| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ಅವರು ಹೀಗಿರುವುದು ನಮ್ಮ ಅದೃಷ್ಟ, | |
| ಹೀಗಿರದೇ ಹಾಗೆ – | |
| ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! | |
| ಬೇಕಾದ್ದು ಮಾಡಬಹುದು | |
| ಎಂದೂ ಏನೂ ಅಂದಿಲ್ಲ. | |
| ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, | |
| ಪುರಸೊತ್ತ೦ತು ಮೊದಲೇ ಇಲ್ಲ. | |
| ನಮಗಂತೂ ಅವರ ಪಕ್ಕದಲ್ಲೇ ಜಾಗ. | |
| ಅತ್ತ ಮೇಜು, ಕುರ್ಚಿ, ಟಿವಿ; ಇತ್ತ ನಾವು! | |
| ಮತ್ತೆಲ್ಲ ಕಡೆ ರಾಶಿ ರಾಶಿ ಸಾಮಾನು. | |
| ಸಂಜೆಗೆ ತಂಗಲೊಂದು ಮನೆ, | |
| ರುಚಿಗೆ ತಕ್ಕ ಊಟ, ಮಲಗಲೊಂದಷ್ಟು ಜಾಗ… | |
| ಮೂಲಭೂತ ಬೇಕುಗಳಲ್ಲೇ ಸಂತೃಪ್ತ. | |
| ಸರ್ವೇಜನಾ ಸುಖಿನೋಭವಂತು! | |
| ಬುದ್ಧನ ಅಪರಾವತಾರ. | |
| ಆಸೆ ಇಲ್ಲ, ಅಹಂಕಾರವಿಲ್ಲ, ಕಾಮ ಮೋಹಗಳಿಲ್ಲ, | |
| ಈ ಇಲ್ಲಗಳ ಬಾಲಗೋಚಿ ಅಳೆದು ನೋಡಿದರೆ, | |
| ಕಡೆಗೆ ಏನೂ ಇಲ್ಲ. | |
| ಸ್ವಯಂಕೇಂದ್ರಿತ ಅಹುದುಗಳಿಗೆ ಅಹುದೆನ್ನವ | |
| ಕೂಪಮಂಡೂಕ. | |
| ಬಟ್ಟೆ, ಪಾತ್ರೆ, ಅಡಿಗೆ… | |
| ನಾವು ಮಾಡುವುದು ನಿತ್ಯಕರ್ಮ! | |
| ಹುಣ್ಣಿಮೆಗೋ ಅಮಾವಾಸ್ಯೆಗೋ | |
| ತಮ್ಮ ನಾಲಿಗೆ ರುಚಿಗೆ ತಾವು ಬೇಯಿಸಿಕೊಂಡದ್ದು | |
| ನಮಗೆ ಮಾಡಿದ ಉಪಕಾರ? | |
| ತಿಳಿದೇ ಇರಲಿಲ್ಲ ಇಂಥದ್ದನ್ನೆಲ್ಲಾ ಗಮನದಲ್ಲಿಡಬೇಕೆಂದು. | |
| ಅವರು ಹೀಗಿರುವುದು ನಮ್ಮ ಅದೃಷ್ಟ, | |
| ಹೀಗಿರದೇ “ಹಾಗೆ”- | |
| `ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! | |
| ಛೆ! | |
| ಎಷ್ಟು ದುರಹಂಕಾರ ನಮಗೆ!! | |
| ***** | |
| ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […] | |
| ೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] | |
| ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |