| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. | |
| ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ | |
| ನಿಟ್ಟುಸಿರು ಬಿಟ್ಟಹಾಗೆ | |
| ಮುಸುಮುಸು ಅಳುವ ಗಾಳಿ. | |
| ಬಾಗಿಲಿಂದಾಚೆ ಅವನು ಹೋಗುತ್ತಾನೆ. | |
| ಮತ್ತದೇರೀತಿ; | |
| ಕತ್ತಲಾಗುತ್ತದೆ. | |
| ಎಂದಿನಂತೆ ಅಂದೂ, | |
| ಕೈತೋಟದ ಹೂಗಳರಳಿ, | |
| ಏನೋ ಹೊಸದು ಆಗೇಬಿಡುವುದೋ | |
| ಎಂಬಂತೆ ಕಾದು ಕೂರುತ್ತವೆ. | |
| ಮತ್ತೆ ಮಧ್ಯಾಹ್ನಾ; | |
| ಊಟ, ತಿಂಡಿ, ಚಹಾ…… | |
| ನೆನ್ನೆಯ ಹಾಗೇ ಕಂಡರೂ | |
| ’ಇಂದು’ ನೆನ್ನೆಯಲ್ಲವೆಂಬಷ್ಟೇ ವ್ಯತ್ಯಾಸ. | |
| ಸಂಜೆಯಾಗುತ್ತಲೇ, | |
| ಸುಟ್ಟಬೊಬ್ಬೆಯ ಹಾಗೆ ಸೂರ್ಯ | |
| ನಿಟ್ಟುಸಿರಿಟ್ಟ ಹಾಗೆ ಗಾಳಿ | |
| ಅವನು ಮಲಗಿದ್ದಾನೆ ಮಂಚದ ಮೇಲೆ | |
| ಮರದ ಬೊಂಬೆಯ ಹಾಗೆ. | |
| ಬಾಗಿಲಿಂದಾಚೆ ಅವಳು ಹೋಗುತ್ತಾಳೆ | |
| ಕತ್ತಲಾಗುತ್ತದೆ. | |
| ***** | |
| ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […] | |
| ೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […] | |
| ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |