| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ಸಿಟ್ಟೋ ಸೆಡವೋ ಹಠವೋ ಜ್ವರವೋ | |
| ತನಗೇ ತಿಳಿಯದೇ ಧುಮುಗುಡುವ ಸೂರ್ಯ, | |
| ಕರಗುವುದ ಮರೆತು ಬಿಳುಚು ಹೊಡೆದು | |
| ಹಿಂಜಿದ ಹತ್ತಿಯಂತಹ ಮೋಡಗಳು, | |
| ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, | |
| ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ… | |
| ಬಿರುಬೇಸಿಗೆಯ ನಡು ಮಧ್ಯಾಹ್ನಗಳು | |
| ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಚಿತೆ; | |
| ಇಂಥ ಮಧ್ಯಾಹ್ನ | |
| ಪುಟ್ಟ ಬೆರಳಲಿ ಬಾಗಿಲು ತೆರೆದು | |
| ಗೇಟು ಸಂಧಿಯಲಿ ತೂರಿಕೊಂಡು | |
| ಮಗುವೊಂದು ಓಡುತಿದೆ ರಸ್ತೆಯಲಿ | |
| ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು | |
| ಯಾವುದೋ ಕರೆಯ ಬೆನ್ನತ್ತಿದಂತೆ, | |
| ಮಗು ಎದುರು ಮನೆಯ ಬಾಗಿಲು ಬಡಿಯುತಿದೆ | |
| ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು.. | |
| ತೆಕ್ಕೆ ಬಡಿದ ಬಾಹುಗಳಲಿ | |
| ಪುಟ್ಟ ಮಗುವಿನ ಕೇಕೆ.. | |
| ಇಂಥ ಮಧ್ಯಾಹ್ನ | |
| ನನ್ನೊಳಗೆ ಬೆಂಕಿಹೂಗಳ ಅರಳಿಸಿ | |
| ತಟಸ್ಥ ನಿಂತ ಕೆಂಡಸಂಪಿಗೆ ಮರ | |
| ಧ್ಯಾನಿಸುತಿದೆ ಮಳೆಯ ಸಂಜೆಯನು, | |
| ಮಾಗಿಯ ಬೆಳಗನು, ಆಳದ ಮೌನವನು, | |
| ಅನವರತ ಕನವರಿಸುತಿದೆ | |
| ತುಕ್ಕು ಹಿಡಿದ ಗೇಟಿನ ಬಳಿ | |
| ಕೇಳಲಿರುವ ಅಂಚೆಯವನ ಕರೆಯನು. | |
| ***** | |
| ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] | |
| ೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] | |
| ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |