NLP_Assignment_1 / eesanje /url_46_100_10.txt
CoolCoder44's picture
efe37858b586a9a048bc0ecc57a15bf9f7189f016b8fcfa2006a47467850c382
c188c15 verified
raw
history blame
4.5 kB
“ದಮ್ಮು ಮತ್ತು ತಾಕತ್ತು ಇದ್ದರೆ ಜಿ.ಪಂ, ತಾ.ಪಂ ಮತ್ತು ಬಿಬಿಎಂಪಿ ಚುನಾವಣೆ ದಿನಾಂಕ ಘೋಷಿಸಿ”
ಬೆಂಗಳೂರು,ಜೂ.22-ಕಾಂಗ್ರೆಸ್‌‍ ಪಕ್ಷದವರಿಗೆ ದಮ್ಮು ಮತ್ತು ತಾಕತ್ತಿದ್ದರೆ ಜಿಲ್ಲಾ, ತಾಲ್ಲೂಕು ಪಂಚಾಯತ್‌ ಮತ್ತು ಬಿಬಿಎಂಪಿ ಚುನಾವಣೆ ದಿನಾಂಕವನ್ನು ತಕ್ಷಣವೇ ಘೋಷಣೆ ಮಾಡಲಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಪಕ್ಷದ ವತಿಯಿಂದ ಹಮಿಕೊಂಡಿದ್ದ ನೂತನ ಸಂಸದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿಗಳಿಂದ ರಾಜ್ಯದ ಜನತೆ ಸಂತೃಪ್ತಿಯಾಗಿದ್ದಾರೆಂದು ಕಾಂಗ್ರೆಸ್‌‍ ನಾಯಕರು ಬೊಗಳೆ ಬಿಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಿಮ ಹಣೆಬರಹ ಏನೆಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವೇದಿಕೆ ಮೂಲಕ ಬಹಿರಂಗ ಸವಾಲು ಹಾಕುತ್ತೇನೆ. ನಿಮಗೆ ದಮು ಮತ್ತು ತಾಕಿತ್ತಿದ್ದರೆ ಮುಂದೂಡಲ್ಪಟ್ಟಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ ಹಾಗೂ ಬಿಬಿಎಂಪಿ ಚುನಾವಣೆಯನ್ನು ನಡೆಸಬೇಕು. ಅವಾಗ ನಿಮ ಬಂಡವಾಳ ಗೊತ್ತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ನಮ ಮೈತ್ರಿ ಮುಂದುವರೆಯಲಿದೆ. ಇಲ್ಲೂ ಕೂಡ ನಾವು ಗೆದ್ದು ತೋರಿಸಬೇಕು. ಈಗ ಗ್ಯಾರಂಟಿಗಳು ಇಲ್ಲ. ಅದು ಬೋಗಸ್‌‍ ಗ್ಯಾರಂಟಿ. ಬೆಲೆ ಏರಿಕೆಯಿಂದಲೇ ಕಾಂಗ್ರೆಸ್‌‍ನವರನ್ನು ನಾವು ಮನೆಗೆ ಕಳುಹಿಸಿಕೊಡಬೇಕೆಂದು ಕರೆ ಕೊಟ್ಟರು.
ಬಿಜೆಪಿ-ಜೆಡಿಎಸ್‌‍ ಮೈತ್ರಿ ಕಾಂಗ್ರೆಸ್‌‍ಗೆ ನಡುಕ ಹುಟ್ಟಿಸಿದೆ. ಅದು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಕಸದ ಬುಟ್ಟಿ ಸೇರಿದೆ. ಲೋಕಸಭೆಯಲ್ಲಿ ಜನ ಕಾಂಗ್ರೆಸ್‌‍ ಅನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ಹೇಳಿದರು.ಕಾಂಗ್ರೆಸ್‌‍ ಇನ್ನು ಮುಂದೆ ಬೆಲೆ ಏರಿಕೆ ಯುಗವನ್ನೇ ಪ್ರಾರಂಭ ಮಾಡಿದ್ದಾರೆ. ಕರ್ನಾಟಕದ ಕಾಂಗ್ರೆಸ್‌‍ ನಾಯಕರ ಮುಖ ನೋಡಿ ಕೇಂದ್ರದಲ್ಲಿ ದುಡ್ಡು ಕೊಡುವ ಪರಿಸ್ಥಿತಿ ಇಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮುಖ ನೋಡಿದರೆ ಯಾರೂ ದುಡ್ಡು ಕೊಡುವುದಿಲ್ಲ ಎಂದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬಿಜೆಪಿ ಜೆಡಿಎಸ್‌‍ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ ದ ಮೂಲಕ ಕೇಂದ್ರದ ಗಮನಕ್ಕೆ ತಂದು ರಾಜ್ಯದ ಹಿತ ಕಾಪಾಡಬೇಕಿದೆ. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಇದೆ ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ ಎಂದು ಹೇಳಿದರು.