NLP_Assignment_1 / Kenda Sampige /article_113.txt
CoolCoder44's picture
Upload folder using huggingface_hub
7f4117a verified
byಸಂಗೀತ ರವಿರಾಜ್‌ ಚೆಂಬು|Mar 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments
ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ.ಕೆ. ಎನ್. ಲಾವಣ್ಯಪ್ರಭ ಕವನ ಸಂಕಲನ “ಸ್ಪರ್ಶ ಶಿಲೆ”ಯ ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ
byದಯಾನಂದ ಸಾಲ್ಯಾನ್|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.ಡಾ. ಕೆ. ರಘುನಾಥ್‌ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್‌ ಬರಹ
byಕೆಂಡಸಂಪಿಗೆ|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ
byಕೆಂಡಸಂಪಿಗೆ|Mar 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments
ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ‌ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು.ನಗೋಲತೆ ಬರೆದ “ಬೆದ್ಲು ಬದ್ಕು” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ
byಕೆಂಡಸಂಪಿಗೆ|Mar 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ.ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ವಿಜ್ಞಾನ ಲೇಖನಗಳ ಸಂಕಲನ “ಜೀವಿವಿಜ್ಞಾನ”ದಿಂದ ಆಯ್ದ ಲೇಖನ ನಿಮ್ಮ ಓದಿಗೆ
byಕೆಂಡಸಂಪಿಗೆ|Mar 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ.ಇಂದ್ರಕುಮಾರ್ ಎಚ್.ಬಿ. ಹೊಸ ಕಾದಂಬರಿ “ಎತ್ತರ”ದ ಕೆಲ ಪುಟಗಳು ನಿಮ್ಮ ಓದಿಗೆ
byಪ.ನಾ.ಹಳ್ಳಿ ಹರೀಶ್ ಕುಮಾರ್|Mar 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ “ನೋಟ್‌ಬುಕ್‌” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ
byಕೆಂಡಸಂಪಿಗೆ|Mar 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment
ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ.ನವೀನ ಗಂಗೋತ್ರಿ ಕಥಾಸಂಕಲನ “ಕಥಾಗತ”ಕ್ಕೆ ಸದ್ಯೋಜಾತ ಭಟ್ಟ ಬರೆದ ಮುನ್ನುಡಿ
byಕೆಂಡಸಂಪಿಗೆ|Mar 8, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments
ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ.ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ