| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ೧ | |
| ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ | |
| ಆಶೆ ಬೀಜಗಳೆನಿತೊ ಮಡಿಲೊಳಿರಿಸಿ | |
| ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ | |
| ಹೊತ್ತು ನಿಂತಿಹಳಮಿತ ವೃಕ್ಷರಾಶಿ. | |
| ೨ | |
| ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು | |
| ಹುಣಿಸೆ ಹುಲುಗಲ ತಾಳೆ ಬಾಳೆಯಂತೆ | |
| ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ | |
| ಸೀತಾಳಿ ಬಕುಳ ಸಂಪಿಗೆಗಳಂತೆ! | |
| ೩ | |
| ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ | |
| ತೊಟ್ಟಿಲವ ತೂಗಿ ಹೆಸರಿಟ್ಟರೇನೊ! | |
| ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ | |
| ಜುಮ್ಮೆಂದು ಮನಸೋತು ಬಿಟ್ಟರೇನೊ! | |
| ೪ | |
| ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯು | |
| ಅಲ್ಲಿ ಹಣ್ಣಿನ ಗೊನೆಗೆ ಗಿಣಿಗಳೆರಡು | |
| ಸೀಳುದಾರಿಯ ಬದಿಗೆ ಸಾಲು ಮರಗಳ ನೆಳಲು | |
| ಗಾಳಿಯೂದುವ ಕೊಳಲು-ಹಕ್ಕಿ ಹಾಡು, | |
| ೫ | |
| ಜಗದ ನೂರೆಂಟು ತರ ಕಲಹ ಕಂಟಕಗಳಿಗೆ | |
| ತಾವು ಕಾರಣವಲ್ಲವೆಂಬ ಹಾಗೆ | |
| ಹುಲ್ಲು ಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ | |
| ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ, | |
| ೬ | |
| ನಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ | |
| ದೂರ ದೂರದ ತನ್ನ ಮನೆಯ ನೆನೆದು, | |
| ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು | |
| ಎಲ್ಲ ಬಲ್ಲವರಂತೆ ಸುಮ್ಮನಿಹುದು. | |
| ೭ | |
| ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ | |
| ಮರದ ತಣ್ಣೆಳಲೊಂದೆ ನಿನಗಾಸರು- | |
| ಇಲ್ಲಿ ದಣಿವಾರಿ ಮನ ಶಾಂತಿ ಸಂತಸ ಪಡೆಯೆ | |
| ಮುಂದೆ ನಡೆಯುವ ದಾರಿ ಎನಿತು ಹಗುರು! | |
| ೮ | |
| ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು | |
| ಅದನು ತಣಿ ಹೀರದೆಯೆ ಸಾಗಬಹುದೆ? | |
| ಯಾರಿಗೀ ಸುಂದರತೆ? ಯಾರಿಗೀ ಪರವಶತೆ? | |
| ಯಾರ ಸುಖಕೀ ಸೃಷ್ಟಿ ನಿನಗಲ್ಲದೆ? | |
| ***** | |
| ‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] | |
| ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] | |
| (ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […] | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |