪಕ್ಷದ ವತಿಯಿಂದ ಅಭಿನಂದಿಸಲಾಗುತ್ತದೆ. ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರು ಕುಮಾರಸ್ವಾಮಿಯವರನ್ನು ಅಭಿನಂದಿಸಲಿದ್ದಾರೆ.
|
| 5 |
+
ನಂತರ ಪದನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದವನ್ನು ಕುಮಾರಸ್ವಾಮಿ ಪಡೆಯಲಿದ್ದಾರೆ. ಅನಂತರ ತಮನ್ನು ಲೋಕಸಭೆಗೆ ಚುನಾಯಿಸಿದ ಮಂಡ್ಯ ಜಿಲ್ಲೆಯ ಜನರಿಗೆ ಧನ್ಯವಾದವನ್ನು ಅರ್ಪಿಸಲು ಮಂಡ್ಯಕ್ಕೆ ತೆರಳುವ ಕಾರ್ಯಕ್ರಮವಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
|
eesanje/url_46_112_4.txt
ADDED
|
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಬಿಬಿಎಂಪಿ ವಿಭಜನೆ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ, ಉಗ್ರ ಹೋರಾಟದ ಎಚ್ಚರಿಕೆ
|
| 2 |
+
ಬೆಂಗಳೂರು,ಜೂ.12– ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರನ್ನು ಐದು ಭಾಗಗಳನ್ನಾಗಿ ವಿಭಜನೆ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಕನ್ನಡ ಪರ ಹೋರಾಟಗಾರರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರುಗಳು ಸರ್ಕಾರದ ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
|
| 3 |
+
ಕರವೇ ಅಧ್ಯಕ್ಷ ನಾರಾಯಣಗೌಡ, ವಾಟಾಳ್ ನಾಗರಾಜ್ ಬಿಬಿಎಂಪಿ ಮಾಜಿ ಸದಸ್ಯರಾದ ಎನ್.ಆರ್.ರಮೇಶ್, ಪದನಾಭನಗರ ನಾಡಪ್ರಭು ಕೆಂಪೇಗೌಡ ನಾಗರೀಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಮತ್ತಿತರರು ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
|
| 4 |
+
ನಾಡಪ್ರಭು ಕೆಂಪೇಗೌಡ ಅವರು ಕಟ್ಟಿರುವ ವ್ಯವಸ್ಥಿತ ನಗರ ಬೆಂಗಳೂರನ್ನು ವಿಭಜನೆ ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ನಾರಾಯಣಗೌಡ ಹಾಗೂ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಪತ್ರ ಬರೆದಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಬೆಂಗಳೂರಿನ ಇತಿಹಾಸದ ಪಾಠ ಹೇಳುವ ಮೂಲಕ ಯಾವುದೇ ಕಾರಣಕ್ಕೂ ಬಿಬಿಎಂಪಿ ವಿಭಜನೆ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
|
| 5 |
+
ವಿಜಯನಗರ ಸಾವ್ರಾಜ್ಯದ ಅರಸರಾದ ಅಚ್ಯುತರಾಯರಿಂದ ಹನ್ನೆರಡು ಹೋಬಳಿ (ಉತ್ತರಹಳ್ಳಿ, ವರ್ತೂರು, ಯಲಹಂಕ, ಬೇಗೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ, ಕುಂಬಳಗೋಡು, ಕಾಗಳ್ಳಿ, ಬಾಣಾವಾರ ಮತ್ತು ಹೆಸರುಘಟ್ಟ) ಗಳನ್ನು ಜಹಗೀರಾಗಿ ಪಡೆದ ಕೆಂಪೇಗೌಡರು 1537ರಲ್ಲಿ ಬೆಂಗಳೂರು ನಿರ್ಮಿಸಿದ್ದಾರೆ. ಅಂತಹ ಮಹಾನುಭಾವರು ಕಟ್ಟಿರುವ ಬೆಂಗಳೂರನ್ನು ವಿಭಜಿಸುವುದು ಸೂಕ್ತವಲ್ಲ ಎಂದು ಅವರು ಸಲಹೆ ನೀಡಿದ್ದಾರೆ.
|
| 6 |
+
ಬೆಂಗಳೂರು ಮಹಾನಗರವನ್ನು ವಿಭಜನೆ ಮಾಡುವುದಿಲ್ಲ ಆದರೆ, ಬಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಐದು ಭಾಗಗಳಾಗಿ ವಿಭಜನೆ ಮಾಡುತ್ತೇವೆ ಎಂದು ಅತ್ಯಂತ ಜಾಣ ತನದಿಂದ ಹೇಳಿಕೆ ನೀಡಿದಾಕ್ಷಣ, ತಮ ನಿಜ ಬಣ್ಣ ಬಯಲಾಗುವುದಿಲ್ಲ ಎಂದು ತಾವು ಭಾವಿಸಿದರೆ ಅದು ತಪ್ಪಾಗುತ್ತದೆ. ಒಂದು ವೇಳೆ ವಿಭಜನೆ ಮಾಡಿದರೆ ಅದು ಪ್ರಾದೇಶಿಸಕ ಅಸಮತೋಲನಕ್ಕೂ ಕಾರಣವಾಗುತ್ತದೆ. ಹೀಗಾಗಿ ಈ ಕೂಡಲೇ ನಿಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
|
| 7 |
+
ಇನ್ನೂ ಬಿಬಿಎಂಪಿ ವಿಭಜನೆ ಕುರಿತಂತೆ ಪ್ರತಿಕ್ರಿಯಿಸಿರುವ ಪದನಾಭನಗರ ನಾಡಪ್ರಭು ಕೆಂಪೇಗೌಡ ನಾಗರೀಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್ ಅವರು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಒಡ��ಯಲು ಮುಂದಾದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
|
| 8 |
+
ಬಿಬಿಎಂಪಿಗೆ ಚುನಾವಣೆ ನಡೆದು ನಾಲ್ಕು ವರ್ಷಗಳಾಗಿವೆ ಇಂತಹ ಸಂದರ್ಭದಲ್ಲಿ ಪಾಲಿಕೆಗೆ ಚುನಾವಣೆ ನಡೆಸುವುದನ್ನು ಬಿಟ್ಟು ವಿಭಜನೆ ಮಾಡುತ್ತೇವೆ ಎಂಬ ಹೇಳಿಕೆ ನೀಡುತ್ತಿರುವುದು ಬಿಬಿಎಂಪಿ ಚುನಾವಣೆಯನ್ನು ಮತ್ತೆ ನಾಲ್ಕು ವರ್ಷಗಳವರೆಗೆ ಮುಂದೂಡುವ ಪ್ರಯತ್ನ ಎನ್ನುವುದು ಸಾಮಾನ್ಯ ನಾಗರೀಕರಿಗೂ ಆರ್ಥವಾಗುತ್ತದೆ. ಇಂತಹ ವಿಫಲ ಯತ್ನ ಮಾಡುವುದನ್ನು ಬಿಟ್ಟು ಈ ಕೂಡಲೇ ಚುನಾವಣೆ ನಡೆಸಿ ಎಂದು ಅವರು ಆಗ್ರಹಿಸಿದ್ದಾರೆ.
|
| 9 |
+
ಐದು ಪಾಲಿಕೆ ನಿರ್ಮಾಣ ಮಾಡಿದರೆ ಇಲ್ಲಿನ ಮೂಲ ನಿವಾಸಿಗಳಾದ ಕನ್ನಡಿಗರಿಗೆ ಅನ್ಯಾಯವಾಗುತ್ತದೆ ಇದರ ಜೊತೆಗೆ ಅನ್ಯಭಾಷಿಕರಿಗೆ ಮಣೆ ಹಾಕಿದಂತಾಗುತ್ತದೆ ಹೀಗಾಗಿ ಅಂತಹ ಪ್ರಯತ್ನ ಮಾಡುವುದನ್ನು ನಮ ವೇದಿಕೆ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.ಇದರ ಜತೆಗೆ ಕಾಂಗ್ರೆಸ್ ಪಕ್ಷದ ಕೆಲ ಮಾಜಿ ಬಿಬಿಎಂಪಿ ಸದಸ್ಯರುಗಳು ಕೂಡ ಸರ್ಕಾರದ ಈ ನಿರ್ಧಾರಕ್ಕೆ ಅಪಸ್ವರ ಎತ್ತಿದ್ದಾರೆ.
|
| 10 |
+
ಹೇಗೆ ವಿಭಜನೆ:ಈಗಿರುವ 225 ವಾರ್ಡ್ಗಳನ್ನು 400 ವಾರ್ಡ್ಗಳನ್ನಾಗಿ ವಿಭಜಿಸಿ 80 ವಾರ್ಡ್ಗಳನ್ನು ಒಳಗೊಂಡ ಒಂದು ಪಾಲಿಕೆ ರಚನೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ರೀತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಭಾಗಗಳನ್ನಾಗಿ ಮಾಡುವ ಮೂಲಕ ಪಾರದರ್ಶಕ ಆಡಳಿತ ನೀಡಲಾಗುವುದು ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ.ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ವಿಭಜಿಸುವ ಕುರಿತಂತೆ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಹಾಗೂ ಬಿಬಿಎಂಪಿ ಮಾಜಿ ಕಮಿಷನರ್ ಸಿದ್ದಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
|
| 11 |
+
ಅವರು ನೀಡಿರುವ ಸಮಿತಿ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡ ನಂತರ ಬಿಬಿಎಂಪಿಯನ್ನು ಐದು ಭಾಗಗಳನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
|
eesanje/url_46_112_5.txt
ADDED
|
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಅಧಿಕೃತ ನಿವಾಸಕ್ಕಾಗಿ ಪ್ರಯಾಸ ಪಡುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್
|
| 2 |
+
ಬೆಂಗಳೂರು,ಜೂ.12-ಅಧಿಕೃತ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಸಾಂವಿಧಾನಿಕ ಹುದ್ದೆ ಹೊಂದಿದ್ದರೂ ಅಧಿಕೃತ ನಿವಾಸಕ್ಕಾಗಿ ಪ್ರಯಾಸಪಡಬೇಕಾಗಿದೆ.ಆರು ತಿಂಗಳಿನಿಂದ ನಿವಾಸ ಹಂಚಿಕೆಗೆ ಪತ್ರ ವ್ಯವಹಾರ ನಡೆಸುತ್ತಿರುವ ಅಶೋಕ್ ಅವರಿಗೆ ಇದುವರೆಗೂ ಸರ್ಕಾರಿ ನಿವಾಸ ಸಿಕ್ಕಿಲ್ಲ. ಹಾಗಾಗಿ ಅಧಿಕೃತ ನಿವಾಸವಿಲ್ಲದೇ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ.
|
| 3 |
+
ಮುಖ್ಯಮಂತ್ರಿಗೆ ಸರಿಸಮಾನವಾದ ಸಾಂವಿಧಾನಿಕ ಹುದ್ದೆ ವಿರೋಧ ಪಕ್ಷದ ನಾಯಕನ ಸ್ಥಾನವಾಗಿದೆ. ಯಾವುದೇ ಸರ್ಕಾರ ಬಂದರೂ ವಿರೋಧ ಪಕ್ಷದ ನಾಯಕರಿಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗುತ್ತದೆ.
|
| 4 |
+
ಇತ್ತೀಚಿನ ವರ್ಷಗಳಲ್ಲಿ ಕುಮಾರಕೃಪಾ ಈಸ್ಟ್ ಬಂಗಲೆಯನ್ನು ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರಿಗೆ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಬಿಟ್ಟರೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡುವುದು ವಾಡಿಕೆ. ಆದರೆ ಈಗ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್ಗೆ ಈವರೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿಲ್ಲ, ಹಾಗಾಗಿ ಖಾಸಗಿ ನಿವಾಸದಿಂದಲೇ ಅಶೋಕ್ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗಿದೆ.
|
| 5 |
+
ನಿವಾಸಕ್ಕಾಗಿ ಪತ್ರ: ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆ ಸರ್ಕಾರಿ ನಿವಾಸಕ್ಕಾಗಿ 2023ರ ನವೆಂಬರ್ನಲ್ಲೇ ಸರ್ಕಾರಕ್ಕೆ ಅಶೋಕ್ ಪತ್ರ ಬರೆದಿದ್ದರು. ಆದರೆ ನಿವಾಸ ಹಂಚಿಕೆ ಮಾಡುವ ಕೆಲಸ ಆಗಲೇ ಇಲ್ಲ, 2024ರ ಫೆಬ್ರವರಿಯಲ್ಲಿ ಮತ್ತೊಮೆ ಸರ್ಕಾರಕ್ಕೆ ಪತ್ರ ಬರೆದ ಅಶೋಕ್ ಸರ್ಕಾರಿ ನಿವಾಸ ಹಂಚಿಕೆಗೆ ಮನವಿ ಮಾಡಿದ್ದರು.
|
| 6 |
+
ಚುನಾವಣೆ ಮುಗಿದು ತಿಂಗಳಾದರೂ ಸರ್ಕಾರಿ ನಿವಾಸ ಹಂಚಿಕೆಗೆ ಸರ್ಕಾರ ಮುಂದಾಗಿಲ್ಲ. ಹಾಗಾಗಿ ಮೂರನೇ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪತ್ರ ಬರೆದು ರೇಸ್ಕೋರ್ಸ್ ರಸ್ತೆಯಲ್ಲಿರುವ ನಿವಾಸ ಅಥವಾ ಕುಮಾರಕೃಪಾ ನಿವಾಸಕ್ಕೆ ಅವರು ಮನವಿ ಮಾಡಿದ್ದಾರೆ.
|
| 7 |
+
ವಿಪಕ್ಷ ನಾಯಕನ ಮನವಿ: ನಂ.1 ಕುಮಾರಕೃಪಾ ಪೂರ್ವ ನಿವಾಸ, ನಂ.1 ರೇಸ್ ವ್ಯೂವ್ ಕಾಟೇಜ್, ನಂ.2 ರೇಸ್ ವ್ಯೂವ್ ಕಾಟೇಜ್ ಈ ಮೂರರಲ್ಲಿ ಒಂದು ನಿವಾಸಕ್ಕೆ ಅಶೋಕ್ ಮನವಿ ಸಲ್ಲಿಸಿದ್ದಾರೆ. ಆದರೆ ಕುಮಾರಕೃಪ ನಂಬರ್ 1 ನಿವಾಸ ಡಿಸಿಎಂ ಡಿಕೆ ಶಿವಕುಮಾರ್ಗೆ ಕೊಡಲಾಗಿದೆ.
|
| 8 |
+
ರೇಸ್ ವ್ಯೂವ್ ಕಾಟೇಜ್-1 ಸಚಿವ ಎಂ.ಬಿ. ಪಾಟೀಲ್ ಅವರಿಗೆ ನೀಡಲಾಗಿದೆ, ರೇಸ್ ವ್ಯೂವ್ ಕಾಟೇಜ್-2 ಸಚಿವ ಕೆ.ಜೆ. ಜಾರ್ಜ್ ಅವರಿಗೆ ನೀಡಲಾಗಿದೆ, ಈಗ ವಿಪಕ್ಷ ನಾಯಕ ಅಶೋಕ್ ಅವರು ಕೇಳಿರುವ ಈ ನಿವಾಸ ಖಾಲಿ ಇಲ್ಲ ಹೀಗಾಗಿ ಮುಖ್ಯ ಕಾರ್ಯದರ್ಶಿಗಳಿಗೂ ತಲೆ ನೋವಾಗಿದೆ.ಸಚಿವರನ್ನ ಖಾಲಿ ಮಾಡಿಸಿ ಅಶೋಕ್ಗೆ ನಿವಾಸ ಕೊಡಲು ಸಾಧ್ಯವಾಗುತ್ತಿಲ್ಲ, ಅಶೋಕ್ ಅವರಿಗೆ ಬೇರೆ ಯಾವುದೇ ನಿ���ಾಸದ ಮೇಲೆ ಆಸಕ್ತಿ ಇಲ್ಲ. ಜಯಮಹಲ್ ನಿವಾಸ ದೂರ ಎಂದು ನಿರಾಕರಿಸಿದ್ದಾರೆ.
|
| 9 |
+
ಆದರೆ, ಸಿಎಂ ಸಮಾನ ಹುದ್ದೆಯಲ್ಲಿರುವ ಅಶೋಕ್ಗೆ ಸರ್ಕಾರಿ ನಿವಾಸ ಕೊಡಲೇಬೇಕು. ಕೇಳಿದ ನಿವಾಸ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ನವೆಂಬರ್ ನಿಂದ ಮನವಿ ಮಾಡುತ್ತಲೇ ಇದ್ದಾರೆ. ಆದರೂ ಅಶೋಕ್ ಮನವಿಯತ್ತ ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ. ಸಾಂವಿಧಾನಿಕ ಹದ್ದೆಯಾಗಿರುವ ವಿರೋಧ ಪಕ್ಷದ ನಾಯಕ ಸ್ಥಾನ ನಿರ್ವಹಣೆಗೆ ಪ್ರತ್ಯೇಕ ನಿವಾಸದ ಅಗತ್ಯವಿದೆ.
|
| 10 |
+
ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿರುವವರಿಗೆ ಸಾಕಷ್ಟು ಜವಾಬ್ದಾರಿ ನಿರ್ವಹಣೆ ಮಾಡಬೇಕಿದ್ದು, ಅದಕ್ಕಾಗಿ ಸಿಬ್ಬಂದಿ ಬಳಸಿಕೊಳ್ಳಬೇಕಾಗಲಿದೆ. ಆದರೆ ಖಾಸಗಿ ನಿವಾಸದಲ್ಲಿ ಇದನ್ನೆಲ್ಲ ನಿರ್ವಹಿಸುವುದು ಕಷ್ಟ. ಇದಕ್ಕಾಗಿಯೇ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗುತ್ತದೆ. ಆದರೆ, ಸರ್ಕಾರಿ ನಿವಾಸ ಸಿಗದ ಕಾರಣದಿಂದ ಖಾಸಗಿ ನಿವಾಸದಿಂದಲೇ ಅಶೋಕ್ ವಿರೋಧ ಪಕ್ಷದ ನಾಯಕರ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಾಗಿದೆ.
|
eesanje/url_46_112_6.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವಿಕೃತವಾಗಿ ಪತಿಯನ್ನು ಕೊಂದವರ ಬಗ್ಗೆ ರೇಣುಕಾಸ್ವಾಮಿ ಅವರ ಪತ್ನಿ ಹೇಳಿದ್ದೇನು..?
|
| 2 |
+
ಬೆಂಗಳೂರು,ಜೂ.12-ನನ್ನ ಪತಿಯನ್ನು ಮೋಸದಿಂದ ಅಪಹರಿಸಿ ಚಿತ್ರಹಿಂಸೆ ನೀಡಿ ವಿಕೃತವಾಗಿ ಕೊಲೆ ಮಾಡಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಅವರ ಪತ್ನಿ ಸಹನಾ ನೊಂದು ನುಡಿದಿದ್ದಾರೆ.ನಾನು ಐದು ತಿಂಗಳ ಗರ್ಭಿಣಿ, ಮಗು ಹುಟ್ಟಿದ ಮೇಲೆ ತಂದೆ ಯಾರೆಂದು ಹೇಳಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
|
| 3 |
+
ಶನಿವಾರ ಫೋನ್ ಮಾಡಿ ಊಟಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಸಂಜೆಯಾದರೂ ಬಾರದಿದ್ದಾಗ ಫೋನ್ ಮಾಡಿದೆ. ಆದರೆ 7.30ರಲ್ಲಿ ಸ್ವಿಚ್ ಆಫ್ ಆಗಿತ್ತು. ನನ್ನ ಪತಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದು ವಿಕೃತವಾಗಿ ಕೊಲೆ ಮಾಡಿದ್ದಾರೆ. ನನ್ನ ಪತ್ನಿ ಗರ್ಭಿಣಿ ಎಂದು ಹೇಳಿದರೂ ಅವರಿಗೆ ಕನಿಕರ ಬಂದಿಲ್ಲ. ಹೀನಾಯವಾಗಿ ಹೊಡೆದು ಸಾಯಿಸಿದ್ದಾರೆ. ನನ್ನ ಮುಂದಿನ ಬದುಕು ಹೇಗೆ ಎಂಬುದೇ ಚಿಂತೆಯಾಗಿದೆ ಎಂದು ಸಹನಾ ಕಣ್ಣೀರು ಹಾಕಿದ್ದಾರೆ.
|
| 4 |
+
ನನ್ನ ಗಂಡ ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಬಿಟ್ಟುಬಿಡಬಹುದಿತ್ತು. ಕೊಲೆ ಮಾಡುವ ಮಟ್ಟಕ್ಕೆ ಹೋಗಬಾರದಿತ್ತು. ನನ್ನ ಪತಿಯನ್ನು ಕೊಲೆ ಮಾಡಿರುವ ಆರೋಪಿಗಳು ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು. ಎಲ್ಲರಿಗೂ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದ್ದಾರೆ.
|
| 5 |
+
ಪತಿಯ ಕೊಲೆಯಿಂದಾಗಿ ನಮ ಜೀವನ ಹಾಳಾಗಿದೆ. ಯಾವುದೇ ಕಾರಣಕ್ಕೂ ಆರೋಪಿಗಳನ್ನು ಬಿಡಬಾರದು. ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಪತಿಯ ಮೃತದೇಹದ ಮುಂದೆ ನೋವು ಹೇಳಿಕೊಂಡಿದ್ದಾರೆ.
|
| 6 |
+
ಸೊಸೆಗೆ ಉದ್ಯೋಗ ಕೊಡಿ:ನನ್ನ ಮಗನನ್ನು ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿರುವ ಎಲ್ಲರಿಗೂ ತಕ್ಷ ಶಿಕ್ಷೆಯಾಗಬೇಕು ಎಂದು ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭಾ ಕಣ್ಣೀರು ಹಾಕುತ್ತಾ, ನನ್ನ ಸೊಸೆಗೆ ಪರಿಹಾರ ನೀಡಬೇಕು. ಸರ್ಕಾರಿ ಉದ್ಯೋಗ ಕೊಡಿ ಎಂದು ಅಲವತ್ತುಕೊಂಡಿದ್ದಾರೆ.
|
| 7 |
+
ವಯಸ್ಸಾದ ನಮ ಕುಟುಂಬಕ್ಕೆ ಮಗನೇ ಆಧಾರವಾಗಿದ್ದ. ಈಗ ನಾವು, ನಮ ಸೊಸೆ ಕಷ್ಟಪಡುವಂತಾಗಿದೆ. ನನ್ನ ಸೊಸೆಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಬೇಕು, ಕೊಲೆಗಾರರಿಗೆ ಕಠಿಣ ಶಿಕ್ಷೆಯಾಗಬೇಕೆಂದರು.
|
eesanje/url_46_112_7.txt
ADDED
|
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಮೋದಿ ಸರ್ಕಾರದಲ್ಲಿ ಕರ್ನಾಟಕದ ಐವರು ಮಂತ್ರಿಗಳು, ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಸಿಗುತ್ತಾ ವೇಗ..?
|
| 2 |
+
ಬೆಂಗಳೂರು,ಜೂ.12-ಪ್ರಧಾನಿ ನರೇಂದ್ರಮೋದಿ ಸರ್ಕಾರದಲ್ಲಿ ಕರ್ನಾಟಕದ ಐವರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಿ ಪ್ರಮುಖ ಖಾತೆಗಳು ಲಭಿಸಿರುವುದರಿಂದ ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಭಾರೀ ಕೈಗಾರಿಕೆ ಮತ್ತು ವಿ.ಸೋಮಣ್ಣಗೆ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳು ಸಿಕ್ಕಿರುವುದು ಅನೇಕ ಯೋಜನೆಗಳಿಗೆ ಚಾಲನೆ ಸಿಗಬಹುದೆಂದು ಹೇಳಲಾಗುತ್ತಿದೆ.
|
| 3 |
+
ಈ ಇಬ್ಬರ ಜೊತೆಗೆ ಕೇಂದ್ರದ ಗ್ರಾಹಕರ ಕಲ್ಯಾಣ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಖಾತೆ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರೂ ಪ್ರಮುಖ ಇಲಾಖೆಯ ಸಚಿವರಾಗಿರುವುದರಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಚಾಲನೆ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
|
| 4 |
+
ವಿಶೇಷವಾಗಿ ನಿರೀಕ್ಷೆಗೂ ಮೀರಿ ಪ್ರಭಾವಿ ಖಾತೆಯನ್ನೇ ದಕ್ಕಿಸಿಕೊಂಡಿರುವ ಕುಮಾರಸ್ವಾಮಿ ಅವರಿಂದ ರಾಜ್ಯದಲ್ಲಿ ಹಲವಾರು ಕಾರಣಗಳಿಂದ ಮುಚ್ಚಿ ಹೋಗಿರುವ ಹಾಗೂ ಮುಚ್ಚುವ ಹಂತಕ್ಕೆ ಬಂದಿರುವ ಕೆಲವು ರೋಗಗ್ರಸ್ಥ ಕಾರ್ಖಾನೆಗಳಿಗೆ ಮರುಜನ ಸಿಗಬಹುದೆಂದು ಹೇಳಲಾಗುತ್ತಿದೆ.
|
| 5 |
+
ಮೇಕೆದಾಟು ಸೇರಿದಂತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಪರಿಹಾರ, ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮತಿ ಮತ್ತು ಅನುದಾನ ಕೊಡಿಸುವುದು, ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ ನೀಡುವುದು ಸೇರಿದಂತೆ ಎರಡೂ ಇಲಾಖೆಯಡಿ ಬಾಕಿ ಇರುವ ಕಾಮಗಾರಿಗಳ ಪೂರ್ಣಗೊಳಿಸಲು ಸೋಮಣ್ಣ ಶ್ರಮಿಸಲಿದ್ದಾರೆ ಎಂದು ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
|
| 6 |
+
ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಸೋಮಣ್ಣ ಪಾದರಸದಂತೆ ಸದಾ ಚಟುವಟಿಕೆಯಿಂದ ಇರುವ ರಾಜಕಾರಣಿ. ತಮಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಕೆಲಸ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿರುವ ನಾಯಕ. ಈಗ ಕೇಂದ್ರ ಸಂಪುಟದಲ್ಲಿ ಎರಡು ಮಹತ್ವದ ಖಾತೆಗಳ ಜವಾಬ್ದಾರಿ ಸಿಕ್ಕಿದೆ. ಸಂಪುಟ ದರ್ಜೆಯಲ್ಲದೇ ಇದ್ದರೂ ರಾಜ್ಯ ಖಾತೆಯಲ್ಲಿಯೂ ಇರುವ ಮಿತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ನೆರವು ಕಲ್ಪಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದಾರೆ.
|
| 7 |
+
ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಇರುವ ಕುಮಾರಸ್ವಾಮಿ ಅವರಿಗೆ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಮಹತ್ವದ ಸ್ಥಾನ ದೊರಕಿದೆ. ಈ ಖಾತೆ ಸಿಕ್ಕಿರುವುದರಿಂದ ಸಹಜವಾಗಿಯೇ ಕರ್ನಾಟಕ ಉದ್ಯಮ ಕ್ಷೇತ್ರದ ಕನಸುಗಳು ಚಿಗುರಿವೆ.
|
| 8 |
+
ರಾಜ್ಯಕ್ಕೆ ಬೃಹತ್ ಉದ್ಯಮವನ್ನು ಹಾಗೂ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಮುಖ ಪಾತ್ರ ವಹಿಸಬಹುದು. ಇದೇ ���ೀತಿ ನೆರೆ ರಾಜ್ಯಗಳಿಗೆ ಕೈಗಾರಿಕೋದ್ಯಮಿಗಳ ವಲಸೆ ತಡೆಯುವ ನಿಟ್ಟಿನಲ್ಲೂ ಅನುಕೂಲವಾಗಬಹುದೆಂಬ ನಿರೀಕ್ಷೆ ಇದೆ. ಇದರ ಜೊತೆಗೆ ಉಕ್ಕು ಖಾತೆಯನ್ನೂ ಹೊಂದಿರುವುದರಿಂದ ರಾಜ್ಯದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಪುನಃಶ್ಚೇತನದ ಆಸೆಗೆ ಮತ್ತೆ ಚಿಗುರೊಡೆದಿದೆ. ಎಂಪಿಎಂ ಕಾರ್ಖಾನೆ ಮತ್ತು ಎನ್ಜಿಇಎಫ್ ಕಾರ್ಖಾನೆಗಳೂ ಸಹ ಮರುಜೀವ ಪಡೆದುಕೊಳ್ಳುವ ಆಶಾಭಾವನೆ ಇದೆ.
|
eesanje/url_46_112_8.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವಾಲೀಕಿ ನಿಗಮದ ಹಗರಣ : 18 ನಕಲಿ ಖಾತೆ ತೆರೆದಿದ್ದ ಆರೋಪಿ ಅಂದರ್
|
| 2 |
+
ಬೆಂಗಳೂರು,ಜೂ.12– ವಾಲಿಕಿ ನಿಗಮದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು ಬಂಧಿಸಿ 8 ಕೋಟಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡಿದ್ದಾರೆ.
|
| 3 |
+
ಹೈದರಾಬಾದ್ನಲ್ಲಿ ಆರೋಪಿ ಸತ್ಯನಾರಾಯಣ ವರ್ಮ ಎಂಬಾತನನ್ನು ಎಸ್ಐಟಿ ಬಂಧಿಸಿ ವಿಚಾರಣೆಗೊಳಪಡಿಸಿ ಅಕೌಂಟ್ ನಂಬರ್ಗಳ ಪರಿಶೀಲನೆ ವೇಳೆ ನಕಲಿ ಖಾತೆ ತೆರೆದಿರುವುದು ಖಚಿತವಾಗಿದೆ.
|
| 4 |
+
ವಾಲೀಕಿ ನಿಗಮದಲ್ಲಿನ ಹಣವನ್ನು ವರ್ಗಾವಣೆ ಮಾಡಲು ಆರೋಪಿಯು 18 ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾನೆ. ಈ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಬಗ್ಗೆ ಎಸ್ಐಟಿ ತನಿಖಾಧಿಕಾರಿಗಳು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
|
| 5 |
+
ಆರೋಪಿ ಸತ್ಯನಾರಾಯಣ ವಿವಿಧ ಕಂಪನಿಗಳ ಹೆಸರಿನಲ್ಲಿ 18 ಬ್ಯಾಂಕ್ ಖಾತೆಗಳನ್ನು ತೆರೆದಿದ್ದನು. ಆ ಖಾತೆಗಳಿಗೆ ವಾಲೀಕಿ ನಿಗಮದಿಂದ ಹಣ ವರ್ಗಾವಣೆಯಾಗಿತ್ತು. ಅಕೌಂಟ್ ನಂಬರ್ಗಳನ್ನು ಪರಿಶೀಲಿಸಿದಾಗ ಅವು ನಕಲಿ ಖಾತೆ ಎಂಬುದು ಖಚಿತವಾದ ಬೆನ್ನಲ್ಲೇ ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿ ಆತನನ್ನು ಬಲೆಗೆ ಬೀಳಿಸಿಕೊಂಡಿದೆ.
|
| 6 |
+
ಆರೋಪಿ ಸತ್ಯನಾರಾಯಣ ವರ್ಮನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ 8 ಕೋಟಿಗೂ ಹೆಚ್ಚು ಹಣ ವಶಪಡಿಸಿಕೊಳ್ಳಲಾಗಿದೆ. ವಾಲೀಕಿ ಅಭಿವೃದ್ದಿ ನಿಗಮದ ಬ್ಯಾಂಕ್ ಖಾತೆಯಿಂದ 18 ಖಾತೆಗಳಿಗೆ ಎಂಜಿರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 94.73 ಕೋಟಿ ಹಣ ವರ್ಗಾವಣೆಯಾಗಿತ್ತು.
|
| 7 |
+
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸೂಕ್ತ ತನಿಖೆಗಾಗಿ ಎಸ್ಐಟಿ ರಚಿಸಿತ್ತು. ತನಿಖೆ ಕೈಗೊಂಡ ಎಸ್ಐಟಿ ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವರನ್ನು ಈಗಾಗಲೇ ಎಸ್ಐಟಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿ ತನಿಖೆ ಮುಂದುವರೆಸಿದೆ. ಒಟ್ಟಾರೆ ಈ ಪ್ರಕರಣದಲ್ಲಿ ಈವರೆಗೂ ಏಳು ಮಂದಿಯನ್ನು ಬಂಧಿಸಲಾಗಿದೆ.
|
eesanje/url_46_112_9.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ : ಮಾಜಿ ಸಿಎಂ ಯಡಿಯೂರಪ್ಪಗೆ ಸಿಐಡಿ ನೋಟಿಸ್
|
| 2 |
+
ಬೆಂಗಳೂರು,ಜೂ.12-ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ತಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
|
| 3 |
+
ಸಿಐಡಿ ತನಿಖಾ ತಂಡ ಬಿಎಸ್ವೈ ಅವರಿಗೆ ಪ್ರಕರಣ ಕುರಿತಾಗಿ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿದೆ.ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರಬೇಕಿರುವುದರಿಂದ ನಾನು ದೆಹಲಿಗೆ ತೆರಳುತ್ತಿದ್ದೇನೆ. ಜೂ.15ರಂದು ವಿಚಾರಣೆಗೆ ಹಾಜರಾಗುತ್ತೇನೆ. ಹಾಗಾಗಿ ವಿನಾಯಿತಿ ನೀಡಬೇಕೆಂದು ಯಡಿಯೂರಪ್ಪ ನೋಟಿಸ್ಗೆ ಉತ್ತರಿಸಿದ್ದಾರೆ.
|
| 4 |
+
ಅಪ್ತಾಪ್ರೆಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎನ್ನಲಾದ ಪೋಕ್ಸೋ ಕಾಯ್ದೆಯಡಿ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರದಲ್ಲಿ ಕಳೆದ ಮಾರ್ಚ್ 14ರಂದು ದೂರು ನೀಡಲಾಗಿತ್ತು. ಅದಾ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತನಿಖಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಪ್ರಕರಣ ದಾಖಲಾದ ಬಳಿಕ ಏಪ್ರಿಲ್ 12ರಂದು ಪೊಲೀಸರ ವಿಚಾರಣೆಗೆ ಬಿಎಸ್ ಯಡಿಯೂರಪ್ಪ ಅವರು ಹಾಜರಾಗಿದ್ದರು.
|
| 5 |
+
ಅಂದು ವಿಚಾರಣೆ ವೇಳೆ, ದೂರು ನೀಡಿದ್ದ ಮಹಿಳೆಗೆ ಇತರರ ವಿರುದ್ಧ ದೂರು ನೀಡುವುದು ಒಂದು ಹವ್ಯಾಸವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದರು. ನಂತರ ಪೊಕ್ಸೋ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿಕೊಂಡ ಸಿಐಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
|
| 6 |
+
ಬೆಂಗಳೂರಿನ ಸದಾಶಿವ ನಗರದ ಪೊಲೀಸ್ ಠಾಣೆಗೆ ಮಾಚ್ 14ರಂದು ರಾತ್ರಿ ಹೆಣ್ಣು ಮಗಳೊಬ್ಬರು ತೆರಳಿ ತನ್ನ ಅಪ್ತಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಯಡಿಯೂರಪ್ಪ ವಿರುದ್ಧ ದೂರು ನೀಡಿದ್ದರು.
|
| 7 |
+
ಈ ಮಹಿಳೆಯು ಈ ಹಿಂದೆಯು ಕೆಲವು ಪ್ರಮುಖರ ವಿರುದ್ಧ ದೂರು ನೀಡಿದ್ದರು ಎಂದು ತಿಳಿದು ಬಂದಿದೆ. ಮೇ ತಿಂಗಳಲ್ಲಿ ದೂರು ನೀಡಿದ್ದ ಸಂತ್ರಸ್ತೆಯ ತಾಯಿ ಅಸುನೀಗಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಪೊಕ್ಸೋ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಡಾ.ಜಿ.ಪರಮೇಶ್ವರ್, ತನಿಖೆ ನಡೆಯುತ್ತಿದೆ. ಸಿಐಡಿಯಿಂದ ತನಿಖೆಯು ಪ್ರಗತಿಯಲ್ಲಿದೆ. ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.
|
eesanje/url_46_113_1.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಯ ಹಿಂದೆ ವ್ಯವಸ್ಥಿತ ಖಾಸಗಿ ಜಾಲ
|
| 2 |
+
ಬೆಂಗಳೂರು, ಜೂ. 12-ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಹಣ ವರ್ಗಾವಣೆಯ ಹಿಂದೆ ವ್ಯವಸ್ಥಿತವಾದ ಖಾಸಗಿ ಜಾಲವೊಂದು ಸಕ್ರಿಯವಾಗಿರುವ ಕುರಿತು ಮಾಹಿತಿ ಬೆಳಕಿಗೆ ಬಂದಿದೆ.ನಿಗಮದಲ್ಲಿದ್ದ ಹಣವನ್ನು ಒಂದು ತಿಂಗಳ ಮಟ್ಟಿಗೆ ಪಡೆದುಕೊಂಡು ಅದನ್ನು ಬೇರೆ ಕಡೆ ಹೂಡಿಕೆ ಮಾಡಿ ಲಾಭ ಗಳಿಸಿ ತಿಂಗಳ ಬಳಿಕ ಕಮಿಷನ್ ಜೊತೆ ಅಸಲನ್ನು ವಾಪಸ್ ಸಂದಾಯ ಮಾಡಲಾಗುತ್ತಿತ್ತು ಎನ್ನಲಾಗಿದೆ.
|
| 3 |
+
ಈ ರೀತಿ ಹಲವು ಬಾರಿ ಹಣದ ವಹಿವಾಟು ನಡೆದಿದೆ ಎಂಬ ಮಾಹಿತಿಗಳಿವೆ. ಇದರ ಹಿಂದೆ ಸತ್ಯನಾರಾಯಣವರ್ಮ ಮತ್ತು ಆರ್ಬಿಎಲ್ ಬ್ಯಾಂಕಿನ ನಿವೃತ್ತ ಅಧಿಕಾರಿ ಚಂದ್ರಮೋಹನ್ರ ಕೈವಾಡ ಕಂಡುಬಂದಿದೆ.
|
| 4 |
+
ಈ ರೀತಿ ಪದೇಪದೇ ಹಣದ ವಹಿವಾಟು ನಡೆಸುವ ಮೂಲಕ ತಮ ಸಿವಿಲ್ ಸ್ಕೋರ್ ಅನ್ನು ಹೆಚ್ಚಿಸಿಕೊಂಡು ಅದರ ಮೂಲಕ ಬ್ಯಾಂಕ್ನಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದುಕೊಂಡು ಬೇರೆ ಬೇರೆ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.ಸತ್ಯನಾರಾಯಣ ವರ್ಮ ಅವರನ್ನು ತನಿಖಾಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
|
| 5 |
+
ನಿಗಮದ 97 ಕೋಟಿ ರೂ. ಗಳನ್ನು ನಕಲಿ ಬ್ಯಾಂಕುಗಳಿಗೆ ವರ್ಗಾವಣೆ ಮಾಡಿದ್ದ ಪ್ರಕರಣದಲ್ಲಿ ಈತ ಕಿಂಗ್ಪಿನ್ ಎಂದು ಹೇಳಲಾಗಿದೆ. 97 ಕೋಟಿ ರೂ.ಗಳ ಹಣ ವರ್ಗಾವಣೆಗೆ 5 ಕೋಟಿ ರೂ.ಗಳ ಕಮಿಷನ್ ನೀಡುವ ಭರವಸೆ ನೀಡಿ 4 ಕೋಟಿ ರೂ.ಗಳನ್ನು ಪಾವತಿಸಲಾಗಿತ್ತು ಎಂಬ ಮಾಹಿತಿ ತಿಳಿದುಬಂದಿದೆ.
|
| 6 |
+
ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರು ಆತಹತ್ಯೆ ಮಾಡಿಕೊಂಡ ಬಳಿಕ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯಸರ್ಕಾರ ತನಿಖೆಯನ್ನು ಎಸ್ಐಟಿಗೆ ವಹಿಸಿದೆ. ಮತ್ತೊಂದೆಡೆ ಬ್ಯಾಂಕ್ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸಿಬಿಐ ಕೂಡ ಎಫ್ಐಆರ್ ದಾಖಲಿಸಿದೆ.ಹಗರಣಕ್ಕೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ಕೂಡ ನೀಡಿದ್ದಾರೆ.
|
eesanje/url_46_113_10.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ಪ್ರಮಾಣವಚನ ಸ್ವೀಕರಿಸಿದ ಸುರಪುರ ನೂತನ ಶಾಸಕ ರಾಜಾ ವೇಣುಗೋಪಾಲ ನಾಯಕ
|
| 2 |
+
ಬೆಂಗಳೂರು,ಜೂ.11– ಸುರಪುರ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾಗಿದ್ದ ರಾಜಾ ವೇಣುಗೋಪಾಲ ನಾಯಕ ಅವರು ಇಂದು ವಿಧಾನಸಭೆ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
|
| 3 |
+
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಪ್ರಮಾಣವಚನ ಬೋಧಿಸಿದರು. ವಿಧಾನಸಭಾ ಸದಸ್ಯರಾಗಿ ದೇವರ ಹೆಸರಿನಲ್ಲಿ ಅಧಿಕಾರ ಹಾಗೂ ಗೌಪ್ಯತಾ ಪ್ರಮಾಣವಚನವನ್ನು ವೇಣುಗೋಪಾಲ ನಾಯಕ ಸ್ವೀಕರಿಸಿದರು.
|
| 4 |
+
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಖಾದರ್, ಸಚಿವ ಶರಣಬಸಪ್ಪ ದರ್ಶನಪುರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅವರನ್ನು ಅಭಿನಂದಿಸಿದರು. ಈ ವೇಳೆ ಶಾಸಕರಾದ ಬಿ.ಚಿಮನಕಟ್ಟಿ, ಅಲ್ಲಮಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಸಂಸದ ಕುಮಾರ್ ನಾಯಕ್, ವಿಧಾನಸಭೆ ಕಾರ್ಯದರ್ಶಿ ಎನ್.ಕೆ.ವಿಶಾಲಾಕ್ಷಿ ಮತ್ತಿತರರು ಇದ್ದರು.
|
| 5 |
+
ಕಾಂಗ್ರೆಸ್ ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕಳೆದ ಫೆಬ್ರವರಿ 25ರಂದು ನಿಧನರಾಗಿದ್ದರು. ಅವರ ನಿಧನದಿಂದ ತೆರವಾಗಿದ್ದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಲೋಕಸಭೆ ಎರಡನೇ ಹಂತದ ಚುನಾವಣೆ ಸಂದರ್ಭದಲ್ಲೇ ಉಪಚುನಾವಣೆ ನಡೆದಿತ್ತು.ಉಪಚುನಾವಣೆಯಲ್ಲಿ ವೇಣುಗೋಪಾಲ್ ನಾಯಕ್ ಅವರು ಚುನಾಯಿತರಾಗಿದ್ದರು.
|
eesanje/url_46_113_11.txt
ADDED
|
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮೊದಲ ಮೀಟಿಂಗ್ ಮಾಡಿದ ಹೆಚ್ಡಿಕೆ
|
| 2 |
+
ನವದೆಹಲಿ,ಜೂ.11-ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆ ಸೇರಿದಂತೆ ರಾಷ್ಟ್ರದ ಉಕ್ಕಿನ ಕಾರ್ಖಾನೆಗಳ ಪುನಶ್ಚೇತನದ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ.
|
| 3 |
+
ಅಧಿಕಾರ ಸ್ವೀಕಾರ ಮಾಡುವ ಮುನ್ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಭದ್ರಾವತಿ ಕಬ್ಬಿಣ್ಣ ಮತ್ತು ಉಕ್ಕಿನ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಚರ್ಚೆ ನಡೆಸಿದರು. ಕಾರ್ಖಾನೆಗಳ ಪುನಶ್ಚೇತನದ ಸಾಧ್ಯಸಾಧ್ಯತೆಗಳು, ಪುನಶ್ಚೇತನಕ್ಕಿರುವ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
|
| 4 |
+
ಕರ್ನಾಟಕದ ಕುದುರೆಮುಖದಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ಜಗತ್ತಿನಲ್ಲೇ ಶ್ರೇಷ್ಠ ಗುಣಮಟ್ಟದ ಅದಿರಾಗಿತ್ತು ಎಂದು ಹೇಳುವ ಮೂಲಕ ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆಯ ಬಗ್ಗೆ ಅಧಿಕಾರಿಗಳು ಸಚಿವರ ಗಮನ ಸೆಳೆದರು. ಉಕ್ಕಿನ ಸಂಶೋಧನೆಗೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು.
|
| 5 |
+
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತಾವು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿದ್ದ ಕೆಲಸಗಳ ಮಾಹಿತಿಯನ್ನು ನೀಡಿ ಕಾಂಪಿಟ್ ವಿತ್ ಚೀನಾ ಪರಿಕಲ್ಪನೆಯ ಬಗ್ಗೆ ವಿವರಿಸಿದರು.
|
| 6 |
+
ಇದು ಅಧಿಕಾರಿಗಳ ಮೆಚ್ಚುಗೆಗೂ ಪಾತ್ರವಾಯಿತು. ದೇಶದ ಎಲ್ಲಾ ರಾಜ್ಯಗಳ ಕೈಗಾರಿಕಾಭಿವೃದ್ದಿ ತಮ ಗುರಿಯಾಗಿದ್ದು, ಪ್ರಧಾನಿ ನರೇಂದ್ರಮೋದಿಯವರ ಮೇಕಿನ್ ಇಂಡಿಯಾ ಪರಿಕಲ್ಪನೆಯಡಿ ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿ ಮಾಡುವ ಗುರಿಗೆ ತಲುಪಲು ಎಲ್ಲರೂ ಸಾಥ್ ನೀಡೋಣ ಎಂದು ಅಧಿಕಾರಿಗಳಿಗೆ ತಿಳಿಸಿದರು.
|
| 7 |
+
ಪುನಶ್ಚೇತನಗೊಳಿಸಲು ಅವಕಾಶ ಇರುವ ಕೈಗಾರಿಕೆಗಳನ್ನು ಮಾತ್ರ ಅಭಿವೃದ್ಧಿಪಡಿಸೋಣ. ವಿನಾಕಾರಣ ಜನರ ತೆರಿಗೆ ಹಣ ಪೋಲು ಮಾಡುವುದು ಬೇಡ. ಪ್ರಧಾನಿಯವರು ಬಹಳ ವಿಶ್ವಾಸವಿಟ್ಟು ಮಹತ್ವದ ಈ ಖಾತೆಯನ್ನು ನೀಡಿದ್ದಾರೆ. ಅವರ ನಿರೀಕ್ಷೆ ಹುಸಿಯಾಗಬಾರದೆಂದು ಕಿವಿಮಾತು ಹೇಳಿದರು.
|
| 8 |
+
ಇದೇ ಸಂದರ್ಭದಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರಿಂದು ಪ್ರಕಾಶ್ ಅವರು ಬಿಲಾಯ್ ಸೇರಿ ಇತರೆ ಉಕ್ಕು ತಯಾರಿಕಾ ಘಟಕಗಳಿಗೆ ಭೇಟಿ ನೀಡುವಂತೆ ಕೋರಿದರು. ಸಭೆಯಲ್ಲಿ ಉಕ್ಕು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಕೃತಿ ಲಿಖಿ, ಜಂಟಿ ಕಾರ್ಯದರ್ಶಿ ವಿನೋದ್ಕುಮಾರ್ ತ್ರಿಪಾಠಿ, ಆರ್ಥಿಕ ಸಲಹೆಗಾರ ಅಶ್ವಿನ್ಕುಮಾರ್, ಉಪಕಾರ್ಯದರ್ಶಿ ಸುಭಾಷ್ಕುಮಾರ್ ಪಾಲ್ಗೊಂಡಿ���್ದರು.
|
eesanje/url_46_113_12.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕೊಲೆಯಾದ ರೇಣುಕಾಸ್ವಾಮಿ ಯಾರು..? ಹಿನ್ನೆಲೆ ಏನು..?
|
| 2 |
+
ಬೆಂಗಳೂರು :ನಟ ದರ್ಶನ್ ಹಾಗೂ ಅವರ ಹಿಂಬಾಲಕರಿಂದ ಕೊಲೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಚಿತ್ರದುರ್ಗದ ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯ ನಿವಾಸಿ, ಬೆಸ್ಕಾಂ ನಿವೃತ್ತ ಉದ್ಯೋಗಿ ಶಿವನಗೌಡ-ರತ್ನಪ್ರಭಾ ದಂಪತಿ ಪುತ್ರ ರೇಣುಕಾಸ್ವಾಮಿ. ಎರಡು ವರ್ಷದ ಹಿಂದೆಯಷ್ಟೇ ರೇಣುಕಾಸ್ವಾಮಿ ವಿವಾಹವಾಗಿದ್ದು, ಪತ್ನಿ ಸಹನಾ ಈಗ 3 ತಿಂಗಳ ಗರ್ಭಿಣಿ.
|
| 3 |
+
ರೇಣುಕಾಸ್ವಾಮಿ ಮೆಡಿಕಲ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದರು. ದರ್ಶನ್ ಬಾಳಿನಲ್ಲಿ ಪವಿತ್ರ ಇರುವುದು ಇಷ್ಟವಿರಲಿಲ್ಲ. ಹಾಗಾಗಿ ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ನಟಿ ಪವಿತ್ರಾ ಗೌಡಗೆ ದರ್ಶನ್ ಸಂಸಾರ ಹಾಳು ಮಾಡದೆ ಅವರಿಂದ ದೂರ ಇರುವಂತೆ ಆಗಾಗ್ಗೆ ಮೆಸೇಜ್ ಹಾಕುತ್ತಿದ್ದನು ಎಂದು ಹೇಳಲಾಗಿದೆ.
|
| 4 |
+
ಕಳೆದ ಶನಿವಾರ ಏಕಾಏಕಿ ರೇಣುಕಾಸ್ವಾಮಿ ನಾಪತ್ತೆಯಾಗಿದ್ದರು. ಇವರ ಮನೆಯವರು ಎಲ್ಲ ಕಡೆ ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ.
|
| 5 |
+
ಬೈಕ್ ಪತ್ತೆ:ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ವೈನ್ಸ್ ಸಮೀಪ ರೇಣುಕಾ ಅವರ ಬೈಕ್ ಪತ್ತೆಯಾಗಿತ್ತು.
|
| 6 |
+
ನಿನ್ನೆ ಕುಟುಂಬದವರಿಗೆ ಮಾಹಿತಿ:ನಗರದ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಗ್ಗೆ ದೊರೆತ ಶವದ ಗುರುತು ಪತ್ತೆಹಚ್ಚಿದಾಗ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುದು ಖಚಿತಪಡಿಸಿಕೊಂಡು ಅವರ ಕುಟುಂಬದವರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ತಕ್ಷಣ ನಗರಕ್ಕೆ ಬಂದು ಮೃತದೇಹವನ್ನು ನೋಡಿ ನಮ ಮಗ ರೇಣುಕಸ್ವಾಮಿಯದೇ ಎಂದು ಗುರುತಿಸಿದ್ದಾರೆ.
|
| 7 |
+
ಬುದ್ದಿ ಹೇಳಲು ಕರೆತಂದಿದ್ದ ಬಾಡಿಗಾರ್ಡ್ಗಳು:ರೇಣುಕಾಸ್ವಾಮಿಗೆ ಬುದ್ದಿ ಹೇಳಲು ಆತನನ್ನು ನಗರಕ್ಕೆ ಕರೆಸಿಕೊಂಡಿದ್ದ ದರ್ಶನ್ ಬಾಡಿಗಾರ್ಡ್ಗಳು ಹಾಗೂ ಇನ್ನಿತರರು ಸೇರಿಕೊಂಡು ಹಲ್ಲೆ ಮಾಡಿದ್ದರಿಂದ ಪ್ರಾಣ ಬಿಟ್ಟಿದ್ದಾರೆ.
|
eesanje/url_46_113_2.txt
ADDED
|
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ನಟ ದರ್ಶನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳಿರುವುದು ಕಂಡುಬಂದಿಲ್ಲ : ಪರಮೇಶ್ವರ್ ಸ್ಪಷ್ಟನೆ
|
| 2 |
+
ಬೆಂಗಳೂರು, ಜೂ. 12-ನಟ ದರ್ಶನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ನಮಗೆ ಕಂಡುಬರುತ್ತಿಲ್ಲ. ನಮ ಬಳಿ ಯಾರೂ ಪ್ರಕರಣದಲ್ಲಿ ಪ್ರಭಾವ ಬೀರಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಪೊಲೀಸರು ತೆಗೆದುಕೊಳ್ಳುತ್ತಾರೆ. ಸರ್ಕಾರದ ವತಿಯಿಂದ ಯಾರೂ ಮಧ್ಯಪ್ರವೇಶ ಮಾಡುವುದಿಲ್ಲ. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದರು.
|
| 3 |
+
ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ದರ್ಶನ್ರನ್ನು ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ದರ್ಶನ್ಗಾಗಲೀ, ಪರಮೇಶ್ವರ್ಗಾಗಲೀ ಎಲ್ಲರಿಗೂ ಕಾನೂನು ಒಂದೇ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.ಕೊಲೆಯಾದ ರೇಣುಕಾಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರ ಶ್ರೀಮತಿಯವರ ಬಗ್ಗೆ ಪೋಸ್ಟ್ ಮಾಡಿದ್ದ ಎಂದು ಹೇಳಲಾಗಿದೆ. ಅದಕ್ಕೆ ದೂರು ನೀಡಬಹುದಿತ್ತು. ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಿದ್ದರು.
|
| 4 |
+
ಅದನ್ನು ಬಿಟ್ಟು ಕರೆತಂದು ಹೊಡೆದು ಸಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯನ್ನು ತಡೆಯಬಹುದಿತ್ತು. ನಡೆದುಹೋಗಿದೆ. ಜೀವ ಹೋಗಿದೆ. ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಪೊಲೀಸರು ಮಾಡುತ್ತಾರೆ ಎಂದು ಹೇಳಿದರು.
|
| 5 |
+
ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ಗೆ ಬಿರಿಯಾನಿ ಅಥವಾ ಚಿಕನ್ ತಂದುಕೊಟ್ಟಿದ್ದಾರಾ ನನಗೆ ಗೊತ್ತಿಲ್ಲ. ಉಪವಾಸದಿಂದ ಸಾಯಿಸಲಿಕ್ಕಂತೂ ಆಗುವುದಿಲ್ಲ. ಪೊಲೀಸ್ ಠಾಣೆಯಲ್ಲಿ ಊಟ ತರಿಸಿಕೊಡುವುದು ಸಾಮಾನ್ಯ ಎಂದರು.ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡುವ ಸಂಬಂಧ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಲಾಗುವುದು. ಕುಟುಂಬದ ಸದಸ್ಯರು ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
|
| 6 |
+
ಎಲ್ಲವನ್ನೂ ಸಿಬಿಐಗೆ ಕೊಡುವ ಅಗತ್ಯವಿಲ್ಲ. ಈಗಾಗಲೇ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 13 ಜನರನ್ನು ಬಂಧಿಸಲಾಗಿದೆ. ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂಬುದು ಹೆಚ್ಚೂ ಕಡಿಮೆ ಗೊತ್ತಾಗಿದೆ. ಹೀಗಾಗಿ ಬೇರೆ ಸಂಸ್ಥೆಯ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದರು.
|
| 7 |
+
ವಿಚಾರಣೆ ವೇಳೆ ದರ್ಶನ್ ಕೃತ್ಯವನ್ನು ಒಪ್ಪಿಕೊಂಡಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಪೊಲೀಸರು ಯಾವ ಪ್ರಶ್ನೆ ಕೇಳುತ್ತಾರೆ, ಯಾವ ರೀತಿ ತನಿಖೆ ಮಾಡುತ್ತಾರೆ ಎಂಬೆಲ್ಲಾ ವಿಚಾರಗಳು ನಮಗೆ ಮಾಹಿತಿ ಇರುವುದಿಲ್ಲ. ಅಂತಿಮ ವರದಿಯಲ್ಲಿ ಮಾತ್ರ ವಿಚಾರ ತಿಳಿಯುತ್ತದೆ ಎಂದು ಹೇಳಿದರು.
|
| 8 |
+
ದರ್ಶನ್ ಈ ಹಿಂದೆ ಹಲವು ಕೃತ್ಯಗಳಲ್ಲಿ ಇದೇ ರೀತಿ ಭಾಗಿಯಾಗಿದ್ದರು ಎಂದು ಮಾಧ್ಯಮಗಳಲ್ಲಿ ನೋಡಿದ್ದೇನ��. ಅವರ ವಿರುದ್ಧ ರೌಡಿಶೀಟ್ ತೆರೆಯಬೇಕೇ, ಬೇಡವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿ ಯಾವ ರೀತಿ ಶಿಫಾರಸು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ. ಅಂತಹ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವಿದೆ ಎಂದರು.
|
| 9 |
+
ರೇಣುಕಾಸ್ವಾಮಿ ಅವರು ದರ್ಶನ್ರ ಅಭಿಮಾನಿಯಾಗಿದ್ದರು ಎಂಬುದನ್ನು ನಾನು ಮಾಧ್ಯಮದವರಿಂದಲೇ ತಿಳಿದುಕೊಂಡಿದ್ದೇನೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರೋಕ್ಸೊ ಪ್ರಕರಣದ ತನಿಖೆ ನಡೆಯುತ್ತಿದೆ. ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಯಾವುದೇ ಆದೇಶಗಳಿಲ್ಲ ಎಂದು ಹೇಳಿದರು.
|
| 10 |
+
ಮಾದಕವಸ್ತು ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರಾಗಿಣಿ ತ್ರಿವೇದಿ ಅವರನ್ನು ಬಾಲಕಾರ್ಮಿಕ ಜಾಗೃತಿ ಅಭಿಯಾನದ ರಾಯಭಾರಿಯಾಗಿ ಪರಿಗಣಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅದು ಕಾರ್ಮಿಕ ಇಲಾಖೆಗೆ ಸೇರಿದ ವಿಚಾರ. ಅವರು ನಮನ್ನಂತೂ ಕೇಳುವುದಿಲ್ಲ ಎಂದರು.
|
| 11 |
+
ಪಿಎಸ್ಐ ನೇಮಕಾತಿ ಕುರಿತಂತೆ ಇಂದು ಪ್ರಗತಿ ಪರಿಶೀಲನೆ ನಡೆಸಲಾಗುವುದು. 545 ಹುದ್ದೆಗಳಿಗೆ ಆಯ್ಕೆಯಾಗಿರುವವರಿಗೆ ಶೀಘ್ರವೇ ನೇಮಕಾತಿ ಆದೇಶ ನೀಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೆಲವರು ನ್ಯಾಯಾಲಯಕ್ಕೆ ಹೋಗಿ ಅಲ್ಲಿಂದ ಆದೇಶಗಳನ್ನು ತಂದಾಗ ನಮ ಕೈಕಟ್ಟಿಹಾಕಿದಂತಾಗುತ್ತದೆ ಎಂದು ಹೇಳಿದರು.
|
| 12 |
+
545 ಹುದ್ದೆಗಳಿಗೆ ಪರೀಕ್ಷೆ, ಮರುಪರೀಕ್ಷೆ ಸೇರಿ ಹಲವು ಪ್ರಯತ್ನಗಳಾಗಿವೆ. ಇದಾದ ಬಳಿಕ 403 ಹುದ್ದೆಗಳ ನೇಮಕಾತಿ, ಅನಂತರ ಖಾಲಿ ಇರುವ 600 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. 545 ಹುದ್ದೆಗಳ ವಿವಾದ ಇತ್ಯರ್ಥವಾಗದ ಹೊರತು ಉಳಿದವುಗಳ ನೇಮಕಾತಿ ಆಗುವುದಿಲ್ಲ ಎಂದರು.
|
eesanje/url_46_113_3.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ನಟ ದರ್ಶನ್ ಮಾಡಿರುವುದು ಹೇಯ ಕೃತ್ಯ : ಜಗದೀಶ್ ಶೆಟ್ಟರ್
|
| 2 |
+
ಹುಬ್ಬಳ್ಳಿ, ಜೂ.12-ನಟ ದರ್ಶನ್ ಮಾಡಿರುವುದು ಹೇಯ ಕೃತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
|
| 3 |
+
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಮೂಲಕ ತಮ ತಮ ಅಭಿಪ್ರಾಯ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ. ಅದರೆ ಅದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ. ದರ್ಶನ್ ಹಾಗೂ ಅವರ ಟೀಂ ಮಾಡಿದ್ದು ರಾಕ್ಷಸ ಪ್ರವೃತ್ತಿ ಎಂದರು.
|
| 4 |
+
ರೇಣುಕಾಸ್ವಾಮಿ ಮಾಡಿದ್ದು ತಪ್ಪು ಆಗಿದ್ದರೆ ಕಾನೂನು ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಈ ಮಟ್ಟಕ್ಕೆ ಹೋಗುವುದು ಸರಿಯಲ್ಲ ಎಂದರು.ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಅವರು, ನಾನು ಮೊದಲೇ ಹೇಳಿದ್ದೆ, ಐದು ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿ ಗ್ಯಾರಂಟಿಗಳಿಂದ ಆರ್ಥಿಕ ವ್ಯವಸ್ಥೆ ಹೆದಗೆಟ್ಟಿದೆ ಎಂದು ಅವರ ಪಕ್ಷದ ಶಾಸಕರೇ ಹೇಳಿದ್ದರಲ್ಲಿ ತಪ್ಪು ಇಲ್ಲ ಎಂದರು.
|
| 5 |
+
ಇನ್ನೂ ತಾವು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಿ ಎಂಬ ಕುರಿತು ಮಾತನಾಡಿದ ಅವರು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಆಗಿದ್ದು ಪಕ್ಷ ಯಾವ ಜವಾಬ್ದಾರಿ ಕೊಡುತ್ತದೆ ಅದನ್ನ ನಿಭಾಯಿಸಿಕೊಂಡು ಹೋಗಲು ಸಿದ್ಧ ಎಂದರು.
|
| 6 |
+
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮೇಲೆ ಚಾಕು ಇರಿತ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಈ ರೀತಿಯಾಗಿ ನಡೆಯಬಾರದು. ಪೊಲೀಸರು ಎಚ್ಚರಿಕೆ ವಹಿಸಬೇಕು ಎಂದರು
|
eesanje/url_46_113_4.txt
ADDED
|
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಜನರ ಆರೋಗ್ಯ ಹಾಳುಮಾಡುತ್ತಿವೆ ಸ್ವಚ್ಛತೆ ಕಾಪಾಡಿಕೊಳ್ಳದ ಹೋಟೆಲ್ಗಳು
|
| 2 |
+
ಬೆಂಗಳೂರು,ಜೂ.12-ಸಿಲಿಕಾನ್ ಸಿಟಿಯಲ್ಲಿ ಹೈಜೆನಿಕ್ ಎನ್ನುವುದೇ ಮಾಯವಾಗಿದೆ. ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಅಲ್ಲಿ ಎಗ್ಗಿಲ್ಲದೆ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಇಷ್ಟೆಲ್ಲಾ ಆದರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾತ್ರ ಜನರ ಆರೋಗ್ಯಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಕೈ ಕಟ್ಟಿ ಕುಳಿತಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
|
| 3 |
+
ನಗರದ ಬಹುತೇಕ ಪ್ರದೇಶಗಳ ರಸ್ತೆ ಬದಿಗಳಲ್ಲಿ ಮತ್ತು ರಾಜಕಾಲುವೆಗಳ ಪಕ್ಕದಲ್ಲೇ ಹೋಟೆಲ್ಗಳನ್ನು ತೆರೆದು ವ್ಯಾಪಾರ ಮಾಡುವುದು ಕಂಡುಬರುತ್ತದೆ ಕೆಲವು ಪ್ರದೇಶಗಳಲ್ಲಿ ಹೈಜೆನಿಕ್ ಕಾಪಾಡಿಕೊಳ್ಳದಿರುವುದು ಕಂಡು ಬಂದರೂ ಆರೋಗ್ಯಾಧಿಕಾರಿಗಳು ಕಣುಚ್ಚಿ ಕುಳಿತಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
|
| 4 |
+
ಅದರಲ್ಲೂ ನಗರದ ಹೃದಯ ಭಾಗದಲ್ಲಿರುವ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದ ರಸ್ತೆ ತುಂಬಾ ಹೋಟೆಲ್ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಕೆಲವರು ಬಿಬಿಎಂಪಿಯಿಂದ ವ್ಯಾಪಾರ ಪರವಾನಿಗಿ ಪಡೆದುಕೊಂಡಿದ್ದರೆ ಉಳಿದವರು ಯಾವುದೇ ಅನುಮತಿ ಇಲ್ಲದೆ ರಸ್ತೆ ಬದಿಯಲ್ಲೇ ಹೋಟೆಲ್ ತೆರೆದು ವ್ಯಾಪಾರ ಮಾಡುತ್ತಿದ್ದಾರೆ.
|
| 5 |
+
ಹೀಗಾಗಿ ಇಡೀ ರಸ್ತೆ ಗಬ್ಬೇದ್ದು ಹೋಗಿದ್ದು ಅಲ್ಲಿ ಹೈಜೆನಿಕ್ ಎನ್ನವುದೇ ಮಾಯವಾಗಿದೆ. ಈ ರಸ್ತೆಯಲ್ಲಿರುವ ಹೋಟೆಲ್ಗಳಲ್ಲಿ ಊಟ ಮಾಡಿರುವ ಕೆಲವರಿಗೆ ವಾಂತಿ ಭೇದಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
|
| 6 |
+
ಅದೇ ರಸ್ತೆಯಲ್ಲಿ ಊಟ ಮಾಡಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇತ್ತಿಚೆಗಷ್ಟೇ ಚೇತರಿಸಿಕೊಂಡಿರುವ ವ್ಯಕ್ತಿಯೊಬ್ಬರು ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಪಕ್ಕದ ರಸ್ತೆಯಲ್ಲಿರುವ ಪ್ರದೇಶಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವಂತೆ ನೀಡಿದ್ದ ಸಲಹೆ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿನ ಕರ್ಮಕಾಂಡ ಬಯಲಾಗಿದೆ.
|
| 7 |
+
ಈ ರಸ್ತೆಯಲ್ಲಿರುವುದು ಬಹುತೇಕ ಹೋಟೆಲ್ಗಳೇ ಬಹುತೇಕ ಹೋಟೆಲ್ಗಳಲ್ಲಿ ಹೈಜೆನಿಕ್ ಎನ್ನುವುದೇ ಇಲ್ಲ. ಅಂತಹ ಸ್ಥಳಗಳಲ್ಲಿ ಊಟ ಮಾಡಿದರೆ ಅಂತವರನ್ನು ಆ ದೇವರೇ ಕಾಪಾಡಬೇಕು ಎನ್ನುವಂತಹ ಪರಿಸ್ಥಿತಿಯಿರುವುದು ಕಂಡು ಬಂದಿದೆ.
|
| 8 |
+
ಈಗಲಾದರೂ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕಾನೂನುಬಾಹಿರವಾಗಿ ನಡೆಸುತ್ತಿರುವ ಹೋಟೆಲ್ಗಳು ಹಾಗೂ ಹೈಜೆನಿಕ್ ಕಾಪಾಡಿಕೊಳ್ಳದೆ ಇರುವಂತವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಸಹಕರಿಸಬೇಕು ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.
|
eesanje/url_46_113_5.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಖಾಸಗಿ ವಿಡಿಯೋ ವೈರಲ್ ಬೆದರಿಕೆ : ಅಣ್ಣನ ಜೊತೆ ಪ್ರಿಯಕರನನ್ನು ಕೊಂದ ಪ್ರೇಮಿ
|
| 2 |
+
ಮೈಸೂರು, ಜೂ.12-ಖಾಸಗಿ ಫೋಟೋ ಹಾಗೂ ವಿಡಿಯೋ ವೈರಲ್ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ ಪ್ರಿಯತಮನನ್ನು ಪ್ರಿಯತಮೆ ಹಾಗೂ ಸಹೋದರ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ.ಎಚ್ಡಿ ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ನಿವಾಸಿ ರಾಜೇಶ್ ಕೊಲೆಯಾದ ಪ್ರಿಯತಮ.
|
| 3 |
+
ಪ್ರಿಯತಮನ ಮೇಲೆ ಕಲ್ಲುಚಪ್ಪಡಿ ಹಾಕಿ ಕೊಲೆಗೈದ ಪ್ರಿಯತಮೆ ಹಾಗೂ ಈಕೆಯ ಸಹೋದರ ಪೊಲೀಸರ ಅತಿಥಿಯಾಗಿದ್ದಾನೆ. ಮೈಸೂರಿನ ಕ್ಯಾತಮಾರನಹಳ್ಳಿಯ ಪ್ರೇಮ ಎಂಬ ಮಹಿಳೆ ಕಳೆದ 15 ವರ್ಷಗಳ ಹಿಂದೆ ನಂಜನಗೂಡಿನ ಶ್ರೀರಾಂಪುರದ ನಿವಾಸಿಯನ್ನು ವಿವಾಹವಾಗಿದ್ದರು.
|
| 4 |
+
ಒಂದು ತಿಂಗಳ ಹಿಂದೆ ಮಹಿಳೆ ಪತಿ ತೀರಿಕೊಂಡಿದ್ದರು. ಪ್ರೇಮಾ ಪತಿ ಜತೆ ರಾಜೇಶ್ ಆತೀಯನಾಗಿದ್ದ. ಆಗಾಗ್ಗೆ ಪ್ರೇಮಾಳ ಮನೆಗೆ ಬಂದು ಹೋಗುತ್ತಿದ್ದ. ಕೆಲ ದಿನಗಳ ನಂತರ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಈ ಸೇಡಿಗಾಗಿ ಖಾಸಗಿ ವಿಡಿಯೋ ಹಾಗೂ ಆಡಿಯೋಗಳನ್ನು ವೈರಲ್ ಮಾಡುವುದಾಗಿ ಪ್ರೇಮಾಗೆ ರಾಜೇಶ್ ಬೆದರಿಕೆ ಹಾಕಿದ್ದ.
|
| 5 |
+
ಇದೇ ವಿಚಾರವಾಗಿ ಮಾತನಾಡಬೇಕೆಂದು ಪ್ರೇಮಾ ರಾಜೇಶ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಪ್ರೇಮಾ ಸಹೋದರನ ಜತೆ ಸೇರಿ ರಾಜೇಶ್ ಜತೆ ಜಗಳವಾಡಿ ವಾರ್ನಿಂಗ್ ಮಾಡಿದ್ದಾರೆ. ಇದರಿಂದ ತಪ್ಪಿಸಿಕೊಂಡು ಹೋಗುತ್ತಿರುವಾಗ ಆರ್ಪಿ ರಸ್ತೆಯ 8ನೆ ಕ್ರಾಸ್ ಬಳಿ ಅಡ್ಡ ಹಾಕಿ ಜಗಳ ತೆಗೆದು ಕಲ್ಲುಚಪ್ಪಡಿಯನ್ನು ತಲೆ ಮೇಲೆ ಹಾಕಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
|
| 6 |
+
ಈ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸುದ್ದಿ ತಿಳಿದ ಕೂಡಲೇ ನಂಜನಗೂಡು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಪ್ರೇಮಾ ಹಾಗೂ ಸಹೋದರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
|
eesanje/url_46_113_6.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವಿಶ್ವದ ಶ್ರೇಷ್ಠ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ
|
| 2 |
+
ಮೈಸೂರು, ಜೂ.12-ವಿಶ್ವ ಸಂಗೀತ ಲೋಕದ ಧ್ರುವತಾರೆ, ಖ್ಯಾತ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು, ಸಚಿವರು, ಶಾಸಕರು, ಕಲಾವಿದರು, ನ್ಯಾಯಾಧೀಶರು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
|
| 3 |
+
ಪಂ.ರಾಜೀವ್ ತಾರಾನಾಥ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ರಾಜೀವ್ ತಾರಾನಾಥ್ ಅವರು ಕರ್ನಾಟಕದ ಹೆಮೆಯ ದಿಗ್ಗಜ ಕಲಾವಿದರಲ್ಲಿ ಒಬ್ಬರು, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಅವರ ಹೆಸರು ಅಜರಾಮರವಾಗಿ ಉಳಿಯುವಂತಹದ್ದು ಎಂದು ಅವರು ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.
|
| 4 |
+
ಅಂತಹ ಅದ್ಭುತ ಕಲಾವಿದ ವಿಧಿವಶರಾಗಿದ್ದು ನಮ ದುರ್ದೈವ, ಅವರ ನಿಧನದಿಂದ ಕರ್ನಾಟಕದ ಸಾಂಸ್ಕೃತಿಕ ಲೋಕ ಬಹಳ ದೊಡ್ಡ ನಷ್ಟ ಅನುಭವಿಸಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.ದೇಶ ವಿದೇಶಗಳಲ್ಲಿ ಅವರು ತಮ ಸಂಗೀತದ ಮೂಲಕ ಕರ್ನಾಟಕದ ಕೀರ್ತಿಯನ್ನ ಪಸರಿಸಿದ್ದಾರೆ, ಕ್ಯಾಲಿೇರ್ನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು.
|
| 5 |
+
ಸಂಗೀತ ನಾಟಕ ಅಕಾಡೆಮಿ ಹಾಗೂ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗಳು ಸೇರಿದಂತೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದ ರಾಜೀವ್ ತಾರಾನಾಥ್ ಈ ದೇಶ ಕಂಡ ಅತ್ಯಂತ ಅಪರೂಪದ ಕಲಾವಿದರು.
|
| 6 |
+
ರಾಜೀವ್ ತಾರಾನಾಥ್ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳು ಹಾಗೂ ಶಿಷ್ಯ ವೃಂದದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ, ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರಿಗೆ ನೀಡಲಿ ಎಂದು ಸಚಿವ ಶಿವರಾಜ ತಂಗಡಗಿ ತಮ ಸಂದೇಶದಲ್ಲಿ ತಿಳಿಸಿದ್ದಾರೆ.ತಾರಾನಾಥ್ ಅವರ ನಿಧನದಿಂದ ಸಂಗೀತ ಕ್ಷೇತ್ರ ಸೊರಗಿದಂತಾಗಿದೆ ಎಂದು ಸಂಗೀತ ಕ್ಷೇತ್ರದ ಅನೇಕ ದಿಗ್ಗಜರು ತಮ ಸಂತಾಪಸೂಚಕದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.ಸಚಿವರು, ಕಲಾವಿದರು ತಾರಾನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
|
eesanje/url_46_113_7.txt
ADDED
|
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಪರಿಗಣನೆ : ಸಿಎಂ
|
| 2 |
+
ಬೆಂಗಳೂರು,ಜೂ.11-ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪನೂಲ ಕ್ರೂಢೀಕರಣದಲ್ಲಿ ಗುರಿ ಸಾಧಿಸದೇ ಇದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
|
| 3 |
+
ಲೋಕಸಭೆ ಹಾಗೂ ವಿಧಾನಸಭೆಯ ಚುನಾವಣೆ ಮುಗಿದು, ನೀತಿಸಂಹಿತೆ ಮುಕ್ತಾಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಂಪನೂಲ ಕ್ರೂಢೀಕರಣ ಇಲಾಖೆಗಳ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಕಳೆದ ಎರಡು ಮೂರು ತಿಂಗಳಿನಿಂದಲೂ ಕೆಲಸ ಮರೆತಿದ್ದ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.
|
| 4 |
+
ಸಂಪನೂಲ ಸಂಗ್ರಹದಲ್ಲಿ ಮುಂಚೂಣಿ ಇಲಾಖೆಯಾಗಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಆರಂಭದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಯವರು ವಿಭಾಗವಾರು ತೆರಿಗೆ ಸಂಗ್ರಹದ ಕುರಿತು ವಿವರಣೆ ಪಡೆದುಕೊಂಡಿದ್ದಾರೆ.
|
| 5 |
+
ಗುರಿ ಸಾಧಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ವರ್ಗಾವಣೆ ವೇಳೆ ನಿಮ ಕಾರ್ಯಕ್ಷಮತೆಯೇ ಮಾನದಂಡ. ಬೇರೆ ಯಾವ ಪ್ರಭಾವಕ್ಕೂ ನಾನು ಮಣೆ ಹಾಕಲ್ಲ. ಅಂದಾಜು, ಜಾರಿ, ಮೇಲನವಿ ತಂಡಗಳು ನಿರಂತರ ಸಹಕಾರದಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
|
| 6 |
+
ಚುನಾವಣೆ ಸಂಹಿತೆ ಕಾರಣಕ್ಕಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದ ಸಂಪನೂಲ ಸಂಗ್ರಹವಾಗಿಲ್ಲ ಎಂದು ಹೇಳಲಾಗಿದೆ. ಅದರಲ್ಲೂ ಬಹಳಷ್ಟು ಹಿರಿಯ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಹೀಗಾಗಿ ಇಲಾಖೆಯ ಕೆಲಸ ಆಮೆಯ ವೇಗದಲ್ಲಿ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
|
| 7 |
+
ಇಂದಿನ ಸಭೆಯಲ್ಲಿ ಪ್ರತಿ ಹಂತದಲ್ಲೂ ಅಧಿಕಾರಿಗಳ ಆಡಳಿತದ ನಿರ್ಲಕ್ಷ್ಯವನ್ನು ಮುಖ್ಯಮಂತ್ರಿಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಿಗದಿತ ಗುರಿ ತಲುಪಬೇಕು, ಯಾವುದೇ ನೆಪ ಹೇಳಬಾರದು ಎಂದು ಸೂಚಿಸಿದ್ದಾರೆ.
|
| 8 |
+
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿಗಳಾದ ಜಾಫರ್, ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾ ಸಭೆಯಲ್ಲಿ ಉಪಸ್ಥಿತರಿದ್ದರು.
|
| 9 |
+
ನಂತರದಲ್ಲಿ ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಇಲಾಖೆಗಳ ಅಧಿಕಾರಿಗಳೊಂದಿಗೂ ಮುಖ್ಯಮಂತ್ರಿ ಸಮಾಲೋಚನೆ ನಡೆಸಿದ್ದಾರೆ.
|
eesanje/url_46_113_8.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
ವಿನಯ ಕುಲಕರ್ಣಿ ವಿರುದ್ಧದ ದೋಷಾರೋಪ ರದ್ದತಿಗೆ ಸುಪ್ರೀಂ ನಕಾರ
|
| 2 |
+
ಹುಬ್ಬಳ್ಳಿ,ಜೂ.11-ಬಿಜೆಪಿ ಕಾರ್ಯಕರ್ತ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ನಿಗದಿಯಾಗಿರುವ ದೋಷಾರೋಪವನ್ನು ರದ್ದುಪಡಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
|
| 3 |
+
2016ರಲ್ಲಿ ಧಾರವಾಡದಲ್ಲಿ ಯೋಗೇಶ್ ಅವರನ್ನು ಹತ್ಯೆ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಸಂಜಯ್ಕುಮಾರ್ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇದ್ದ ರಜಾಕಾಲದ ವಿಭಾಗೀಯ ಪೀಠವು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ನಿರಾಕರಿಸಿತ್ತು.
|
| 4 |
+
ಕುಲಕರ್ಣಿ ಅವರ ವಿರುದ್ಧ ವಿಶೇಷ ನ್ಯಾಯಾಲಯವು ದೋಷಾರೋಪ ನಿಗದಿ ಮಾಡಿರುವುದರಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ಏಪ್ರಿಲ್ 8ರಂದು ನಿರಾಕರಿಸಿತ್ತು. ವಿಚಾರಣೆಯನ್ನು ಪೂರ್ಣಗೊಳಿಸಿ, ಕ್ರಿಮಿನಲ್ ಪ್ರಕರಣವನ್ನು ಸಾಧ್ಯವಾದಷ್ಟುಮಟ್ಟಿಗೆ ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು.
|
eesanje/url_46_113_9.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ಕರೆ ಮಾಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ
|
| 2 |
+
ಬೆಂಗಳೂರು,ಜೂ.11– ಪ್ರಧಾನಿ ನರೇಂದ್ರಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯ ವಿಚಾರಿಸದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ದೇವೇಗೌಡರು ಅನಾರೋಗ್ಯದ ಹಿನ್ನಲೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.
|
| 3 |
+
ಅನಾರೋಗ್ಯದಿಂದಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. 3ನೇ ಬಾರಿಗೆ ಪ್ರಧಾನಿಯಾಗಿರುವುದಕ್ಕೆ ಶುಭ ಕೋರಿ ದೇವೇಗೌಡರು ಪತ್ರ ಬರೆದಿದ್ದರು.
|
| 4 |
+
ಇದರ ಬೆನ್ನಲ್ಲೇ ಪ್ರಧಾನಿಯವರು ದೇವೇಗೌಡರಿಗೆ ಕರೆ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಈ ವಿಚಾರವನ್ನು ಗೌಡರು ಎಕ್್ಸನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿಯವರು ನನ್ನ ಆರೋಗ್ಯದ ಬಗ್ಗೆ ವಹಿಸಿರುವ ಕಾಳಜಿಗೆ ಅಭಾರಿಯಾಗಿದ್ದೇನೆ. ಅವರ ಈ ಕಾಳಜಿ ನನ್ನನ್ನು ಭಾವುಕರನ್ನಾಗಿಸಿದೆ ಎಂದಿದ್ದಾರೆ.
|
| 5 |
+
ಕರೆ ಮಾಡಿದ ಸಂದರ್ಭದಲ್ಲಿ ಹೊಸ ಸರ್ಕಾರದ ಆಡಳಿತ ವೈಖರಿ, ಆಲೋಚನೆ, ಚಿಂತನೆಗಳ ಬಗ್ಗೆಯೂ ವಿಚಾರ ವಿನಿಮಯ ಮಾಡಿಕೊಂಡರು ಎಂದು ಹೇಳಿರುವ ಗೌಡರು, ಭಾರತವನ್ನು ಮತ್ತಷ್ಟು ಹೆಚ್ಚಿನ ಕೀರ್ತಿಗೆ ಮೋದಿಯವರು ಕೊಂಡಯ್ಯಲಿ. ಭಗವಂತನ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸಿದ್ದಾರೆ.
|
eesanje/url_46_114_1.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ವಿಚಾರಣೆ ಮಾಡುತ್ತಿದ್ದೇವೆ : ಬಿ.ದಯಾನಂದ್
|
| 2 |
+
ಬೆಂಗಳೂರು,ಜೂ.11-ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟಪಡಿಸಿದ್ದಾರೆ.
|
| 3 |
+
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಚಿತ್ರರಂಗದ ನಟ ದರ್ಶನ್ ಹಾಗೂ ಆತನ ಸಹಚರರನ್ನು ಬಂಧಿಸಿ ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಾಗುತ್ತಿದೆ. ಸದ್ಯಕ್ಕೆ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದರು.
|
| 4 |
+
ಚಿತ್ರನಟನ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎಂದು ಪ್ರಾಥಮಿಕ ಹಂತದ ಮಾಹಿತಿಯಲ್ಲಿ ತಿಳಿದುಬಂದಿದೆ. ಸುಮಾರು 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದಲ್ಲಿ ದರ್ಶನ್ರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ. ಮುಂದಿನ ಹಂತದಲ್ಲಿ ಉಳಿದ ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು ಎಂದು ಹೇಳಿದರು.
|
| 5 |
+
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದರ್ಶನ್ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
|
eesanje/url_46_114_10.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕೇಂದ್ರ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲ : ಗೃಹಸಚಿವ ಪರಮೇಶ್ವರ್
|
| 2 |
+
ಬೆಂಗಳೂರು,ಜೂ.10-ಕೇಂದ್ರ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಪಾಲಿಸದೇ ಇರುವ ಬಿಜೆಪಿಗೆ ಪರಿಶಿಷ್ಟರು ಹಾಗೂ ಹಿಂದುಳಿದವರ ಸಹಕಾರ ಬೇಕಿಲ್ಲ ಎಂದೆನಿಸುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿಶ್ಲೇಷಿಸಿದ್ದಾರೆ.
|
| 3 |
+
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯಿಂದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಸಂಸದರು ಆಯ್ಕೆಯಾಗಿದ್ದರು. ಅವರನ್ನು ಕೇಂದ್ರ ಸಂಪುಟಕ್ಕೆ ಪರಿಗಣಿಸಬಹುದಿತ್ತು. ಆ ಸಮುದಾಯಗಳನ್ನು ನಿರ್ಲಕ್ಷಿಸುವುದನ್ನು ನೋಡಿದರೆ ಬಿಜೆಪಿಗೆ ಪರಿಶಿಷ್ಟ ಜಾತಿಯ ಹಾಗೂ ಹಿಂದುಳಿದ ವರ್ಗದ ಸಮುದಾಯಗಳು ಬೇಕಿಲ್ಲ ಎಂದು ಭಾವಿಸಬಹುದು ಎಂದು ಹೇಳಿದರು.
|
| 4 |
+
ರಾಜ್ಯದಿಂದ ಕೇಂದ್ರಸಂಪುಟದಲ್ಲಿ ಸಚಿವರಾಗಿರುವ ಐದು ಮಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೊಸ ಸಚಿವರ ಮುಂದೆ ಸವಾಲುಗಳು ದೊಡ್ಡದಿವೆ. ಜಿಎಸ್ಟಿ ಪಾಲಿನ ಹಂಚಿಕೆ, ರಾಜ್ಯದಲ್ಲಿನ ನೀರಾವರಿ ಯೋಜನೆಗೆ ನೆರವು, ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದು, ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುವುದು, ಮೇಕೆದಾಟಿಗೆ ಅನುಮತಿ ಸೇರಿದಂತೆ ನಾನಾ ರೀತಿಯ ಕೆಲಸಗಳಾಗಬೇಕು. ಕೇಂದ್ರ ಸಚಿವರು ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಪ್ರಧಾನಮಂತ್ರಿಯವರ ಜೊತೆ ಚರ್ಚೆ ನಡೆಸಿ ರಾಜ್ಯಕ್ಕೆ ಅಗತ್ಯ ನೆರವು ಕೊಡಿಸಬೇಕು ಎಂದು ಒತ್ತಾಯಿಸಿದರು.
|
| 5 |
+
ಹೊಸ ಸರ್ಕಾರದ ಮೇಲೆ ಸಾಕಷ್ಟು ವಿಶ್ವಾಸವಿದೆ. ಅದು ಈಡೇರದೇ ಇದ್ದರೆ ಮತ್ತೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಅದಕ್ಕೆ ಅವಕಾಶವಾಗದಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು ಎಂದರು.
|
| 6 |
+
ಎಚ್.ಡಿ.ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಯಾಗಿದ್ದ ಅನುಭವಿ ರಾಜಕಾರಣಿ. ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಅವರು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
|
| 7 |
+
ಜಮು-ಕಾಶೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಿ ಶಾಂತಿಯ ವಾತಾವರಣ ನಿರ್ಮಿಸಲಾಗಿದೆ ಎಂದು ಕೇಂದ್ರಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಭಯೋತ್ಪಾದನಾ ಧಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿ ಚಲಿಸಿದ್ದ ಯೋಧರಿದ್ದ ಬಸ್ಸು ಕಂದಕಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ. ಇದರರ್ಥ ಜಮು-ಕಾಶೀರದಲ್ಲಿ ಭಯೋತ್ಪದನಾ ಚಟುವಟಿಕೆ ಪೂರ್ತಿಯಾಗಿ ನಿಂತಿಲ್ಲ ಎಂದರು.
|
eesanje/url_46_114_11.txt
ADDED
|
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿ ಆರಂಭಿಸಲು ಸೂಚನೆ
|
| 2 |
+
ಬೆಂಗಳೂರು,ಜೂ.10-ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸೂಚನೆ ನೀಡಿದ್ದಾರೆ.
|
| 3 |
+
ವಿಕಾಸ ಸೌಧದ ಸಚಿವರ ಕಾರ್ಯಾಲಯದಲ್ಲಿ ನಡೆದ ಮೃಗಾಲಯ ಪ್ರಾಧಿ ಕಾರದ 156ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಜ್ಯದಲ್ಲಿರುವ ವಿವಿಧ ಮೃಗಾಲಯಗಳಿಗೆ ಪ್ರವಾಸಿಗರನ್ನು ಹೆಚ್ಚು ಗಮನ ಸೆಳೆಯಲು ಮತ್ತು ಆದಾಯ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಿದರು.
|
| 4 |
+
ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಅಕ್ವೇರಿಯಂ (ಮತ್ಸ್ಯಾಗಾರ) ನಿರ್ಮಿಸಲು, ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಸಮಾಲೋಚನಾ ಸಂಸ್ಥೆ ಆಯ್ಕೆ ಮಾಡಲು 15 ದಿನಗಳ ಒಳಗಾಗಿ ಪ್ರಸ್ತಾವನೆ ಮಂಡಿಸಲು ಸೂಚಿಸಲಾಯಿತು. ಮೈಸೂರು ಮೃಗಾಲಯ ಮತ್ತು ಕಾರಂಜಿ ಕೆರೆ ಪ್ರಕೃತಿ ಉದ್ಯಾನದಲ್ಲಿ ಕ್ಯಾಮೆರಾ ಕಾಂಬೋ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರೂ. ಮತ್ತು ವಿಡಿಯೋ ಕ್ಯಾಮರಾಗೆ 300 ರೂ. ದರ ವಿಧಿಸಲು ಅನುಮತಿಸಲಾಯಿತು.
|
| 5 |
+
ಅದೇ ರೀತಿ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಪಿಪಿಪಿ ಮಾದರಿಯಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸಲು ಈಗಾಗಲೇ ನಡೆದಿರುವ ಪರಿಕಲ್ಪನೆ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಜಾಗತಿಕ ಮಾನದಂಡಗಳ ರೀತ್ಯ ಮತ್ಸ್ಯಾಗಾರ ನಿರ್ಮಾಣಕ್ಕೆ ಅನುಮೋದನೆ ನೀಡಲಾಯಿತು.
|
| 6 |
+
ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆ ಆಗದಂತೆ ಮತ್ತು ಮೃಗಾಲಯದಲ್ಲಿರುವ ವನ್ಯಜೀವಿಗಳು ಸೋಂಕು ಇತ್ಯಾದಿಯಿಂದ ಸಾವಿಗೀಡಾಗದಂತೆ ಕ್ರಮ ವಹಿಸಲು ಪಶುವೈದ್ಯರ ನೇಮಕಾತಿಯ ಬಗ್ಗೆ ಚರ್ಚಿಸಿ, ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು. ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸ್ಥಳೀಯ ಪಶುವೈದ್ಯಾಧಿ ಕಾರಿಗಳ ಸೇವೆ ಪಡೆಯಲು ಘಟನೋತ್ತರ ಅನುಮೋದನೆ ನೀಡಲಾಯಿತು.
|
| 7 |
+
ಇತರ ನಿರ್ಣಯಗಳು:ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ, ಪಕ್ಷಿಗಳಿಗೆ ಮತ್ತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಬೆಂಗಳೂರು ಜಲಮಂಡಳಿಯಿಂದ ಕಾವೇರಿ ನೀರು ಒದಗಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು,, ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಹರಿಸುವ ಕ್ರಮ ಕೈಗೊಳ್ಳಲು ಸಮ್ಮತಿ ನೀಡಲಾಗಿದೆ.ಬನ್ನೇರುಘಟ್ಟ ಉದ್ಯಾನದಲ್ಲಿ ನೇರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು 21 ಸಾವಿರ ಮಾಸಿಕ ವೇತನ ಮೀರಿದ 153 ಸಿಬ್ಬಂದಿಗೆ ಸಿ.ಜಿ.ಎಚ್.ಎಸ್. ದರದಂತೆ ವೈದ್ಯಕೀಯ ವೆಚ್ಚ ಭರಿಸಲು ಅನುಮೋದನೆ ಕೊಡಲಾಗಿದೆ.
|
| 8 |
+
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗಿರುವ ರಣಹದ್ದು ಸಂರಕ್ಷಣಾ ಸಂತಾನೋತ್ಪತ್ತಿ ಕೇಂದ್ರವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸ್ಯಾಟಲೈಟ್ ಕೇಂದ್ರವಾಗಿ ಕಾರ್ಯ ನಿರ್ವಹಣೆಗೆ ಅನುಮೋದನೆ ನೀಡಲಾಗಿದೆ.
|
| 9 |
+
ಗದಗ ಮೃಗಾಲಯದ ವಿಸ್ತರಣೆ ಮತ್ತು ಅಭಿವೃದ್ಧಿಗೆ 13.20 ಎಕರೆ ಜಮೀನು ಭೂಸ್ವಾಧೀನ ಮತ್ತು ಮೃಗಾಲಯದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಮಧ್ಯಾಹ್ನದ ಊಟ ಪೂರೈಕೆಗೆ ಸಮ್ಮತಿಸಲಾಗಿದೆ.
|
eesanje/url_46_114_12.txt
ADDED
|
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಚುನಾವಣೆ ಫಲಿತಾಂಶದ ಬಳಿಕ ಹೆಚ್ಚುವರಿ ಡಿಸಿಎಂ ಹುದ್ದೆಯ ಚರ್ಚೆಗೆ ಬ್ರೇಕ್
|
| 2 |
+
ಬೆಂಗಳೂರು,ಜೂ.10– ಜಾತಿವಾರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಪದೇಪದೇ ಪ್ರತಿಪಾದಿಸುತ್ತಿದ್ದ ಸಚಿವರು ಹಾಗೂ ಕಾಂಗ್ರೆಸ್ ನಾಯಕರು ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿದ್ದು, ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆ ಇಲ್ಲ ಎಂದು ಜಾರಿಕೊಳ್ಳಲಾರಂಭಿಸಿದ್ದಾರೆ.
|
| 3 |
+
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಲಿಂಗಾಯತ, ಹಿಂದುಳಿದ ವರ್ಗ ಹಾಗೂ ಮಹಿಳೆ ಸೇರಿದಂತೆ ಐದು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬುದು ಕಾಂಗ್ರೆಸ್ ನಾಯಕರ ಆಗ್ರಹವಾಗಿತ್ತು.
|
| 4 |
+
ಆರಂಭದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಗೃಹ ಸಚಿವ ಪರಮೇಶ್ವರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಹಿರಿಯ ಶಾಸಕ ಬಸವರಾಜರಾಯರೆಡ್ಡಿ ಸೇರಿದಂತೆ ಅನೇಕರು ಧ್ವನಿಗೂಡಿಸಿದ್ದರು.
|
| 5 |
+
ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಮುಜುಗರದ ವಾತಾವರಣ ಸೃಷ್ಟಿಸಿತ್ತು. ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗ ಲೋಕಸಭಾ ಚುನಾವಣೆಯತ್ತ ಗಮನಹರಿಸಿ ಅನಗತ್ಯ ವಿಚಾರಗಳ ಬಗ್ಗೆ ಗೊಂದಲ ಬೇಡ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಯ ಸಾಧ್ಯತೆಗಳನ್ನು ಅಲ್ಲಗಳೆದಿದ್ದರು. ಅಲ್ಲಿಗೆ ಪದೇಪದೇ ಚರ್ಚೆ ಮಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದವರ ಬಾಯಿ ಬಂದ್ ಆಗಿತ್ತು.
|
| 6 |
+
ಲೋಕಸಭಾ ಚುನಾವಣೆ ಬಳಿಕ ಇದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಬಹುದು ಎಂಬ ನಿರೀಕ್ಷೆಗಳಿದ್ದವು. ಆದರೆ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಸಚಿವರ ತವರು ಕ್ಷೇತ್ರದಲ್ಲೇ ಕಾಂಗ್ರೆಸ್ಗೆ ಲೀಡ್ ಕೊರತೆಯಾಗಿದ್ದು, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಮತ ಗಳಿಸಿದ್ದಾರೆ.
|
| 7 |
+
ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿದ್ದಾದರೆ, ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆಯಾಗಬೇಕಾಗುತ್ತದೆ. ಸಚಿವರ ತಲೆದಂಡವಾಗುವ ಸಾಧ್ಯತೆಯೂ ಇದೆ ಎಂಬ ಚರ್ಚೆಗಳಾಗಿದ್ದವು. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ರಾಹುಲ್ಗಾಂಧಿ ಪ್ರಮುಖ ಸಚಿವರ ಜೊತೆ ಸಭೆ ನಡೆಸಿದ್ದು, ಕಾಂಗ್ರೆಸ್ ಸೋಲಿಗೆ ಅಸಮಾಧಾನ ಹೊರಹಾಕಿದ್ದರು. ಸಚಿವರ ಕ್ಷೇತ್ರಗಳಲ್ಲಿನ ಹಿನ್ನಡೆ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು. ಇದು ಬಹಳಷ್ಟು ಮಂದಿ ಸಚಿವರಿಗೆ ಆತಂಕ ಸೃಷ್ಟಿಸಿದ್ದು, ಕುರ್ಚಿಯ ಕುತ್ತಿನ ಕೆಟ್ಟ ಕನಸು ಬೀಳುವಂತಾಗಿದೆ.
|
| 8 |
+
ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಯ ಸದ್ದು ಅಡಗಿ ಹೋಗಿದೆ. ಎಐಸಿಸಿಯ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಕೆಪಿಸಿ��ಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆಯನ್ನು ಸೃಷ್ಟಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.ಒಂದು ಕಾಲದಲ್ಲಿ ಡಿ.ಕೆ.ಶಿವಕುಮಾರ್ ಅವರ ಹುದ್ದೆಯ ತೂಕ ತಗ್ಗಲಿದೆ ಎಂಬ ಕಾರಣಕ್ಕಾಗಿ ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಗೆ ವಿರೋಧ ವ್ಯಕ್ತವಾಗಿತ್ತು. ಈಗ ಖುದ್ದು ಡಿ.ಕೆ.ಶಿವಕುಮಾರ್ ಅವರೇ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಪರವಾಗಿ ಮಾತನಾಡುತ್ತಿದ್ದಾರೆ ಎನ್ನಲಾಗಿದೆ.
|
| 9 |
+
ಆದರೆ ಜಾತಿವಾರು ಪ್ರಾಧಾನ್ಯತೆ ಸಿಗಬೇಕು ಎಂದು ಹೇಳಿದ್ದ ಸಚಿವ ಸತೀಶ್ ಜಾರಕಿಹೊಳಿ, ಸದ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪ ಇಲ್ಲ ಎಂದು ಅಲ್ಲಗಳೆದಿದ್ದಾರೆ. ಇವರ ಪುತ್ರಿ ಪ್ರಿಯಾಂಕ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿ ಫಾರಂ ನೀಡಿದ್ದು, ಅವರು ಗೆದ್ದು ಸಂಸದರಾಗಿದ್ದಾರೆ. ಹೀಗಾಗಿ ಒಂದೇ ಮನೆಗೆ ಸಂಸದ ಸ್ಥಾನ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಎರಡೂ ದೊರೆಯುವ ಅವಕಾಶಗಳು ಇಲ್ಲದಿರುವುದರಿಂದ ಅವರು ಚರ್ಚೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
|
| 10 |
+
ತುಮಕೂರು ಲೋಕಸಭಾ ಕ್ಷೇತ್ರದ ಪೈಕಿ ಕೆ.ಎನ್.ರಾಜಣ್ಣ ಅವರು ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿಗೆ ಹೆಚ್ಚಿನ ಲೀಡ್ ಬಂದಿವೆ. ಹೀಗಾಗಿ ಅವರೂ ಕೂಡ ಉಪಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆ.
|
| 11 |
+
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಉಪಮುಖ್ಯಮಂತ್ರಿ ಹುದ್ದೆ ಪದೇಪದೇ ಚರ್ಚೆಯಾಗುವುದಿಲ್ಲ. ಅಲ್ಲಿಇಲ್ಲಿ ನಾಲ್ಕೈದು ಜನ ಮಾತನಾಡಿದರೆ ಅದು ಈಡೇರುವುದೂ ಇಲ್ಲ. ಸರ್ಕಾರ ಚೆನ್ನಾಗಿ ನಡೆಯುತ್ತಿದೆ ಎಂಬ ಅಭಿಪ್ರಾಯದಲ್ಲಿ ಹೈಕಮಾಂಡ್ ಇದ್ದಾಗ ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.ಒಟ್ಟಾರೆ ಸರ್ಕಾರಕ್ಕೆ ತಲೆನೋವಾಗಬಹುದಾಗಿದ್ದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆಗಳು ಮೋಡ ಕರಗಿದಂತೆ ತಣ್ಣಗಾಗಿವೆ.
|
eesanje/url_46_114_2.txt
ADDED
|
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಸಂವಿಧಾನವು ಭಗವದ್ಗೀತೆ, ಕುರಾನ್, ಬೈಬಲ್ ಇದ್ದಂತೆ : ಗೃಹಸಚಿವ ಪರಮೇಶ್ವರ್
|
| 2 |
+
ಬೆಂಗಳೂರು,ಜೂ.11-ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕದ ದಳದ ಕಚೇರಿ ಇರಬೇಕು ಎಂಬ ಆದೇಶವಿದೆ. ರಾಜ್ಯ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಕಚೇರಿಯನ್ನು ತೆರೆದಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ಕೋರಮಂಗಲದ ಆರ್.ಎ.ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಮೈದಾನದಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭ ಹಾಗೂ ಅಗ್ನಿಶಾಮಕರ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
|
| 3 |
+
ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ನಿರ್ವಹಣ ದಳ ಪ್ರಾಮಾಣಿಕವಾಗಿ ಕೆಲಸ ಮಾಡಿ ರಾಜ್ಯದ ಜನಸಮುದಾಯದ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಇಲಾಖೆಯ ಕೆಲಸ ಕಾರ್ಯಗಳಿಗೆ ತಮನ್ನು ತೊಡಗಿಸಿಕೊಳ್ಳುತ್ತಿದ್ದೀರಿ. ಭವಿಷ್ಯ ಉಜ್ವಲವಾಗಿರಲಿ ಎಂದರು.
|
| 4 |
+
ಅವಘಡಗಳಲ್ಲಿ ಬೆಂಕಿ ನಂದಿಸಲು 90 ಮೀಟರ್ವರೆಗೆ ನೀರು ತಲುಪಿಸಬಹುದಾದ ಏರಿಯಲ್ ಲ್ಯಾಡರ್ ಅಳವಡಿಸಿಕೊಳ್ಳಲಾಗಿದೆ. ಬಹುತೇಕ ರಾಜ್ಯಗಳಲ್ಲಿ ಇದು ಇಲ್ಲ. ಅಲ್ಲದೇ, ಮೊದಲ ಬಾರಿಗೆ ಇಲಾಖೆಯ ವಾಹನಗಳಿಗೆ ಪೆಟೋಲ್ ಕಾರ್ಡ್ ಸವಲತ್ತು ಕಲ್ಪಿಸಲಾಗಿದೆ ಎಂದು ತಿಳಿಸಿದರು.
|
| 5 |
+
ರಾಜ್ಯದ ಅಗ್ನಿಶಾಮಕ ದಳ ಎಂದರೆ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಇದಕ್ಕೆ ಕಾರಣರಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ. ಹೊಸದಾಗಿ ಇಲಾಖೆಗೆ ನೇಮಕ ಹೊಂದಿರುವ ಸಿಬ್ಬಂದಿಗಳಿಗೆ ತಮಗೆ ತರಬೇತಿ ನೀಡಲಾಗಿದೆ. ಮುಂದಿನ ಮುವತ್ತೈದು ವರ್ಷ ನಿಮ ಜೊತೆಗೆ ಇರುತ್ತದೆ. ಕರ್ತವ್ಯದಲ್ಲಿ ಶಿಸ್ತು ಪಾಲನೆ ಮೂಲಕ ಇಲಾಖೆಯ ಕೀರ್ತಿ ಹೆಚ್ಚಿಸಬೇಕು ಎಂದು ತಿಳಿಸಿದರು.
|
| 6 |
+
ಕಾಲೇಜು ದಿನಗಳಲ್ಲಿ ಎನ್ಸಿಸಿ ತರಬೇತಿ ಪಡೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಶಿಸ್ತು ಬಂದಿರುವುದಕ್ಕೆ ಇದೇ ಮೂಲ ಕಾರಣ. ನೀವು ಪಡೆದುಕೊಂಡಿರುವ ತರಬೇತಿಯು ಸಹ ಕರ್ತವ್ಯದಲ್ಲಿ ಮಾತ್ರವಲ್ಲದೇ, ದೈನಂದಿನ ಜೀವನವು ಶಿಸ್ತಿನಿಂದ ಇರಲಿದೆ ಎಂದು ಹೇಳಿದರು.ಸಂವಿಧಾನ ನಮ್ಮ ದೇಶದ ಮೂಲ ಗ್ರಂಥ. ವಿಶ್ವದಲ್ಲೇ ಹೆಚ್ಚು ಪ್ರಖ್ಯಾತಿ ಪಡೆದಿದೆ. 148 ಕೋಟಿ ಜನಸಂಖ್ಯೆಗೆ ಆಧಾರವಾಗಿದೆ. ಇದು ಇಲ್ಲವಾಗಿದ್ದರೆ ಯಾವ ಸಮಸ್ಯೆಗೂ ಉತ್ತರ ಸಿಗುವುದಿಲ್ಲ. ಸಂವಿಧಾನವು ಭಗವದ್ಗೀತೆ, ಕುರಾನ್, ಬೈಬಲ್ ಇದ್ದಂತೆ ಎಂದರು.
|
| 7 |
+
ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಯಾವುದೇ ಧರ್ಮ, ರಾಜಕೀಯ, ವ್ಯಕ್ತಿಗೆ ಕೆಲಸ ಮಾಡುವುದಿಲ್ಲ. ದೇಶಕ್ಕಾಗಿ ಕೆಲಸ ಮಾಡುತ್ತೇನೆ ಎಂದು ನಿಮಗೆ ಪ್ರಮಾಣ ಬೋಧನೆ ಮಾಡಲಾಗಿದೆ ಅದೇ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.
|
| 8 |
+
ಆಧುನಿಕ ಜಗತ್ತು ತಾಂತ್ರಿಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಅಗ್ನಿ ಶಾಮಕ ದಳ ಮತ್ತು ತುರ್ತುಸೇವೆಯ ಐವತ್ತು ವರ್ಷಗಳ ಹಿಂದೆ ಸಿಬ್ಬಂದಿಗಳ ಕಾರ್ಯವೈಖರಿ ��ೇರೆ ಇತ್ತು. ಈಗ ಬದಲಾಗಿದೆ. ನಗರಗಳಲ್ಲಿ ದೊಡ್ಡ ಕಟ್ಟಡಗಳು ನಿರ್ಮಣವಾಗಿವೆ. ಅವಘಡಗಳು ಸಂಭವಿಸಿದಾಗ ಹೇಗೆ ನಿಭಾಯಿಸಬೇಕು ಎಂದು ತರಬೇತಿ ನೀಡಲಾಗಿದೆ. ತಾಂತ್ರಿಕ ಉಪಕರಣಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
|
| 9 |
+
ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲಾಖೆಗೆ ನೇಮಕಾತಿ ಹೊಂದುತ್ತಿದ್ದಾರೆ. ಇದು ಸಂತೋಷದಾಯಕ ವಿಚಾರ. ಈ ಭಾಗದವರು ಸಹ ನೇಮಕ ಹೊಂದಲು ಆಸಕ್ತಿ ತೋರಬೇಕು ಎಂದರು.
|
| 10 |
+
ಬಿಜಾಪುರದ ಇಂಡಿ ತಾಲ್ಲೂಕಿನ ಲಚ್ಚಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಮಗುವನ್ನು ನಮ ಸಿಬ್ಬಂದಿ ನಿರಂತರ ಕಾರ್ಯಚರಣೆ ಮೂಲಕ ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದ್ದಾರೆ ಎಂಬುದನ್ನು ಕೇಳಲು ಸುಲಭ. ಆದರೆ ಜೀವದ ಹಂಗು ತೊರೆದು, ತಮ ಕುಟುಂಬವನ್ನು ಜ್ಞಾಪಿಸಿಕೊಳ್ಳದೆ ಸತತ 19 ಗಂಟೆ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
|
| 11 |
+
ರಾಮೇಶ್ವರ ಕೆಫೆ ಸ್ಫೋಟದ ಸ್ಥಳ ಪರಿಶೀಲನೆಗೆ ಹೋಗಿದ್ದೆ. ಕೋರಮಂಗಲದ ಪಬ್ನಲ್ಲಿ 16 ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಭಯದಿಂದ ಕಟ್ಟಡದ ಮೇಲಿಂದ ಹಾರಿದ್ದ ವ್ಯಕ್ತಿಯನ್ನು ರಕ್ಷಿಸಿ ಪ್ರಾಣ ಉಳಿಸಿದರು. ಮಡಿಕೇರಿಯಲ್ಲಿ ಭೂಕುಸಿತ ಸಂಭವಿಸಿ ಹತ್ತಾರು ಜನ ಪ್ರಾಣ ಕಳೆದುಕೊಂಡರು. ಎಸ್ಡಿಆರ್ಎಫ್ನವರು ಯಾವುದೇ ಭಯವಿಲ್ಲದೇ ನೂರಾರು ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳು ಕಠಿಣ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿರುವುದನ್ನು ಗೃಹ ಸಚಿವನಾಗಿ ಹತ್ತಿರದಿಂದ ನೋಡಿದ್ದೇನೆ ಎಂದು ಹೇಳಿದರು.
|
eesanje/url_46_114_3.txt
ADDED
|
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭ : ಡಿಸಿಎಂ ಡಿ.ಕೆ.ಶಿವಕುಮಾರ್
|
| 2 |
+
ಬೆಂಗಳೂರು,ಜೂ.11-ಬಿಬಿಎಂಪಿಗೆ ಆದಷ್ಟು ಶೀಘ್ರದಲ್ಲಿ ಚುನಾವಣೆ ನಡೆಸಲಾಗುವುದು. ಅದಕ್ಕೆ ಅಗತ್ಯವಿರುವ ವಾರ್ಡ್ ಮೀಸಲಾತಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳನ್ನು ಈಗಾಗಲೇ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
|
| 3 |
+
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಆದಷ್ಟು ಶೀಘ್ರವಾಗಿ ಚುನಾವಣೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬೆಂಗಳೂರನ್ನು ಆಡಳಿತಾತಕವಾಗಿ ವಿಭಜಿಸಬೇಕು ಎಂಬ ಪ್ರಸ್ತಾವನೆ ಇದೆ. ಸದ್ಯಕ್ಕೆ ಶೀಘ್ರ ಚುನಾವಣೆ ಮಾಡುವತ್ತ ನಾವು ಗಮನ ಹರಿಸಿದ್ದೇವೆ. ನ್ಯಾಯಾಲಯ ಕೂಡ ಪದೇಪದೇ ಸೂಚನೆ ನೀಡುತ್ತಿದೆ ಎಂದು ಹೇಳಿದರು.
|
| 4 |
+
ಏಕಕಂತು ತೀರುವಳಿ ಯೋಜನೆಯಡಿ ಆಸ್ತಿ ತೆರಿಗೆ ಪಾವತಿಗೆ ಜೂ.31 ಅಂತಿಮ ಗಡುವಾಗಿದೆ. ಅದರ ನಂತರ ಆಸ್ತಿ ಮಾಲಿಕರು ಸುಸ್ತಿದಾರರಾಗಿದ್ದಾರೆ. ಗಡುವಿನ ಒಳಗೆ ಸ್ವಯಂಘೋಷಿತ ಆಸ್ತಿ ತೆರಿಗೆ ಪಾವತಿಸಿದರೆ ಬಡ್ಡಿ ಹಾಗೂ ದಂಡ ವಿನಾಯಿತಿ ಸಿಗಲಿದೆ ಎಂದರು.
|
| 5 |
+
ಬೆಂಗಳೂರಿನಲ್ಲಿ 20 ಲಕ್ಷ ಆಸ್ತಿಗಳಿದ್ದು, 5,200 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿತ್ತು. ಇದುವರೆಗೂ 1,300 ಕೋಟಿ ರೂ. ಬಂದಿದೆ. ಇನ್ನೂ 3,500 ಕೋಟಿ ಬಾಕಿ ಇದೆ. ಆಸ್ತಿ ತೆರಿಗೆ ವ್ಯಾಪ್ತಿಗೊಳಪಡದೇ ಇರುವ 4 ಲಕ್ಷ ಸ್ವತ್ತುಗಳು ಬೆಂಗಳೂರಿನಲ್ಲಿವೆ. ಅವುಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ಎ ಖಾತೆ ಅಥವಾ ಬಿ ಖಾತೆ ನೀಡಿ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಡಲಾಗುವುದು. ಇದರಲ್ಲಿ ಈವರೆಗೂ 50 ಸಾವಿರ ಆಸ್ತಿ ಮಾಲಿಕರು ಮಾತ್ರ ತೆರಿಗೆ ಪಾವತಿಸಿದ್ದಾರೆ ಎಂದು ತಿಳಿಸಿದರು.
|
| 6 |
+
ವಿಶ್ವ ಪರಿಸರ ದಿನಾಚರಣೆಯನ್ನು ಜೂ.14 ರಂದು ಆಚರಿಸಲಾಗುತ್ತಿದೆ. ಈ ವೇಳೆ ಹಸಿರು ಬೆಂಗಳೂರು ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಯಾ ಪ್ರದೇಶದಲ್ಲಿ ಗಿಡನೆಟ್ಟು ಅವುಗಳನ್ನು ದತ್ತು ತೆಗೆದುಕೊಂಡು ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ.
|
| 7 |
+
250 ಶಾಲೆಗಳು ಬಿಬಿಎಂಪಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈವರೆಗೆ 52 ಸಾವಿರ ಗಿಡಗಳನ್ನು ನೆಡಲಾಗಿದ್ದು, ಅವುಗಳಲ್ಲಿ ಶೇ.80 ರಷ್ಟು ಊರ್ಜಿತವಾಗಿವೆ. ನಷ್ಟವಾಗಿರುವ ಶೇ.20 ಅನ್ನು ಮರು ನಾಟಿ ಮಾಡಲಾಗುವುದು. ಪ್ರಸಕ್ತ ವರ್ಷ 2 ಲಕ್ಷ ಗಿಡ ನೆಡುವ ಗುರಿ ಇದೆ. ಗಿಡ ನೆಡಲು ಲಭ್ಯವಿರುವ ಜಾಗದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದರು.
|
| 8 |
+
ಬಿಬಿಎಂಪಿ ವ್ಯಾಪ್ತಿಯಲ್ಲಿನ ಮರಗಳ ಸಮೀಕ್ಷೆ ನಡೆಸಲಾಗುವುದು. ಬೊಮನಹಳ್ಳಿ ವಲಯದ ವಿದ್ಯಾಪೀಠ ವಾರ್ಡ್ನಲ್ಲಿ 4,600, ಕತ್ರಿಗುಪ್ಪೆ ವಾರ್ಡ್ನಲ್ಲಿ 4,300 ಮರಗಳ ಸಮೀಕ್ಷೆ ಆಗಿದೆ. ಮರಗಳನ್ನು ಗುರುತಿಸಿ ಅವು ಬೀಳದಂತೆ ಅಗತ್ಯ ಸ್ವರೂಪ ನೀಡಲಾಗುವುದು. ಬೇರುಗಳು ಗಟ್ಟಿಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
|
| 9 |
+
ಬೆಂಗಳೂರಿನ ಅಂತರ್ಜಲ ಅಭಿವೃದ್ಧಿಗೆ ತೆರೆದ ಬಾವಿಗಳ ಮರುಪೂರಣ, ಕೆ��ೆಗಳಿಗೆ ಸಂಸ್ಕರಿಸಿದ ನೀರು ತುಂಬಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.ಬಿಬಿಎಂಪಿ ವ್ಯಾಪ್ತಿಯಲ್ಲಿನ ಪಾರ್ಕ್ಗಳನ್ನು ಇನ್ನು ಮುಂದೆ ಬೆಳಿಗ್ಗೆ 5 ರಿಂದ ರಾತ್ರಿ 8 ರವರೆಗೂ ಸಾರ್ವಜನಿಕರ ಪ್ರವೇಶಕ್ಕೆ ತೆರೆದಿಡಲಾಗುವುದು.
|
| 10 |
+
ಪ್ರಸ್ತುತ ಬೆಳಿಗ್ಗೆ 5 ರಿಂದ 8 ಗಂಟೆ ಮಧ್ಯಾಹ್ನ 1.30 ರಿಂದ ರಾತ್ರಿ 8 ಗಂಟೆವರೆಗೂ ಮಾತ್ರ ಮುಕ್ತವಾಗಿರಿಸಲಾಗಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಪಾರ್ಕ್ನಲ್ಲಿ ಅನಪೇಕ್ಷಣೀಯವಾದ ಘಟನೆಗಳಿಗೆ ಕಡಿವಾಣ ಹಾಕಲು ಪೊಲೀಸರ ಜೊತೆ ಮಾರ್ಷಲ್ಗಳು ಗಸ್ತು ತಿರುಗುತ್ತಾರೆ. ಸಿಸಿಟಿವಿ ಈಗಾಗಲೇ ಅಳವಡಿಸಲಾಗಿದೆ. ಅದು ಮೀರಿ ಯಾವುದಾದರೂ ಘಟನೆಗಳು ಕಂಡುಬಂದರೆ ಸಾರ್ವಜನಿಕರು 1533, 22660000, 22221188 ಅಥವಾ ವಾಟ್್ಸಆಪ್ 94806857 ಗೆ ಮಾಹಿತಿ ನೀಡಬಹುದು ಎಂದರು.
|
| 11 |
+
ಬೆಂಗಳೂರಿನಲ್ಲಿ ಫ್ಲೆಕ್್ಸಗಳಿಗೆ ನಿಷೇಧ ಹೇರಲಾಗಿದೆ. ಅನಧಿಕೃತವಾಗಿ ಅಳವಡಿಸುವ ಫ್ಲೆಕ್್ಸಗಳ ಬಗ್ಗೆ ಸಾರ್ವಜನಿಕರು ಬಿಬಿಎಂಪಿಯ ದೂರವಾಣಿಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು. ಇನ್ನು ಮುಂದೆ ಯಾವುದೇ ಪ್ರದೇಶದಲ್ಲಿ ಫ್ಲೆಕ್್ಸಗಳು ಕಂಡುಬಂದರೆ ಆಯಾ ಪ್ರದೇಶದ ಕಂದಾಯ ಅಧಿಕಾರಿಯನ್ನು ಹೊಣೆ ಮಾಡಿ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
|
| 12 |
+
ಅಕ್ರಮ ಸಕ್ರಮ ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಅಲ್ಲಿನ ಆದೇಶ ಬಂದ ಬಳಿಕ ಅದನ್ನು ಜಾರಿ ಮಾಡಲಾಗುವುದು. ಬೆಂಗಳೂರಿನ ನಾಲ್ಕು ಕಡೆ ತ್ಯಾಜ್ಯವನ್ನು ಬಳಸಿ ವಿದ್ಯುತ್ ಉತ್ಪಾದನೆಗೆ ಯೋಜನೆ ಸಿದ್ಧಗೊಂಡಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.
|
eesanje/url_46_114_4.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
|
| 2 |
+
ಬೆಂಗಳೂರು,ಜೂ.11-ಮೇಲ್ಮನವಿ ಪ್ರಕರಣಗಳನ್ನು 3 ತಿಂಗಳೊಳಗೆ ವಿಲೇವಾರಿ ಮಾಡಬೇಕು, ವಿಳಂಬ ಮಾಡಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿಪರಿಶೀಲನಾ ಸಭೆ ನಡೆಸಿದ ಅವರು, ಮೇಲ್ಮನವಿ ಪ್ರಕರಣಗಳನ್ನು 3 ವಿಲೇವಾರಿ ಮಾಡಬೇಕು, ಐಜಿಎಸ್ಟಿ ನಕಾರಾತಕ ಸೆಟಲ್ ಮೆಂಟ್ ಆಗುವ ಕಡೆ, ಇತರೆ ಸರಕುಗಳ ಮೇಲಿನ ತೆರಿಗೆ ಸಂಗ್ರಹವನ್ನು ಚುರುಕಗೊಳಿಸಬೇಕು ಎಂದು ಎಚ್ಚರಿಸಿದರು.
|
| 3 |
+
ಕೆಲಸ ಮರು ಹಂಚಿಕೆ 2017 ಕ್ಕೂ ಹಿಂದಿನ ಪ್ರಕರಣಗಳ ತೀರ್ಮಾನವಾಗಿರುವುದರಿಂದ ಬೆಂಗಳೂರಿನಲ್ಲಿ ಹೆಚ್ಚು ಮೇಲನವಿಗಳು ದಾಖಲಾಗುತ್ತಿದ್ದು, ಇವುಗಳ ವಿಲೇವಾರಿಗಾಗಿ ಹೆಚ್ಚುವರಿ ಜಂಟಿ ಆಯುಕ್ತರ ಹ್ದುೆ ಮಂಜೂರಾಗಿದ್ದು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದ್ದಾರೆ.
|
| 4 |
+
ವೃತ್ತಿ ತೆರಿಗೆ ಸಂಗ್ರಹವನ್ನೂ ಚುರುಕುಗೊಳಿಸಲು ಗುರಿ ನಿಗಧಿ ಪಡಿಸಲು ಸೂಚನೆ ನೀಡಲಾಗಿದೆ.ಅಂದಾಜು, ಜಾರಿ, ಮೇಲನವಿ ಸಮನ್ವಯ ಸಭೆ ತಿಂಗಳಿಗೆ 2 ಬಾರಿ ಕಡ್ಡಾಯವಾಗಿ ನಡೆಸಬೇಕು. ಕಾರ್ಯಯೋಜನೆ ಸಿದ್ದಪಡಿಸಬೇಕು. ಮೇಲನವಿಗಳನ್ನು ಸಕಾಲದಲ್ಲಿ ಇತ್ಯರ್ಥ ಮಾಡಬೇಕು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮತ್ತೊಮೆ ಪ್ರಗತಿ ಪರಿಶೀಲನಾ ಸಭೆ ನಡೆಸುವುದಾಗಿ ತಿಳಿಸಿದ ಅವರು, ಆ ವೇಳೆಗೆ ಗುರಿ ತಲುಪಿರುವಂತೆ ತಾಕೀತು ಮಾಡಿದ್ದಾರೆ.
|
eesanje/url_46_114_5.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಯಾರಾಗ್ತಾರೆ ಜೆಡಿಎಸ್ ರಾಜ್ಯಾಧ್ಯಕ್ಷ..?
|
| 2 |
+
ಬೆಂಗಳೂರು,ಜೂ.11-ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಮುಕ್ತರಾಗಲಿದ್ದಾರೆ.ಲೋಕಸಭೆಗೆ ಕುಮಾರಸ್ವಾಮಿಯವರು ಚುನಾಯಿತರಾಗಿರುವುದರಿಂದ ವಿಧಾನಸಭೆಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಇದರಿಂದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ತೆರವಾಗಲಿದೆ.
|
| 3 |
+
ಜೆಡಿಎಸ್ನ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಯಾರಾಗಬಹುದು ಎಂಬ ಚರ್ಚೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರವೂ ಮುನ್ನಲೆಗೆ ಬಂದಿದೆ.ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಹಿರಿಯ ಶಾಸಕರಾದ ಎಚ್.ಡಿ.ರೇವಣ್ಣ, ಜಿ.ಟಿ.ದೇವೇಗೌಡ, ವೆಂಕಟಶಿವಾರೆಡ್ಡಿ ಅವರ ಹೆಸರುಗಳು ಪ್ರಸ್ತಾಪವಾಗುತ್ತಿವೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿಯವರ ಹೆಸರು ಪ್ರಸ್ತಾಪವಾಗುತ್ತಿದೆ.
|
| 4 |
+
ನಿಖಿಲ್ ಕುಮಾರಸ್ವಾಮಿಯವರಿಗೆ ಬಡ್ತಿ ನೀಡಿ ರಾಜ್ಯಾಧ್ಯಕ್ಷ ಸ್ಥಾನ ನೀಡುವುದರ ಜೊತೆಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.ಪ್ರಸ್ತುತವಾಗಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ವಿಧಾನಪರಿಷತ್ ಚುನಾವಣೆಯಲ್ಲಿ ಮೂರು ಮಂದಿ ಒಕ್ಕಲಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ಬದಲಿಗೆ ಬೇರೆ ಸಮುದಾಯಕ್ಕೆ ನೀಡುವುದು ಸೂಕ್ತ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ.
|
| 5 |
+
ಕುರುಬ ಇಲ್ಲವೇ ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡುವುದು ಸೂಕ್ತ. ಲೋಕಸಭೆ ಚುನಾವಣೆ ನಂತರ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ. ಕಾರ್ಯಕರ್ತರಲ್ಲೂ ಉತ್ಸಾಹ ಮೂಡಿದೆ. ಬೇರೆ ಸಮುದಾಯಕ್ಕೂ ಅವಕಾಶ ಮಾಡಿಕೊಟ್ಟರೆ ಮತ್ತಷ್ಟು ಪಕ್ಷಕ್ಕೆ ಶಕ್ತಿ ಬರುತ್ತದೆ. ಎಲ್ಲಾ ಸಮುದಾಯಗಳೂ ಒಗ್ಗೂಡಿ ಪಕ್ಷ ಸಂಘಟನೆ ಮಾಡಲು ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
|
| 6 |
+
ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಕೋರ್ಕಮಿಟಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಒಂದೇ ಸಮುದಾಯಕ್ಕೆ ಅಧಿಕಾರ ಹಂಚಿಕೆಯಾಗುವುದು ಬೇಡ. ಬೇರೆಬೇರೆ ಸಮುದಾಯಗಳಿಗೂ ಪಕ್ಷದ ಸ್ಥಾನಮಾನಗಳನ್ನು ನೀಡುವುದರಿಂದ ಮುಂದಿನ ನಗರ, ಸ್ಥಳೀಯ ಸಂಸ್ಥೆಗಳ, ಜಿಲ್ಲಾ, ತಾಲ್ಲೂಕು, ಪಂಚಾಯಿತಿ ಚುನಾವಣೆಗಳಿಗೂ ಅನುಕೂಲವಾಗಲಿದೆ. ಇಲ್ಲದಿದ್ದರೆ, ಬೇರೆ ಸಮುದಾಯಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಲಿದ್ದು, ಎದುರಾಳಿಗಳಿಗೆ ಅಸ್ತ್ರವೂ ಆಗಬಹುದು ಎಂಬ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
|
eesanje/url_46_114_6.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ಲಾರಿ ಖರೀದಿ ವಿಚಾರಕ್ಕೆ ಜಗಳ : ಅಪ್ಪನನ್ನೇ ಕೊಂದ ಮಗ
|
| 2 |
+
ಹಾಸನ, ಜೂ.11-ಲಾರಿ ಖರೀದಿ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ಜಗಳ ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಲೂರು ತಾಲ್ಲೂಕಿನ ಕಡಬಗಾಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
|
| 3 |
+
ಚಂದ್ರಶೇಖರ್ (60) ಕೊಲೆಯಾದ ತಂದೆ. ಈತನ ಪುತ್ರ ಸಚಿನ್ (30) ಡ್ರೈವರ್ ಕೆಲಸ ಮಾಡುತ್ತಿದ್ದು, ಕಂಠಪೂರ್ತಿ ಕುಡಿದು ಬಂದು ಜಮೀನು ಮಾರಾಟ ಮಾಡಿ ಲಾರಿ ಕೊಡಿಸುವಂತೆ ತಂದೆ ಜತೆ ಜಗಳವಾಡುತ್ತಿದ್ದ.
|
| 4 |
+
ಕಳೆದ ರಾತ್ರಿಯೂ ಸಹ ಕುಡಿದು ಬಂದು ನನಗೆ ಕೂಡಲೇ ಲಾರಿ ಕೊಡಿಸುವಂತೆ ಜಗಳ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಕುಡಿದ ಮತ್ತಿನಲ್ಲಿದ್ದ ಸಚಿನ್ ಎಡೆಮಟ್ಟೆಯಿಂದ ತಂದೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
|
| 5 |
+
ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಸುದ್ದಿ ತಿಳಿದ ಕೂಡಲೇ ಆಲೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
|
eesanje/url_46_114_7.txt
ADDED
|
@@ -0,0 +1,4 @@
|
|
|
|
|
|
|
|
|
|
|
|
|
|
|
|
| 1 |
+
ತುಮಕೂರು : ಕರ್ತವ್ಯಲೋಪವೆಸಗಿದ ಐವರು ಪೊಲೀಸರ ಅಮಾನತು
|
| 2 |
+
ತುಮಕೂರು, ಜೂ.11-ಕ್ರಿಮಿನಲ್ಗಳಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಆರೋಪದಡಿ ಒಂದೇ ದಿನ ಐವರು ಪೊಲೀಸ್ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
|
| 3 |
+
ಕ್ಯಾತಸಂದ್ರ ಪೊಲೀಸ್ ಠಾಣೆಯ ಇಬ್ಬರು, ಜಯನಗರ ಠಾಣೆಯ ಓರ್ವ, ಟ್ರಾಫಿಕ್ ಠಾಣೆಯ ಕಾನ್ಸ್ಟೆಬಲ್, ಎಸ್ಪಿ ಕಚೇರಿಯ ಒಬ್ಬ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.ಅಮಾನತಾದ ಸಿಬ್ಬಂದಿ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹ ಮೂರ್ತಿಗೆ ಮಾಹಿತಿ ಸೋರಿಕೆ ಮಾಡಿದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
|
| 4 |
+
ನವೀನ್ ಮಂಜುನಾಥ್ ರೆಡ್ಡಿ, ನರಸಿಂಹ ಮೂರ್ತಿ ಈ ಮೂವರು ಆರೋಪಿಗಳ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೊಲೆ ಸಂಚು, ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.ವಾಟ್ಸಾಪ್ ಮೂಲಕ ಆರೋಪಿಗಳಿಗೆ ಮಾಹಿತಿ ರವಾನಿಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
|
eesanje/url_46_114_8.txt
ADDED
|
@@ -0,0 +1,3 @@
|
|
|
|
|
|
|
|
|
|
|
|
|
| 1 |
+
ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ
|
| 2 |
+
ಬೆಂಗಳೂರು ಜೂ. 10 :ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ 42ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಈ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪ್ರಕರಣ ದ ವಿಚಾರಣೆ ನೆಡೆಸಿದ ನ್ಯಾಯಾಧೀಶರು ಜೂನ್ 24ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
|
| 3 |
+
ಪ್ರಜ್ವಲ್ ರೇವಣ್ಣ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಾಗ ಅವರು ವಿದೇಶಕ್ಕೆ ತೆರಳಿದರು ಅವರ ವಿರುದ್ಧ ಹೊಳೆನರಸೀಪುರ ಹಾಗೂ ಸಿಐಡಿ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು ತನಿಖೆಗಾಗಿ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು ಎಸ್ ಐಟಿ. ನ್ಯಾಯಾಧೀಶರಿಗೆ ಮುಚ್ಚಿದ ಲಕೋಟಿಯಲ್ಲಿ ವರದಿ ಸಲ್ಲಿಸಿದೆ.
|
eesanje/url_46_114_9.txt
ADDED
|
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಗ್ಯಾರಂಟಿಗಳನ್ನು ನಿಲ್ಲಿಸುವ ಶಾಸಕರು-ಸಚಿವರ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಮನವಿ
|
| 2 |
+
ಬೆಂಗಳೂರು, ಜೂ.10-ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಉಂಟಾದ ಅಲ್ಪ ಹಿನ್ನಡೆಯಿಂದ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು, ಸಚಿವರು, ಮುಖಂಡರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂಬ ಹೇಳಿಕೆಗಳನ್ನು ನೀಡುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
|
| 3 |
+
ಈ ಕುರಿತು ಪತ್ರ ಬರೆದಿರುವ ಅವರು, ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿರುವುದು ಕಳೆದ ವಿಧಾನಸಭೆ ಹಾಗೂ ಈಗಿನ ಲೋಕಸಭಾ ಚುನಾವಣೆಗಳಲ್ಲಿ ಪಡೆದ ಮತಗಳಿಕೆ ಪ್ರಮಾಣವನ್ನು ನೋಡಿದರೂ ಸಾಕು. ಈಚೆಗೆ ಬಂದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಪಕ್ಷ 9 ಕ್ಷೇತ್ರಗಳನ್ನು ಗೆದ್ದರೂ ಮತಗಳಿಕೆಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣಲಾಗಿದೆ.
|
| 4 |
+
ಈ ಲೋಕಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತಗಳಿಕೆಯಲ್ಲಿ ಶೇಕಡಾ 14ರಷ್ಟು ಹೆಚ್ಚಳ ಕಂಡಿದೆ. ಅಂದರೆ, 2019ರಲ್ಲಿ ಶೇಕಡಾ 31.5ರಷ್ಟಿದ್ದ ಮತ ಪ್ರಮಾಣವು ಈ ಬಾರಿ 45.5ಕ್ಕೆ ಏರಿಕೆಯಾಗಿದೆ. ಅದೇ ಶೇಕಡಾ 51.5ರಷ್ಟಿದ್ದ ಬಿಜೆಪಿ ಮತ ಗಳಿಕೆಯು ಈ ಬಾರಿ ಶೇಕಡಾ 46ಕ್ಕೆ ಕುಸಿತ ಕಂಡಿದೆ. ಇದು ಕಾಂಗ್ರೆಸ್ ಬಗ್ಗೆ ಜನರು ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದಿದ್ದಾರೆ.
|
| 5 |
+
ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪ್ರತಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ಹಂಚಿ ಆಶ್ವಾಸನೆ ನೀಡಿತ್ತು. ಇದರ ಬಗ್ಗೆ ಐತಿಹಾಸಿಕ ಪ್ರಣಾಳಿಕೆಯನ್ನು ತಯಾರಿಸಿ ಅದನ್ನು ಜನರ ಮುಂದಿಟ್ಟು ವಾಗ್ದನ ಮಾಡಿತ್ತು. ಆ ವಾಗ್ದಾನದ ಮೇಲೆ ವಿಶ್ವಾಸ ಇಟ್ಟು ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ 136 ಸ್ಥಾನಗಳಲ್ಲಿ ಅಭೂತಪೂರ್ವ ಜಯಕ್ಕೆ ಕಾರಣಿ ಭೂತರಾದರು.
|
| 6 |
+
ಸರ್ಕಾರ ರಚನೆಯಾದ 9 ತಿಂಗಳಲ್ಲೇ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ರಾಜ್ಯವನ್ನು ಮಾದರಿಯನ್ನಾಗಿ ತೆಗೆದುಕೊಂಡು ಎಐಸಿಸಿ ಕೂಡ ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರಿಂದ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.
|
| 7 |
+
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಸರ್ಕಾರದಿಂದ ನೀಡುವ ಎರಡು ಸಾವಿರ ರೂ. ಉಳಿಸಿಕೊಂಡು ಬಂಗಾರ ಖರೀದಿ ಮಾಡಿದ ಮಹಿಳೆಯರಿದ್ದಾರೆ. ಫ್ರಿಜ್ ಖರೀದಿಸಿದವರಿದ್ದಾರೆ. ಸ್ಮಾರ್ಟ್ ಫೋನ್ಗಳನ್ನು ಖರೀದಿ ಮಾಡಿದವರಿದ್ದಾರೆ. ಈ ಹಣ ಮಕ್ಕಳ ಶಿಕ್ಷಣಕ್ಕೆ, ಹಿರಿಯರ ಔಷಧಕ್ಕೆ ಸಹ ನೆರವಾಗುತ್ತಿದೆ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ.
|
| 8 |
+
ನಮ್ಮ ಸರ್ಕಾರವನ್ನು ಹರಸಿದ್ದಾರೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಯುವ ನಿಧಿ ಯೋಜನೆಗಳು ಜನರ ಜೀವನಮಟ್ಟ ಸುಧಾರಣೆಗೆ ಕಾರಣವಾಗಿ���ೆ ಎಂದು ಹೇಳಿದರು.ಅವುಗಳ ಬಗ್ಗೆ ಹಗುರವಾಗಿ ಮಾತನಾಡುವುದು ಮತ್ತು ಟೀಕಿಸುವುದಕ್ಕೆ ಕಡಿವಾಣ ಹಾಕುವಂತೆ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
|
eesanje/url_46_115_1.txt
ADDED
|
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ವಿಧಾನಪರಿಷತ್ ನೂತನ ಸದಸ್ಯರಿಗೆ ಪ್ರಮಾಣವಚನಕ್ಕೆ ಇನ್ನೂ ಒಂದು ವಾರ ಕಾಯಬೇಕು
|
| 2 |
+
ಬೆಂಗಳೂರು,ಜೂ.10-ವಿಧಾನಸಭೆಯಿಂದ ವಿಧಾನಪರಿಷತ್ಗೆ ಅವಿರೋಧವಾಗಿ ಆಯ್ಕೆಯಾಗಿರುವ 11 ಮಂದಿ ನೂತನ ಸದಸ್ಯರಾಗಲು ಜೂನ್ 18 ರವರೆಗೆ ಕಾಯಬೇಕಿದೆ. ಅದೇ ರೀತಿ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಆರು ಮಂದಿ ವಿಧಾನಪರಿಷತ್ನ ನೂತನ ಸದಸ್ಯರಾಗಲು ಜೂ.22 ರವರೆಗೆ ಕಾಯಬೇಕಿದೆ.
|
| 3 |
+
ವಿಧಾನಸಭೆಯಿಂದ ಚುನಾಯಿತರಾಗಿದ್ದ ರಘುನಾಥರಾವ್ ಮಲ್ಕಾಪುರೆ, ಡಾ.ಕೆ.ಗೋವಿಂದರಾಜು, ಅರವಿಂದ ಕುಮಾರ್ ಅರಳಿ, ಬಿ.ಎಂ.ಫಾರುಖ್, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್ಕುಮಾರ್, ಮುನಿರಾಜುಗೌಡ ಪಿ.ಎಂ., ಎನ್.ಎಸ್.ಬೋಸರಾಜು ಅವರು ಜೂನ್ 17 ರಂದು ನಿವೃತ್ತಿಯಾಗಲಿದ್ದಾರೆ. ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ದ್ವೈವಾರ್ಷಿಕ ಚುನಾವಣೆ ನಡೆದಿದೆ. ಆದರೆ ಡಾ.ತೇಜಸ್ವಿನಿ ಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ವಿದಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಆ 2 ಸ್ಥಾನಗಳು ತೆರವಾಗಿವೆ.
|
| 4 |
+
ಸದಸ್ಯರ ನಿವೃತ್ತಿಯ ನಂತರ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆದಿರುವುದರಿಂದ ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಜೂ.18 ರವರೆಗೆ ಕಾಯಬೇಕಿದೆ.ವಿಧಾನಸಭೆಯಿಂದ ಮೇಲನೆಯ 11 ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ನ ಐವಾನ್ ಡಿಸೋಜ, ಕೆ.ಗೋವಿಂದರಾಜು, ಜಗದೇವ ಗುತ್ತೇದಾರ್, ಬಲ್ಕೀಸ್ ಭಾನು, ಸಚಿವ ಎನ್.ಎಸ್.ಬೋಸರಾಜು ಹಾಗೂ ಡಾ.ಯತೀಂದ್ರ ಎಸ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
|
| 5 |
+
ಅದೇ ರೀತಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೂಳೆ ಮಾರುತಿ ರಾವ್, ಸಿ.ಟಿ.ರವಿ, ಎನ್.ರವಿಕುಮಾರ್ ಹಾಗೂ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಟಿ.ಎನ್.ಜವರಾಯಿಗೌಡ ಅವರು ಸಹ ಅವಿರೋಧವಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ.
|
| 6 |
+
3 ಪದವೀಧರ ಹಾಗೂ 3 ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆದು ಆರು ಮಂದಿ ಆಯ್ಕೆಯಾಗಿದ್ದಾರೆ. ಅವರೂ ಕೂಡ ಜೂ.22 ರವರೆಗೆ ಕಾಯಬೇಕಿದೆ. ವಿಧಾನಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ್ ಪಿ.ಪಾಟೀಲ್, ಎ.ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಬೋಜೇಗೌಡ ಅವರು ಜೂ.21 ರಂದು ನಿವೃತ್ತಿಯಾಗಲಿದ್ದಾರೆ. ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ಅವರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಎರಡೂ ಸದಸ್ಯ ಸ್ಥಾನಗಳು ತೆರವಾಗಿವೆ.
|
| 7 |
+
ಕಾಂಗ್ರೆಸ್ನಿಂದ ಸ್ಪರ್ಧಿಸಿ ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಶ್ರೀನಿವಾಸ, ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಪಾಟೀಲ ಅವರು ಚುನಾಯಿತರಾಗಿದ್ದಾರೆ.
|
| 8 |
+
ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಧನಂಜಯ ಸರ್ಜಿ ಅವರು ನೈರುತ್ಯ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಜೆಡಿಎಸ್ನಿಂದ ಸ್ಪರ್ಧಿಸ���ದ್ದ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿವೇಕಾನಂದ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಂ.ಬೋಜೇಗೌಡ ಚುನಾಯಿತರಾಗಿದ್ದಾರೆ.
|
| 9 |
+
17 ಮಂದಿ ಮೇಲನೆ ಸದಸ್ಯರ ಪೈಕಿ ಡಾ.ಚಂದ್ರಶೇಖರ್ ಬಿ.ಪಾಟೀಲ್, ಎಸ್.ಎಲ್.ಬೋಜೇಗೌಡ, ಕೆ.ಗೋವಿಂದರಾಜು, ಎನ್.ಎಸ್.ಬೋಸರಾಜು, ಎನ್.ರವಿಕುಮಾರ್ ಪುನರ್ ಆಯ್ಕೆಯಾಗಿದ್ದು, ಮತ್ತೆ ವಿಧಾನಪರಿಷತ್ ಸದಸ್ಯರಾಗಲಿದ್ದಾರೆ.
|
eesanje/url_46_115_10.txt
ADDED
|
@@ -0,0 +1,5 @@
|
|
|
|
|
|
|
|
|
|
|
|
|
|
|
|
|
|
|
| 1 |
+
ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಸಂಪೂರ್ಣ ತೆರವು
|
| 2 |
+
ಬೆಂಗಳೂರು,ಜೂ.10-ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನೀತಿ ಸಂಹಿತೆಯನ್ನು ಸಂಪೂರ್ಣ ತೆರವುಗೊಳಿಸಿರುವುದಾಗಿ ಭಾರತದ ಚುನಾವಣಾ ಆಯೋಗ ತಿಳಿಸಿದೆ.
|
| 3 |
+
ಮಾ.16 ರಂದು ಲೋಕಸಭಾ ಚುನಾವಣೆ ಘೋಷಣೆಯಾದಂದಿನಿಂದಲೂ ದೇಶಾದ್ಯಂತ ಜಾರಿಯಲ್ಲಿದ್ದಂತೆ ರಾಜ್ಯದಲ್ಲೂ ನೀತಿ ಸಂಹಿತೆ ಇತ್ತು. ಜೂ.4 ಕ್ಕೆ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾಗಿದ್ದರೂ ಜೂ.6ರವರೆಗೂ ಚುನಾವಣಾ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದವು. ಅದು ಮುಗಿದ ಬೆನ್ನಲ್ಲೇ ಪದವೀಧರ ಹಾಗೂ ಶಿಕ್ಷಕರ 6 ಕ್ಷೇತ್ರಗಳಿಗೆ ನಡೆಯುತ್ತಿದ್ದ ಚುನಾವಣೆಗಳ ನೀತಿ ಸಂಹಿತೆ ಮುಂದುವರೆದಿತ್ತು.
|
| 4 |
+
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯಸರ್ಕಾರದ ಮನವಿಯ ಮೇರೆಗೆ ಭಾಗಶಃ ನೀತಿಸಂಹಿತೆಯನ್ನು ಆಯೋಗ ಸಡಿಲಿಸಿತ್ತಾದರೂ ಯಾವುದೇ ಘೋಷಣೆ ಹಾಗೂ ನಿರ್ಧಾರಗಳನ್ನು ಪ್ರಕಟಿಸಲು ಅವಕಾಶ ಇರಲಿಲ್ಲ. ಸಚಿವ ಸಂಪುಟ ಸಭೆ ನಡೆಸಲು ನಿರ್ಬಂಧಗಳಿದ್ದವು.
|
| 5 |
+
ವಿಧಾನಸಭೆಯಿಂದ ವಿಧಾನಪರಿಷತ್ಗೆ 11 ಸದಸ್ಯರ ಆಯ್ಕೆ, ಶಿಕ್ಷಕರ, ಪದವೀಧರರ 6 ಕ್ಷೇತ್ರಗಳ ಚುನಾವಣೆ ಸೇರಿದಂತೆ ಎಲ್ಲಾ ಫಲಿತಾಂಶಗಳು ಪ್ರಕಟಗೊಂಡಿದ್ದರಿಂದ ನೀತಿ ಸಂಹಿತೆಯನ್ನು ತೆರವು ಮಾಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
|
eesanje/url_46_115_11.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ
|
| 2 |
+
ಬೆಂಗಳೂರು,ಜೂ.10-ಮೇಲೈ ಸುಳಿಗಾಳಿಯಿಂದಾಗಿ ನೈರುತ್ಯ ಮುಂಗಾರು ಪ್ರಬಲವಾಗಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಆರ್ಭಟಿಸುತ್ತಿದೆ. ಉತ್ತರಕನ್ನಡ, ಬೆಳಗಾವಿ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಭಾರಿ ಮಳೆಯಾಗಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಐದು ದಿನಗಳ ಕಾಲ ಸರಾಸರಿ ಇದೇ ರೀತಿ ಮಳೆ ಮುಂದುವರೆಯಲಿದೆ.
|
| 3 |
+
ಕರಾವಳಿ, ಮಲೆನಾಡು ಹಾಗೂ ಉತ್ತರಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳಿವೆ.ನಿನ್ನೆ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕೆರೆಕಟ್ಟೆಗೆ ನೀರು ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಮುನ್ನೆಚ್ಚರಿಕೆಯನ್ನು ನೀಡಿದೆ.
|
| 4 |
+
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಜೂ.15 ರವರೆಗೂ ಮುಂಗಾರು ಪ್ರಬಲವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಕ ಇಲ್ಲವೇ ಅರೆವ್ಯಾಪಕ ಮಳೆಯಾಗಲಿದೆ. ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರಾ, ಕಾವೇರಿ, ಘಟಪ್ರಭಾ ಸೇರಿದಂತೆ ಪ್ರಮುಖ ನದಿಗಳ ಒಳಹರಿವು ಹೆಚ್ಚಾಗುತ್ತಿದೆ.
|
| 5 |
+
ಕೇರಳದಲ್ಲೂ ಉತ್ತಮ ಮಳೆಯಾಗಿರುವುದಿರಂದ ಕಾವೇರಿ ನದಿಪಾತ್ರದ ಜಿಲ್ಲೆಗಳಲ್ಲೂ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆ ಈ ಬಾರಿ ಮುಂಗಾರು ಆರಂಭದಿಂದಲೇ ಆರ್ಭಟಿಸುತ್ತಿದೆ. ಆದರೆ ಕಳೆದ ವರ್ಷ ಆರಂಭದಲ್ಲೇ ಮುಂಗಾರು ಕೈಕೊಟ್ಟು ಬರದ ಕರಾಳ ಛಾಯೆ ಆವರಿಸಿತ್ತು.
|
| 6 |
+
ಈ ಬಾರಿ ಅವಧಿಗೂ ಮುನ್ನ ಮುಂಗಾರು ಆರಂಭವಾಗಿದ್ದು, ಆರಂಭದಿಂದಲೇ ಉತ್ತಮ ಮಳೆಯಾಗುತ್ತಿರುವು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ಧತೆ ಮಾಡಿಕೊಳ್ಳಲು ಅನುಕೂಲಕರವಾಗಿದೆ. ಅಲ್ಲದೆ, ಕೆರೆಕಟ್ಟೆ, ನದಿಗಳನ್ನು ನೀರು ಬರುತ್ತಿರುವುದು ಮತ್ತಷ್ಟು ಸಮಾಧಾನ ತಂದಂತಾಗಿದೆ.
|
| 7 |
+
ಹವಾಮಾನ ಮುನ್ಸೂಚನೆ ಪ್ರಕಾರ, ಈ ಬಾರಿ ವಾಡಿಕೆ ಪ್ರಮಾಣದ ಮಳೆಯಾಗಲಿದೆ. ಅದಕ್ಕೆ ಪೂರಕವಾಗಿ ಕಳೆದ 2 ವಾರಗಳಿಂದಲೂ ರಾಜ್ಯಾದ್ಯಂತೆ ಉತ್ತಮ ಮಳೆಯಾಗುತ್ತಿದೆ.
|
eesanje/url_46_115_12.txt
ADDED
|
@@ -0,0 +1,3 @@
|
|
|
|
|
|
|
|
|
|
|
|
|
| 1 |
+
ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿದ ಶಾಸಕ ಗೋಪಾಲಯ್ಯ
|
| 2 |
+
ಬೆಂಗಳೂರು, ಜೂ.9- ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಕೆಎಂ ಡಬ್ಲ್ಯೂಎ ವಿದ್ಯಾನಿಕೇತನ ಮತ್ತು ಪಿಯು ಕಾಲೇಜ್ ಹಾಗೂ ಸಪ್ತಗಿರಿ ಸೂಪರ್ ಸ್ಪೆಷಲಿಟಿ ಹಾಸ್ಪಿಟಲ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಸಾನೆಟೇರಿಯಲ್ ,ಸ್ಪಂದನ ಸ್ಪರ್ಶ ಹಾಸ್ಪಿಟಲ್ ಯಶವಂತಪುರ, ಕೆಎಲ್ಎ ಡೆಂಟಲ್ ಕಾಲೇಜ್ ಇವರ ಸಹಯೋಗದೊಂದಿಗೆ ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯನವರು ಉದ್ಘಾಟನೆ ನಡೆಸಿದರು
|
| 3 |
+
ಈ ಸಂದರ್ಭದಲ್ಲಿ ಲಯನ್ಸ್ ಮನೋಜ್ ಕುಮಾರ್, ಖ್ಯಾತ ಚಲನಚಿತ್ರ ನಟ ಗಣೇಶ್, ವೆಂಕಟೇಶ್ ಮೂರ್ತಿ, ಲಯನ್ ಸುರೇಶ್ ಕೆ ಎಸ್ ಆರ್ ಗೋರ್ಪಡೆ, ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳು ಮತ್ತು ಪೋಷಕರು ಸ್ಥಳೀಯ ಜನರು ಭಾಗವಹಿಸಿದ್ದ
|
eesanje/url_46_115_2.txt
ADDED
|
@@ -0,0 +1,7 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಕಲ್ಪತರು ನಾಡಲ್ಲಿ ಹೊರಗಿನವರು ಗೆಲ್ಲಲ್ಲ ಎಂಬುದನ್ನು ಸುಳ್ಳಾಗಿಸಿದ ವಿ.ಸೋಮಣ್ಣ
|
| 2 |
+
ತುಮಕೂರು,ಜೂ.10-ಕಲ್ಪತರು ನಾಡಿಗೆ ಹೊರಗಿನ ಬಂದು ಗೆದ್ದವರಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಿ.ಸೋಮಣ್ಣ ಅವರು ಅದನ್ನು ಸುಳ್ಳು ಮಾಡಿ ತೋರಿಸಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಹಾಗೂ ವರುಣ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರೂ ತಮ ಛಲ ಬಿಡದೆ ಎದೆಗುಂದದೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾಗಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
|
| 3 |
+
ತುಮಕೂರಿಗೂ ಹಾಗೂ ಸೋಮಣ್ಣನವರಿಗೂ ಮೊದಲಿನಿಂದಲೂ ಅವಿನಾಭಾವ ಸಂಬಂಧ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ವರಿಷ್ಠರ ತೀರ್ಮಾನದಂತೆ ಕಣಕ್ಕಿಳಿದು ಜಿಲ್ಲೆಯ ಜನರ ಮನಗೆದ್ದಿದ್ದಾರೆ. ಇಲ್ಲಿಯವರೆಗೂ ಕಲ್ಪತರು ನಾಡಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಸೋಮಣ್ಣನವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ಜಿಲ್ಲೆಗೆ ಹೆಮೆಯ ವಿಷಯ.
|
| 4 |
+
ಈ ಹಿಂದೆ ಮಲ್ಲಿಕಾರ್ಜುನಯ್ಯ ಅವರು ಡೆಪ್ಯೂಟಿ ಸ್ಪೀಕರ್ ಆಗಿದ್ದರು. ಅದಾದ ಬಳಿಕ ಯಾರೊಬ್ಬರಿಗೂ ಕೇಂದ್ರದಲ್ಲಿ ದೊಡ್ಡ ಹುದ್ದೆ ಸಿಕ್ಕಿರಲಿಲ್ಲ. ಆದರೆ ಈಗ ಸೋಮಣ್ಣ ಅವರಿಗೆ ಸಿಕ್ಕಂತಾಗಿದೆ.
|
| 5 |
+
ತುಮಕೂರು ಸಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಸೋಮಣ್ಣ ಅವರು ಕೇಂದ್ರ ಸಚಿವರಾಗಿರುವುದರಿಂದ ಕೆಲಸದ ವೇಗ ಮತ್ತಷ್ಟು ಹೆಚ್ಚಲಿದೆ ಎಂಬ ದೊಡ್ಡ ಮಟ್ಟದ ನಿರೀಕ್ಷೆಗಳು ಜಿಲ್ಲೆಯ ಜನರಲ್ಲಿದೆ.
|
| 6 |
+
ರೈಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಇದೀಗ ಅವುಗಳಿಗೆ ಟೇಕ್ಆಫ್ ಅಗಲಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸಿದರೆ ಜಿಲ್ಲೆಯನ್ನು ಎರಡನೇ ಕಾಶಿ ಮಾಡುತ್ತೇನೆಂದು ಹೇಳಿದ್ದರು. ಇದೀಗ ಕೇಂದ್ರ ಸಚಿವ ಸ್ಥಾನ ಕೂಡ ಸಿಕ್ಕಿದ್ದು ಅವರ ಆಲೋಚನೆಗೆ ದೊಡ್ಡಮಟ್ಟದ ಇಂಬು ಕೊಟ್ಟಂತಾಗಿದೆ.ರಾಜಧಾನಿಗೆ ಉಪನಗರದಂತಿರುವ ತುಮಕೂರು ಚಿತ್ರಣ ಇನ್ನೂ ಮುಂದಿನ ದಿನಗಳಲ್ಲಿ ಬದಲಾಗುವ ಸಾಧ್ಯತೆಯಿದೆ.
|
| 7 |
+
ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ :ತುಮಕೂರು ಕ್ಷೇತ್ರದಿಂದ ಸ್ಪರ್ಽಸಿ ಗೆದ್ದು ಕೇಂದ್ರಸಚಿವರಾಗುತ್ತಿರುವ ಕ್ಷಣಗಳನ್ನು ಕಣ್ಣು ತುಂಬಿಕೊಳ್ಳಲು ತುಮಕೂರಿನ ಭದ್ರಮ ಕಲ್ಯಾಣ ಮಂಟಪದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎಲ್ ಇ ಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
|
eesanje/url_46_115_3.txt
ADDED
|
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಮಕ್ಕಳ ಮಾರಾಟ ಜಾಲ ಬೇಧಿಸಿದ ಪೊಲೀಸರು : ವೈದ್ಯ ಅಬ್ದುಲ್ ಸೇರಿ 5 ಮಂದಿ ಖಾಕಿ ಬಲೆಗೆ
|
| 2 |
+
ಬೆಳಗಾವಿ, ಜೂ.10-ಮಕ್ಕಳ ಮಾರಾಟ ಜಾಲವನ್ನು ಬಯಲಿಗೆಳೆದಿರುವ ಮಾಳಮಾರುತಿ ಠಾಣೆ ಪೊಲೀಸರು ಈ ಜಾಲದ ಕಿಂಗ್ಪಿನ್ ವೈದ್ಯ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.ಕಿತ್ತೂರು ಮೂಲದ ಕಿಂಗ್ಪಿನ್, ಆರ್.ಎಂ.ಪಿ. ವೈದ್ಯ ಡಾ. ಅಬ್ದುಲ್ ಗಫಾರ್ ಖಾನ್, ನೇಗಿನಹಾಳ ಗ್ರಾಮದ ಮಹಾದೇವಿ ಜೈನ್, ಚಂದನ್ ಸುಭೇದಾರ್, ಪವಿತ್ರಾ ಮತ್ತು ಪ್ರವೀಣ ಬಂಧಿತ ಆರೋಪಿಗಳು.
|
| 3 |
+
ಮಕ್ಕಳ ಮಾರಾಟ ಜಾಲ ನಗರದಲ್ಲಿ ಸಕ್ರಿಯವಾಗಿರುವ ಮಾಹಿತಿ ಆಧರಿಸಿ ಬೆನ್ನಿತ್ತಿದ್ದ ಪೊಲೀಸರಿಗೆ ಈ ಸಂಘಟಿತ ಜಾಲ ಪತ್ತೆಯಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜಕುಮಾರ ಸಿಂಗಪ್ಪ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವೈದ್ಯ ಅಬ್ದುಲ್ ಸೇರಿ ಐದು ಮಂದಿಯ ತಂಡವನ್ನು ಬಂಧಿಸಿದೆ.
|
| 4 |
+
ಮೂಲತಃ ಸವದತ್ತಿಯ ವೈದ್ಯ, ಚೆನ್ನಮ ಕಿತ್ತೂರಿನ ಸೋಮವಾರ ಪೇಟೆಯಲ್ಲಿ ನೆಲೆಸಿರುವ ಡಾ.ಅಬ್ದುಲ್ ಗಫಾರ್ ಖಾನ್ನಿಂದ 60 ಸಾವಿರಕ್ಕೆ ಮಗು ಖರೀದಿಸಿ ಬಳಿಕ ಬೆಳಗಾವಿಯಲ್ಲಿ ಸುಮಾರು. 1.40ಲಕ್ಷಕ್ಕೆ ಮಾರುತ್ತಿದ್ದಾಗ ಮಹಿಳೆಯನ್ನು ಬಲೆಗೆ ಬೀಳಿಸಿಕೊಂಡು ನಂತರ ವೈದ್ಯ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
|
| 5 |
+
ಪೊಲೀಸ್ ಆಯುಕ್ತರಾದ ಡಾ.ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಪಿ. ವಿ. ಸ್ನೇಹಾ ಮಾರ್ಗದರ್ಶನದಲ್ಲಿ ಇನ್್ಸಪೆಕ್ಟರ್ ಜೆ. ಎಂ. ಕಾಲಿಮಿರ್ಚಿ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
|
| 6 |
+
ಮಕ್ಕಳ ಮಾರಾಟ ಜಾಲದ ತಂಡ 60 ಸಾವಿರದಿಂದ 1.50 ಲಕ್ಷಕ್ಕೆ ಮಗುವನ್ನು ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ.ಪ್ರಕರಣ ಬಯಲಿಗೆ: ಆರೋಪಿ ಮಹದೇವಿ 60 ಸಾವಿರ ಹಣ ಕೊಟ್ಟು ವೈದ್ಯ ಅಬ್ದುಲ್ ಗಫಾರ್ನಿಂದ 30 ದಿನದ ಹೆಣ್ಣು ಮಗುವನ್ನು ಖರೀದಿಸಿದ್ದು, ಆ ಮಗುವನ್ನು ಬೆಳಗಾವಿಯಲ್ಲಿ 1.40 ಲಕ್ಷಕ್ಕೆ ಮಾರಾಟ ಮಾಡಲು ಉದ್ದೇಶಿಸಿದ್ದ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರಾದ ರಾಜಕುಮಾರ ಸಿಂಗಪ್ಪ ರಾಠೋಡ ಎಂಬುವವರಿಗೆ ಮಾಹಿತಿ ಲಭಿಸಿದೆ.
|
| 7 |
+
ಈ ಬಗ್ಗೆ ಅವರು ಮಾಳಮಾರುತಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಜಾಲದ ಬಗ್ಗೆ ರಹಸ್ಯ ಕಾರ್ಯಾಚರಣೆ ನಡೆಸಿ ಮಹದೇವಿಯನ್ನು ಸಂಪರ್ಕಿಸಿ ಮಗುವನ್ನು ಖರೀದಿಸುವುದಾಗಿ ನಂಬಿಸಿದ್ದಾರೆ.ಮಹದೇವಿ ಮಗುವನ್ನು ಮಾರಾಟ ಮಾಡಲು ಬಂದಾಗ ಆಕೆಯನ್ನು ಬಲೆಗೆ ಬೀಳಿಸಿಕೊಂಡು ಹೆಣ್ಣು ಮಗುವನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
|
| 8 |
+
ನಂತರ ಮಹದೇವಿಯನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ವೈದ್ಯನ ಬಗ್ಗೆ ಬಾಯಿಬಿಟ್ಟಿದ್ದಾರೆ.ಇನ್್ಸಪೆಕ್ಟರ್ ಕಾಲಿಮಿರ್ಚಿ ಅವರ ಮಾರ್ಗದರ್ಶನದಲ್ಲಿ ಸಬ್ಇನ್್ಸ ಪೆಕ್ಟರ್ ರಾಮಗೌಡ ಸಂಕನಾಳ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ವೈ��್ಯ ಡಾ.ಅಬ್ದುಲ್ ಗಪಾರ್ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
|
| 9 |
+
ಅಮಾಯಕರೇ ಟಾರ್ಗೆಟ್: ಮದುವೆಗೂ ಮುನ್ನ ಗರ್ಭಿಣಿಯಾಗುವ ಯುವತಿಯರು ಅಬಾಷನ್ಗಾಗಿ ಈ ವೈದ್ಯನ ಬಳಿ ಬಂದಾಗ ಆತ ತಾನೇ ಮಗುವನ್ನು ಸಾಕುವುದಾಗಿ ಹೇಳಿ ಅವರ ಮನವೊಲಿಸಿ ಎಂಟು ತಿಂಗಳು ತುಂಬಿದ ಬಳಿಕ ಬರುವಂತೆ ಹೇಳಿ ಕಳುಹಿಸುತ್ತಿದ್ದನು.ನಂತರ ಆಪರೇಷನ್ ಮಾಡಿ ಮಗುವನ್ನು ತೆಗೆದು ಅವರಿಗೆ 20 ಸಾವಿರ ಹಣ ಕೊಟ್ಟು ಮಗುವನ್ನು ತಾನೇ ಪಡೆದು ಮೂರ್ನಾಲ್ಕು ತಿಂಗಳ ಕಾಲ ಮಗುವನ್ನು ಪೋಷಣೆ ಮಾಡಿ ನಂತರ ಮಕ್ಕಳಿಲ್ಲದವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
|
eesanje/url_46_115_4.txt
ADDED
|
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಜೂ.25ರಿಂದ ಕೆಎಸ್ಆರ್ಟಿಸಿಯಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ ವ್ಯವಸ್ಥೆ ಜಾರಿ
|
| 2 |
+
ಬೆಂಗಳೂರು,ಜೂ.10– ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುತ್ತಿದ್ದು, ಈ ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿಸುವ ಅವಕಾಶ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಜೂನ್ 25ರಿಂದ ನಾಲ್ಕು ಡಿಪೋಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ (ಇಟಿಎಂ) ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ.
|
| 3 |
+
ಎಲ್ಲಾ ಕಂಡಕ್ಟರ್ಗಳಿಗೆ ತರಬೇತಿ ನೀಡಿದ ನಂತರ ಕೆಲವೇ ವಾರಗಳಲ್ಲಿ ಎಲ್ಲಾ ಬಸ್ಗಳಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ. ಸಾರಿಗೆ ನಿಗಮವು ಪ್ರತಿ ಸಾಧನಕ್ಕೆ ತಿಂಗಳಿಗೆ 645 ರೂ. ಬಾಡಿಗೆಯಂತೆ 10,245 ಇಟಿಎಂಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
|
| 4 |
+
ಕೆಎಸ್ಆರ್ಟಿಸಿ ಎಂ.ಡಿ.ಅನ್ಬುಕುಮಾರ್ ಮಾತನಾಡಿ, ಪ್ರಾಯೋಗಿಕ ಯೋಜನೆ ಯಶಸ್ವಿಯಾದ ಬಳಿಕ ಈ ತಿಂಗಳ ಅಂತ್ಯದಲ್ಲಿ ಎಲ್ಲಾ ಬಸ್ಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ ನಿರ್ವಾಹಕರು ಚಿಲ್ಲರೆ ನೀಡಲಿಲ್ಲ ಎಂಬ ದೂರುಗಳು ಕೂಡ ಕಡಿಮೆಯಾಗಲಿದೆ. ಪ್ರಯಾಣಿಕರು ಮತ್ತು ಅವರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಪಾವತಿಸಿ, ಟಿಕೆಟ್ ಖರೀದಿಸಬಹುದಾಗಿದೆ ಎಂದು ಹೇಳಿದ್ದಾರೆ.
|
| 5 |
+
ಇದಕ್ಕೆ ಐದು ವರ್ಷ ಕಾಲದ ಒಪ್ಪಿಗೆ ನೀಡಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಂಪನಿಯು ಇಟಿಎಂಗಳಿಗೆ ಬ್ಯಾಕೆಂಡ್ ಮತ್ತು ಇಂರ್ಟೇಸ್ ಸಾಫ್ವೇರ್ ಅನ್ನು ಒದಗಿಸುತ್ತದೆ. ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಯಂತ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
| 6 |
+
ಕಂಡಕ್ಟರ್ಗಳು ಆಗಮನ ಮತ್ತು ನಿರ್ಗಮನ ನಿಲ್ದಾಣಗಳನ್ನು ಆಯ್ಕೆ ಮಾಡಬೇಕು, ನಂತರ ಪ್ರಯಾಣಿಕರ ಸಂಖ್ಯೆ, ಪಾವತಿ ವಿಧಾನವನ್ನು ಆರಿಸಬೇಕು. ಬಳಿಕ ದರ ಸ್ವಯಂಚಾಲಿತವಾಗಿ ಲೆಕ್ಕ ಹಾಕಲಾಗುತ್ತದೆ. ಪ್ರಯಾಣಿಕರು ಹಣ ಪಾವತಿಸಿದ ನಂತರ ಟಿಕೆಟ್ ಪಡೆಯಬಹುದು. ಯಂತ್ರಗಳನ್ನು ಲಾಕ್ ಮಾಡಬಹುದು ಮತ್ತು ಅವುಗಳನ್ನು ಕದ್ದರೆ, ಅವುಗಳನ್ನು ಸಾರ್ಟ್ಫೋನ್ನಂತೆ ಟ್ರ್ಯಾಕ್ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
|
| 7 |
+
ಹ್ಯಾಂಡ್ಹೆಲ್ಡ್ ಇಟಿಎಂಯಲ್ಲಿ ಸಾಧನವಿರಲಿದ್ದು, ಇ-ಪಾಸ್ಗಳಂತಹ ಸಾರ್ಟ್ಕಾರ್ಡ್ಗಳನ್ನು ಸ್ಕ್ಯಾನ್ ಮಾಡಲು ಮತ್ತು ಮೌಲ್ಯೀಕರಿಸಲು ಕ್ಯಾಮರಾ ಕೂಡ ಇದರಲ್ಲಿರುತ್ತದೆ. ಒಂದು ವೇಳೆ ಸರ್ಕಾರವು ಶಕ್ತಿ ಯೋಜನೆಯ ಫಲಾನುಭವಿಗಳಿಗೆ ಸಾರ್ಟ್ ಕಾರ್ಡ್ಗಳನ್ನು ನೀಡಿದರೆ, ಅದನ್ನೂ ಅಳವಡಿಸಿಕೊಳ್ಳಲು ಈ ಯಂತ್ರಗಳಲ್ಲಿ ಅವಕಾಶ ಇರುತ್ತದೆ.
|
| 8 |
+
ಆನ್ಲೈನ್ ಟಿಕೆಟ್ ಕಾಯ್ದಿರಿಸುವಿಕೆ ವ್ಯವಸ್ಥೆಗಳನ್ನ��� ಟ್ರ್ಯಾಕಿಂಗ್ ಮಾಡುವುದು ಮತ್ತು ಖಾಲಿ ಇರುವ ಆಸನಗಳ ಆಧಾರದ ಮೇಲೆ ಟಿಕೆಟ್ಗಳನ್ನು ನೀಡುವುದು, ಸ್ಥಳ ಟ್ರ್ಯಾಕಿಂಗ್ ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳಂತಹ ಹಲವು ವೈಶಿಷ್ಟ್ಯಗಳಿವೆ. ಆದರೆ ಅವುಗಳನ್ನು ತಕ್ಷಣವೇ ಸೇರಿಸಲು ಸಾಧ್ಯವಾಗುವುದಿಲ್ಲ. ಹಂತ ಹಂತದಲ್ಲಿ ಎಲ್ಲವನ್ನೂ ಅಳವಡಿಸಿಕೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
|
eesanje/url_46_115_5.txt
ADDED
|
@@ -0,0 +1,6 @@
|
|
|
|
|
|
|
|
|
|
|
|
|
|
|
|
|
|
|
|
|
|
| 1 |
+
ಆಪ್ತ ಸಹಾಯಕನಿಂದಲೇ ಅನ್ನದಾನೇಶ್ವರ ಮಠದ ಸ್ವಾಮೀಜಿಯ ಬರ್ಬರ ಹತ್ಯೆ
|
| 2 |
+
ಮೈಸೂರು, ಜೂ.10-ಆಪ್ತ ಸಹಾಯಕನೇ ಅನ್ನದಾನೇಶ್ವರ ಮಠದ ಸ್ವಾಮೀಜಿಯವರನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ನಜರ್ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಶಿವಾನಂದ ಸ್ವಾಮೀಜಿ(90) ಕೊಲೆಯಾದ ಹಿರಿಯ ಶ್ರೀಗಳು.
|
| 3 |
+
ಕಳೆದ ಹಲವಾರು ವರ್ಷಗಳಿಂದ ರವಿ ಎಂಬಾತ ಸ್ವಾಮೀಜಿಯವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಶ್ರೀಗಳ ಕೆಲಸ ಕಾರ್ಯಗಳಿಗೆ ನೆರವಾಗಿದ್ದ ಸಿದ್ದಾರ್ಥ ನಗರದಲ್ಲಿರುವ ಮಠದಲ್ಲೇ ನೆಲೆಸಿದ್ದು, ಶ್ರೀಗಳ ಯೋಗಕ್ಷೇಮ, ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದ.
|
| 4 |
+
ಆದರೆ ಇದ್ದಕ್ಕಿದ್ದಂತೆ ಶ್ರೀಗಳನ್ನು ಕೊಲೆ ಮಾಡಿರುವುದು ಸಾಂಸ್ಕೃತಿಕ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. ಶ್ರೀಗಳು ಮಲಗಿದ್ದಾಗ ಕೋಣೆಗೆ ಬಂದ ರವಿ(60) ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
|
| 5 |
+
ಶ್ರೀಗಳಿಗೆ ಈಗಾಗಲೇ ವಯಸ್ಸಾಗಿದ್ದು, ಇಂತಹ ಸಮಯದಲ್ಲಿ ಯಾಕೆ ಕೊಲೆ ಮಾಡಿದ್ದಾನೆ. ಇದರ ಹಿಂದಿರುವ ಉದ್ದೇಶವೇನು ಎಂಬುವುದು ತನಿಖೆಯಿಂದ ತಿಳಿದುಬರಬೇಕಿದೆ.ಸುದ್ದಿ ತಿಳಿಯುತ್ತಿದ್ದಂತೆ ನಜರ್ಬಾದ್ ಠಾಣೆ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗಾಗಿ ಬಲೆಬೀಸಿದ್ದಾರೆ.
|
| 6 |
+
ಶ್ರೀಗಳಿಗೆ ನಗರದಲ್ಲಿ ಅಪಾರ ಭಕ್ತ ಸಮೂಹವಿದ್ದು, ಈ ಕೃತ್ಯದಿಂದ ಬೆಚ್ಚಿಬಿದ್ದಿದ್ದಾರೆ. ಆತಂಕದಿಂದ ಮಠಕ್ಕೆ ಭಕ್ತರ ದಂಡೆ ಹರಿದುಬಂದಿತ್ತು.
|