| ಕೆಟ್ಟ ಕಾಲದಲ್ಲಿ ನಿಮ್ಮವರು ಯಾರು ಅಂತ ಗೊತ್ತಾಗುತ್ತೆ...'! ಬಿಜೆಪಿ ವಿರುದ್ಧ ವಿನೇಶ್ ಫೋಗಟ್ ವಾಗ್ದಾಳಿ ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ. ನವದೆಹಲಿ:ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಸೇರಿದ ತಕ್ಷಣ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತೇನೆ ಎಂದು ನಾನು ಭಾವಿಸುತ್ತೇನೆ.ಕಾಂಗ್ರೆಸ್ ಗೆ ಹೃತ್ಪೂರ್ವಕ ಧನ್ಯವಾದಗಳು.ಕಷ್ಟಕಾಲದಲ್ಲಿ ಮಾತ್ರ ನಮ್ಮವರು ಯಾರು ಎಂಬುದು ಗೊತ್ತಾಗುತ್ತದೆ.ಮಹಿಳಾ ಹಕ್ಕುಗಳಿಗಾಗಿ ಬೀದಿಗಿಳಿದು ಸಂಸತ್ತಿನವರೆಗೂ ಹೋರಾಡಲು ಸಿದ್ಧವಾಗಿರುವ ಪಕ್ಷದ ಭಾಗವಾಗಿದ್ದೇನೆ ಎಂಬುದಕ್ಕೆ ಇಂದು ನಾನು ಹೆಮ್ಮೆಪಡುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದನ್ನೂ ಓದಿ: ಬಿಜೆಪಿ ಹೊರತುಪಡಿಸಿ ಎಲ್ಲರೂ ಬೆಂಬಲಿಸಿದ್ದಾರೆ: ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ.ಹೋರಾಟ ಇನ್ನೂ ಮುಂದುವರೆದಿದ್ದು, ಅದನ್ನೂ ಗೆಲ್ಲುತ್ತೇವೆ. ಅದರಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿದೆ, ಅದರಲ್ಲಿಯೂ ನಾವು ಗೆಲ್ಲುತ್ತೇವೆ ನಾವು ಸಹಿಸಿಕೊಂಡದ್ದನ್ನು ಆಟಗಾರರು ಸಹಿಸಿಕೊಳ್ಳಬಾರದು ಎಂದು ನಾನು ಬಯಸುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದಕ್ಕೂ ಮುನ್ನ ಫೋಗಟ್ ಮತ್ತು ಪುನಿಯಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರನ್ನು 10 ರಾಜಾಜಿ ಮಾರ್ಗದಲ್ಲಿ ಭೇಟಿ ಮಾಡಿದ್ದರು.ಸದ್ಯ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರು ಹರಿಯಾಣ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವ ನಿರೀಕ್ಷೆ ಇದೆ. ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |